For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಿಂದ ಮಹಾ ನಟಿಯ ಮಹಾ ಆಸೆ ಈಡೇರಿತು

  |

  ತೆಲುಗು ನಟಿ ಕೀರ್ತಿ ಸುರೇಶ್ ಕನ್ನಡಕ್ಕೆ ಬರುತ್ತಾರೆ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಈ ಸುದ್ದಿಯ ನಡುವೆಯೇ ತಮಿಳಿನ ಹೊಸ ಸಿನಿಮಾವೊಂದರಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.

  ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ಮಹಾ ನಟಿ ಕೀರ್ತಿ ಸುರೇಶ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಕೀರ್ತಿ ಸುರೇಶ್ ವಿಷಯ ತಿಳಿಸಿದ್ದಾರೆ. ತಮ್ಮ ಚಿತ್ರ ಜೀವನದಲ್ಲಿ ಇದು ಮ್ಯಾಜಿಕಲ್ ಮೈಲಿಗಲ್ಲು ಎಂದು ವಿವರಿಸಿದ್ದಾರೆ.

  ರಜನಿಕಾಂತ್ ರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದು ತಮ್ಮ ಜೀವನದ ಮರೆಯಲಾಗದ ಅದ್ಭುತ ಕ್ಷಣ ಎಂದು ಕೀರ್ತಿ ಸುರೇಶ್ ಸಂತಸ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಅವಕಾಶ ನೀಡಿದ ನಿರ್ದೇಶಕ ಶಿವರಿಗೆ ಧನ್ಯವಾದ ತಿಳಿಸಿದ್ದಾರೆ. ಶಿವ ಈ ಹಿಂದೆ ಅಜಿತ್ ನಟನೆಯ 'ವಿಶ್ವಾಸಂ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

  ರಜನಿಕಾಂತ್ ನಟನೆಯ 168ನೇ ಸಿನಿಮಾದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ರಜನಿಕಾಂತ್ ಮಗಳ ಪಾತ್ರ ಕೀರ್ತಿ ಸುರೇಶ್ ನಿರ್ವಹಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ನಟಿ ಮೀನಾ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

  ಈ ಸಿನಿಮಾದ ಜೊತೆಗೆ ಆರು ಬೇರೆ ಬೇರೆ ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ. 2020 ರಲ್ಲಿ ಆ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

  English summary
  Keerthy Suresh will sharing screen space with Rajinikanth in thalaivar 168 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X