Jailer: ಕೇರಳ ಬಾಕ್ಸ್ ಆಫೀಸ್‌ನಲ್ಲಿ ಕೆಜಿಎಫ್ 2 ದಾಖಲೆ ಮುರಿಯುವಲ್ಲಿ ವಿಫಲವಾದ ಜೈಲರ್

ಸದ್ಯ ಭಾರತದಾದ್ಯಂತ ಅತಿಹೆಚ್ಚು ಸದ್ದು ಮಾಡುತ್ತಿರುವ ಸಿನಿಮಾವೆಂದರೆ ಅದು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್. ಹೌದು, ಆಗಸ್ಟ್ 10ರಂದು ವಿಶ್ವದಾದ್ಯಂತ ಬಿಡುಗಡೆಯಾದ ಜೈಲರ್ ಸಿನಿಮಾ ಸದ್ಯ ಆರು ದಿನಗಳು ಕಳೆದಿದ್ದರೂ ಸಹ ತನ್ನ ಸದ್ದನ್ನು ಸ್ವಲ್ಪವೂ ತಗ್ಗಿಸುವ ಹಾಗೆ ಕಾಣುತ್ತಿಲ್ಲ.

ಜೈಲರ್ ಸಿನಿಮಾ ಮೊದಲ ವಾರಾಂತ್ಯವನ್ನು ಮುಕ್ತಾಯಗೊಳಿಸಿದ್ದು, ಮೊದಲ 6 ದಿನಗಳಲ್ಲಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 402.5 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ. ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ.

Kerala Box Office: Jailer failed to break KGF Chapter 2 in fastest 30 crore collection

ಹೌದು, ಜೈಲರ್ ವಿವಿಧ ರಾಜ್ಯಗಳಲ್ಲಿ ಅಬ್ಬರದ ಕಲೆಕ್ಷನ್ ಮಾಡಿದ್ದು, ಕರ್ನಾಟಕದಲ್ಲಿ ಮೊದಲ ಆರು ದಿನಗಳಲ್ಲಿ 43.7 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ತೆಲುಗು ರಾಜ್ಯಗಳಲ್ಲಿ ಜೈಲರ್ ಮೊದಲ ಆರು ದಿನಗಳಲ್ಲಿ 49 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಕೇರಳದಲ್ಲಿ ಮೊದಲ ಆರು ದಿನಗಳಲ್ಲಿ ಜೈಲರ್ 31 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.

ಈ ಮೂಲಕ ಜೈಲರ್ ಕೇರಳ ಬಾಕ್ಸ್ ಆಫೀಸ್‌ನಲ್ಲಿ 30 ಕೋಟಿ ಕ್ಲಬ್ ಸೇರಿದ ಸಿನಿಮಾಗಳ ಪಟ್ಟಿ ಸೇರಿದ್ದು, ಅತಿ ವೇಗವಾಗಿ ಕೇರಳ ಬಾಕ್ಸ್ ಆಫೀಸ್‌ನಲ್ಲಿ 30 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹಿಂದಿಕ್ಕುವಲ್ಲಿ ವಿಫಲಗೊಂಡಿದೆ. ಹೌದು, ಜೈಲರ್ ಸಿನಿಮಾ ಕೇರಳ ಬಾಕ್ಸ್ ಆಫೀಸ್‌ನಲ್ಲಿ ಆರು ದಿನಗಳಲ್ಲಿ 30 ಕೋಟಿ ಕ್ಲಬ್ ಸೇರಿದ್ದರೆ, ಕೆಜಿಎಫ್ ಚಾಪ್ಟರ್ 2 ಚಿತ್ರ ಕೇರಳ ಬಾಕ್ಸ್ ಆಫೀಸ್‌ನಲ್ಲಿ ಕೇವಲ 5 ದಿನಗಳಲ್ಲಿ 30 ಕೋಟಿ ಕ್ಲಬ್ ಸೇರಿತ್ತು.

ಹಾಗಿದ್ದರೆ ಕೇರಳ ಬಾಕ್ಸ್ ಆಫೀಸ್‌ನಲ್ಲಿ ಯಾವ ಚಿತ್ರಗಳು ಎಷ್ಟು ದಿನಗಳಲ್ಲಿ 30 ಕೋಟಿ ಕ್ಲಬ್ ಸೇರಿದವು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಕೆಜಿಎಫ್ ಚಾಪ್ಟರ್ 2: 5 ದಿನಗಳಲ್ಲಿ

ಜೈಲರ್: 6 ದಿನಗಳಲ್ಲಿ

ಲೂಸಿಫರ್: 7 ದಿನಗಳಲ್ಲಿ

ಬಾಹುಬಲಿ ದ ಕನ್ಕ್ಲೂಷನ್: 7 ದಿನಗಳಲ್ಲಿ

More from Filmibeat

English summary
Jailer Movie Hindi belt collection
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X