ಬಾಲ್ಯದಲ್ಲಿ ಲೈಂ*ಗಿಕ ದೌರ್ಜನ್ಯ, 18ಕ್ಕೆ ಮದುವೆ, ಗರ್ಭಪಾತ, ನಟನ ಜೊತೆ ಅಕ್ರಮ ಸಂಬಂಧ, ಮನೆಮುರುಕಿ ಹಣೆ ಪಟ್ಟಿ ; ಗಾಯಕಿ ಕಣ್ಣೀರು
ಸಂಸಾರದಲ್ಲಿ ಸಮರಸವಿದ್ದರೆ ಮಾತ್ರ ಹೊಂದಾಣಿಕೆ ಗಟ್ಟಿಯಾಗಲು ಸಾಧ್ಯ. ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದನ್ನು ಮೂರನೇ ವ್ಯಕ್ತಿಯ ನಡುವೆ ತೋರಿಸಿಕೊಂಡಾಗ ಅಥವಾ ಗಂಡ-ಹೆಂಡ್ತಿ ನಡುವೆ ಮೂರನೇ ವ್ಯಕ್ತಿ ಬಂದಾಗ ಚಿಕ್ಕ ಸಮಸ್ಯೆ ಕೂಡ ದೊಡ್ಡದಾಗುತ್ತೆ. ವಿಚಾರ ವಿಚ್ಛೇದನದ ಹಂತದವರೆಗೆ ತಲುಪುತ್ತೆ.ಇಡೀ ಬದುಕು ಅಸ್ತವ್ಯಸ್ತವಾಗುತ್ತೆ.
ಇನ್ನು ಹೇಳಿ ಕೇಳಿ ಇದು 5G ಯುಗ. ಈ ಯುಗದಲ್ಲಿ ಮೂರನೇ ವ್ಯಕ್ತಿಯಿಂದ ಸುಂದರವಾದ ಸಂಸಾರ ಒಡೆದ ಹಾಲಿನಂತಾದರೆ, ಹಲವರು ಸೈಬರ್ ದಾಳಿ ಮಾಡುತ್ತಾರೆ. ಅವರದ್ದೇ ಆದ ನಿರ್ಧಾರಕ್ಕೆ ಬರುತ್ತಾರೆ. ಅದರಲ್ಲಿಯೂ ಚಿತ್ರರಂಗದಲ್ಲಿ ಗಂಡ -ಹೆಂಡ್ತಿ ನಡುವೆ ಬಂದ ಮೂರನೇ ವ್ಯಕ್ತಿಯನ್ನು ಸಮಾಜ ನೋಡುವ ದೃಷ್ಟಿಕೋನವೇ ಬೇರೆ. ಮಾನಸಿಕವಾಗಿ ಪೀಡಿಸುತ್ತಾರೆ. ವಿಲನ್ ಪಟ್ಟ ಕಟ್ಟಿ ಬಿಡುತ್ತಾರೆ. ಸದ್ಯ ಇಂತಹದ್ದೇ ಮಾನಸಿಕ ಒತ್ತಡದಿಂದ ಹೈರಾಣಾದ ಗಾಯಕಿ ಕೆನಿಶಾ ಫ್ರಾನ್ಸಿಸ್ ಕಣ್ಣೀರು ಹಾಕಿದ್ದಾರೆ.

ಹೌದು, ನಿಮಗೆ ನೆನಪಿದ್ದರೆ ಕಳೆದ ವರ್ಷ ತಮಿಳು ನಟ ಜಯಂ ರವಿ ಅಲಿಯಾಸ್ ರವಿ ಮೋಹನ್ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು.ಪತ್ನಿ ಆರತಿ ರವಿಯವರ ಜೊತೆಗಿನ ಸಂಬಂಧ ಕಡಿದುಕೊಂಡು ರವಿ ಮೋಹನ್ ಎದ್ದು ಬಂದಿದ್ದರು. ಆ ಸಮಯದಲ್ಲಿ ಇವರ ಸಂಸಾರ ಹಾಳಾಗಲು ಗಾಯಕಿ ಕೆನಿಶಾ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು.ಇವತ್ತು ಕೂಡ ಇವರ ಈ ಸಂಸಾರದ ರಗಳೆ ಮುಗಿದಿಲ್ಲ. ರವಿ ಮೋಹನ್ ಅಭಿಮಾನಿಗಳು ಕೆನಿಶಾ ಅವರನ್ನು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ಮನೆ ಮುರುಕಿ ಎಂದು ನಿಂದಿಸುತ್ತಲೇ ಇದ್ದಾರೆ.
ಇದೆಲ್ಲದರಿಂದ ಸದ್ಯ ಕೆನಿಶಾ ನೊಂದು ಬೆಂದು ಹೋಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಬದುಕಿನ ಕಥೆಯನ್ನು ಹೇಳಿ ಗಳಗಳ ಅತ್ತಿದ್ದಾರೆ. ರವಿ ಮೋಹನ್ ಚಿಕ್ಕ ಹುಡುಗ ಅಲ್ಲ ಅವರಿಗೆ ಕೂಡ ಯೋಚನೆ ಮಾಡುವ ಶಕ್ತಿ ಇದೆ ಎಂದು ಹೇಳಿರುವ ಕೆನಿಶಾ ನನ್ನ ಮಾನಸಿಕ ನೆಮ್ಮದಿಗೆ ಕೊಳ್ಳಿ ಬಿದ್ದಿದೆ ಎಂದಿದ್ದಾರೆ.
ಈ ಕುರಿತು ವಿಡಿಯೋದಲ್ಲಿ ಮಾತನಾಡಿರುವ ಕೆನಿಶಾ,ನಾನು ಗಾಯಕಿ ಮಾತ್ರ ಅಲ್ಲ ಮನಶ್ಶಾಸ್ತ್ರಜ್ಞೆ, ಆಧ್ಯಾತ್ಮಿಕ ಚಿಕಿತ್ಸಕಿ(Spiritual Healer), ಈ ಹಿನ್ನೆಲೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಕುಗ್ಗಿದ್ದಾಗ ರವಿ ಮೋಹನ್ ನನ್ನ ಹತ್ತಿರ ಚಿಕಿತ್ಸೆ ಪಡೆಯಲು ಬಂದಿದ್ದರು ಎಂದು ಹೇಳಿದ್ದಾರೆ.
ಹೀಗೆ ಪರಿಚಯವಾದ ನಾವು ಇಬ್ಬರು ಆ ನಂತರ ಸ್ನೇಹಿತರಾದೆವು ಎಂದು ಹೇಳಿರುವ ಕೆನಿಶಾ, ಅವರ ಕುಟುಂಬದವರ ಜೊತೆ ಸೇರಿ ಬದುಕಿ ಬಾಳುವಂತೆ ನಾನು ಹಲವಾರು ಬಾರಿ ಅವರಿಗೆ ತಿಳಿ ಹೇಳಿದ್ದೇನೆ ಎಂದು ಹೇಳಿದ್ದಾರೆ. ರವಿ ಮೋಹನ್ ಅವರೇನು ಸಣ್ಣ ಮಗುವಲ್ಲ, ಯಾರ ಜೊತೆ ಮಾತನಾಡಬೇಕು, ಜೀವನ ಹೇಗೆ ನಡೆಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು ಎಂದಿದ್ದಾರೆ.

ನಾನು ಸಂಗೀತ ಕಾರ್ಯಕ್ರಮ ನೀಡಲು ಹೋದಾಗ, ಬೇರೆ ಕಾರ್ಯಕ್ರಮದಲ್ಲಿ ತುಂಬಾ ಜನರು ಬಂದು ರವಿ ಮೋಹನ್ ಪ್ರಾಣ ಉಳಿಸಿದ್ದಕ್ಕೆ ನಿಮಗೆ ಧನ್ಯವಾದ ಎಂದು ಹೇಳಿದ್ದಾರೆ ಎಂದು ಹೇಳಿರುವ ಕೆನಿಶಾ ಅವರ ಮೊಗದಲ್ಲಿ ಇಂದು ನಗು ಮೂಡಿದೆ ಅಂದರೆ ಅದಕ್ಕೆ ನೀವೆ ಕಾರಣ ಎಂದು ಹೇಳಿದ್ದಾರೆ ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ತಮ್ಮ ವೈಯಕ್ತಿಕ ಬದುಕಿನ ಕುರಿತು ಕೂಡ ಮಾತನಾಡಿರುವ ಕೆನಿಶಾ, ನನ್ನ ಪೂರ್ವಾಪರವನ್ನು ತಿಳಿಯಲು ಬೆಂಗಳೂರಿಗೆ ಡಿಟೆಕ್ಟಿವ್‌ಗಳನ್ನು ಕಳಿಸುತ್ತಿದ್ದಾರೆ ಎಂದು ಹೇಳಿರುವ ಕೆನಿಶಾ ನನ್ನ ತಂದೆಯನ್ನು ನಾನು ಅನಾಥವನ್ನಾಗಿ ಮಾಡಿದ್ದೆ ಎಂದೆಲ್ಲಾ ಕಥೆಗಳನ್ನು ಹೆಣೆಯುತ್ತಿದ್ದಾರೆ, ಈ ಕಥೆಗಳೆಲ್ಲ ಸತ್ಯಕ್ಕೆ ದೂರವಾದವು ಎಂದಿದ್ದಾರೆ.
2013ರಲ್ಲಿ ನಾನು ನನ್ನ ತಾಯಿಯನ್ನು ಕಳೆದುಕೊಂಡೆ, 2017ರಲ್ಲಿ ನನ್ನ ತಂದೆ ತೀರಿಕೊಂಡರು ಎಂದು ಹೇಳಿರುವ ಕೆನಿಶಾ ನನ್ನ ತಂದೆ ಅಲ್ಝೈಮರ್ಸ್‌ನಿಂದ ಬಳಲುತ್ತಿದ್ದರು, ಅವರ ಕೊನೆ ಉಸಿರು ಇರುವವರೆಗೂ ನಾನೇ ನೋಡಿಕೊಂಡಿದ್ದೇನೆ ಎಂದಿದ್ದಾರೆ.
ಮುಂದುವರೆದು ಬಾಲ್ಯದಲ್ಲೇ ನಾನು ಲೈಂ*ಗಿಕ ದೌರ್ಜನ್ಯಕ್ಕೊಳಗಾದೆ, 18-19ನೇ ವಯಸ್ಸಿನಲ್ಲಿಯೇ ನನಗೆ ಮದುವೆ ಮಾಡಲಾಯ್ತು ಎಂದು ಹೇಳಿರುವ ಕೆನಿಶಾ ಮದುವೆ ನಂತರ ನಾನು ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ನರಳಿದೆ ಎಂದು ಹೇಳಿದ್ದಾರೆ.
ನನ್ನ ಕೈ ಹಿಡಿದಿದ್ದ ನನ್ನ ಗಂಡ ನಾನು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ ನನ್ನ ಮೇಲೆ ಹಲ್ಲೆ ಮಾಡಿದ್ದ ಎಂದು ಹೇಳಿರುವ ಕೆನಿಶಾ, ಈ ಹಲ್ಲೆಯಿಂದ ನನ್ನ ಗರ್ಭದಲ್ಲಿಯೇ ಮಗು ಸತ್ತು ಹೋಯ್ತು ಎಂದು ಕಣ್ಣೀರು ಹಾಕಿದ್ದಾರೆ. ಮಗುವನ್ನು ಕಳೆದುಕೊಂಡ ನೋವನ್ನು ಅನುಭವಿಸಿರುವ ನಾನು ಇನ್ನೊಬ್ಬರ ಮಕ್ಕಳನ್ನು ಅವರ ಮನೆಯಿಂದ ಕುಟುಂಬದಿಂದ ದೂರ ಮಾಡ್ತೀನಾ..? ಎಂದು ಪ್ರಶ್ನೆ ಮಾಡಿದ್ದಾರೆ.
ಬಾರ್ ಗಳಲ್ಲಿ ಕೇವಲ 500 ರೂಪಾಯಿಗೆ ನಾನು ಹಾಡುತ್ತಿದ್ದೆ. ಹೀಗೆ ಹಾಡುತ್ತಾ ಹಾಡುತ್ತಾ ಇಂದು ಈ ಹಂತಕ್ಕೆ ಬಂದಿದ್ದೇನೆ, ಹತ್ತು ವರ್ಷ ಬೆವರು ಸುರಿಸಿ ನನ್ನ ಕಾಲ ನನ್ನ ಕಾಲ ಮೇಲೆ ನಾನು ನಿಂತಿದ್ದೇನೆ ಎಂದಿರುವ ಕೆನಿಶಾ ನನ್ನ ವಿರುದ್ಧ ವ್ಯವಸ್ಥಿತವಾಗಿ ದ್ವೇಷ ಹರಡಲಾಗುತ್ತಿದೆ ಎಂದು ಹೇಳಿದ್ದಾರೆ. ನಿಮಗೆ ನಿಜವಾಗಿಯೂ ಧೈರ್ಯವಿದ್ದರೆ ನನ್ನ ಎದುರು ಬಂದು ಮಾತನಾಡಿ, ಹೀಗೆ ಆನ್‌ಲೈನ್‌ನಲ್ಲಿ ಮಾಡಬೇಡಿ ಎಂದು ಟ್ರೋಲ್ ಮಾಡುತ್ತಿರುವವರಿಗೆ ಸವಾಲು ಹಾಕಿದ್ದಾರೆ.
ತಮಗೆ ಸಿನಿಮಾ ಅಥವಾ ಸ್ಟಾರ್ ಆಗುವ ಯಾವುದೇ ಆಸೆ ಇಲ್ಲ, ಆಧ್ಯಾತ್ಮಿಕ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದೇ ನನ್ನ ಗುರಿ ಎಂದು ಹೇಳಿರುವ ಕೆನಿಶಾ ದಯವಿಟ್ಟು ನಾನು ದುಡುಕಿ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಅಂದ್ಹಾಗೇ ಇಷ್ಟೆಲ್ಲಾ ಮಾತನಾಡಿ ಕೆನಿಶಾ ಈ ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಡಿಲೀಟ್ ಮಾಡಿದ್ದಾರೆ. ಆ ನಂತರ ನಾನು ಹೇಳಬೇಕಿರುವುದಕ್ಕಿಂತ ಹೆಚ್ಚಿನ ವಿಷಯವನ್ನೇ ಹೇಳಿದ್ದೇನೆ, ಪ್ರೀತಿಯಿಂದ ಈ ಕಥೆಯ ಭಾಗವಾದೆ ಈಗ ಮೌನದಿಂದ ಹೊರ ನಡೆಯುತ್ತಿದ್ದೇನೆ ಎಂದಿದ್ದಾರೆ. ಮೂರು ಪುಟದ ಲೇಖನ ಹಂಚಿಕೊಂಡಿದ್ದಾರೆ.


Click it and Unblock the Notifications