For Quick Alerts
  ALLOW NOTIFICATIONS  
  For Daily Alerts

  ತಮಿಳಿನಲ್ಲೂ ಸೆಂಚೂರಿ ಬಾರಿಸಿದ 'KGF 2': ತಮಿಳುನಾಡಿನಲ್ಲಿ ಕನ್ನಡ ಕಹಳೆ

  |

  'ಕೆಜಿಎಫ್ 2' ಬಿಡುಗಡೆಯಾಗಿ ಮೂರು ವಾರ ಕಳೆದರೂ ಕೂಡ ಬಾಕ್ಸಾಫೀಸ್‌ನಲ್ಲಿ ಸೈಲೆಂಟ್ ಆಗುವ ಕನಸು ಕಾಣುತ್ತಲೇ ಇಲ್ಲ. ದಕ್ಷಿಣ ಭಾರತದ ಮತ್ತೊಂದು ಸಿನಿಮಾ ಸಾವಿರ ಕೋಟಿ ದಾಟಿದ್ದು, ವಿಶ್ವದಾದ್ಯಂತ ಅದ್ಭುತ ಕಲೆಕ್ಷನ್ ಮಾಡಿದೆ. ಇದು ದಕ್ಷಿಣದ ಚಿತ್ರರಂಗಕ್ಕೆ ಸಿಕ್ಕಿರುವ ಮತ್ತೊಂದು ದುಬಾರಿ ಸಕ್ಸಸ್.

  ಇಷ್ಟೇ ಅಲ್ಲ, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ಮತ್ತೊಂದು ಹೊಸ ದಾಖಲೆಯನ್ನು ಬರೆದಿದೆ. ತಮಿಳು ಸಿನಿಮಾಗಳು ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದವು. ಆದರೆ, ತಮಿಳುನಾಡಿನಲ್ಲಿ ಕನ್ನಡದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿರೋ ಉದಾಹರಣೆಗಳೇ ಇಲ್ಲ. ಆದ್ರೀಗ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ತಮಿಳುನಾಡಿನಲ್ಲಿ ಸೆಂಚುರಿ ಬಾರಿಸಿದೆ. ಎಷ್ಟು ಕೆಲಕ್ಷನ್ ಮಾಡಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

  18ನೇ ದಿನ ಆದರೂ ನಿಲ್ಲದ 'ಕೆಜಿಎಫ್ 2' ಓಟ: ಅಜಯ್, ಟೈಗರ್ ಲೆಕ್ಕಕ್ಕಿಲ್ಲ 18ನೇ ದಿನ ಆದರೂ ನಿಲ್ಲದ 'ಕೆಜಿಎಫ್ 2' ಓಟ: ಅಜಯ್, ಟೈಗರ್ ಲೆಕ್ಕಕ್ಕಿಲ್ಲ

  ತಮಿಳಿನಲ್ಲೂ 'ಕೆಜಿಎಫ್ 2' ಖದರ್

  ತಮಿಳಿನಲ್ಲೂ 'ಕೆಜಿಎಫ್ 2' ಖದರ್

  ತಮಿಳುನಾಡಿನಲ್ಲಿ ಬೇರೆ ಭಾಷೆಯ ಸಿನಿಮಾಗಳನ್ನು ಜನರು ನೋಡುವುದು ಕಡಿಮೆ. ಡಬ್ ಮಾಡಿ ಸಿನಿಮಾ ಬಿಡುಗಡೆ ಮಾಡಿದರೂ, ಆ ಸಿನಿಮಾ ಓಡಿದ್ದು ಬಲು ಅಪರೂಪ. ಕೆಲವೊಂದು ತೆಲುಗು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಸಿನಿಮಾ ಅವರದ್ದೇ ಭಾಷೆಗೆ ಡಬ್ ಆಗಿ ಬಿಡುಗಡೆಯಾಗ ಚಿತ್ರಗಳು ಸಾಧಾರಾಣ ಯಶಸ್ಸು ಕಂಡಿವೆ. ಇಂತಹ ಸಂದರ್ಭದಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ತಮಿಳಿನ ಬಾಕ್ಸಾಫೀಸ್‌ನಲ್ಲಿ ಸೆಂಚುರಿ ಬಾರಿಸೋದು ಅಂದರೆ ತಮಾಷೆಯ ಮಾತೇ ಅಲ್ಲ. ಈ ಸಾಧನೆಯನ್ನು 'ಕೆಜಿಎಫ್ 2' ಸಿನಿಮಾ ಮಾಡಿದೆ.

  ತಮಿಳಿನಲ್ಲಿ 100 ಕೋಟಿ ಗಡಿದಾಟಿದ 'ಕೆಜಿಎಫ್ 2'

  ತಮಿಳಿನಲ್ಲಿ 100 ಕೋಟಿ ಗಡಿದಾಟಿದ 'ಕೆಜಿಎಫ್ 2'

  ತಮಿಳುನಾಡಿನ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಸೆಂಚುರಿ ಬಾರಿಸುವ ಮೂಲಕ ಮತ್ತೊಂದು ದಾಖಲೆಯನ್ನು ಬರೆದಿದೆ. ತಮಿಳುನಾಡಿನಲ್ಲಿ ಕನ್ನಡದ ಮೊದಲ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಗಳಿಸಿದೆ. ಟ್ರೇಡ್ ಅನಲಿಸ್ಟ್ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿದ್ದು, ಈ 18 ದಿನಗಳಲ್ಲಿ ಕೆಜಿಎಫ್ ಗಳಿಸಿದ ಕಲೆಕ್ಷನ್ ರಿಪೋರ್ಟ್ ಹೀಗಿದೆ.

  ತಮಿಳುನಾಡಿನಲ್ಲಿ 'KGF 2' 100 ಕೋಟಿ ಕಲೆಕ್ಷನ್

  ಮೊದಲ ವಾರ ₹ 59.84 ಕೋಟಿ
  ಎರಡನೇ ವಾರ ₹ 32.65 ಕೋಟಿ
  3ನೇ ವಾರ (1ನೇ ದಿನ) ₹ 1.75 ಕೋಟಿ
  3ನೇ ವಾರ (2ನೇ ದಿನ) ₹ 1.80 ಕೋಟಿ
  3ನೇ ವಾರ (3ನೇ ದಿನ) ₹ 4.53 ಕೋಟಿ

  ಒಟ್ಟು ₹ 100.57 ಕೋಟಿ

  'ಕೆಜಿಎಫ್ 2' ಹಿಂದಿ ಖದರ್

  'ಕೆಜಿಎಫ್ 2' ಹಿಂದಿ ಬೆಲ್ಟ್ ಏರಿಯಾಗಳಲ್ಲಿ ಬಾಕ್ಸಾಫೀಸ್ ಲೂಟಿ ಮಾಡುವುದನ್ನು ಇನ್ನೂ ನಿಲ್ಲಿಸಿಲ್ಲ. ಭಾನುವಾರ (ಮೇ 01)ದಂದು 'ಕೆಜಿಎಫ್ 2' ಸಿನಿಮಾ 9.27 ಕೋಟಿ ಗಳಿಸಿದೆ ಎಂದು ಟ್ರೇಡ್ ಅನಲಿಸ್ಟ್ ತರನ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ 369.58 ಕೋಟಿ ಗಳಿಸಿದೆ. 'ದಂಗಲ್' ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಲು ಹೆಚ್ಚು ಕಡಿಮೆ 10 ಕೋಟಿ ಬೇಕಿದೆ. ಈ ದಾಖಲೆಯನ್ನು ಮುರಿಯಲು ಇನ್ನೆಷ್ಟು ದಿನ ಬೇಕು ಅನ್ನೋ ಕುತೂಹಲವಿದೆ.

  ಸಾವಿರ ಕೋಟಿ ದಾಟಿದ 4ನೇ ಸಿನಿಮಾ

  ಸಾವಿರ ಕೋಟಿ ದಾಟಿದ 4ನೇ ಸಿನಿಮಾ

  ಸಾವಿರ ಕೋಟಿ ಕ್ಲಬ್ ಸೇರಿದ 'ಕೆಜಿಎಫ್ 2' ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಈ ಮೂಲಕ 1000 ಕೋಟಿ ಗಳಿಸಿದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆ ಕಂಡಿದೆ. ದಂಗಲ್, ಬಾಹುಬಲಿ 2, RRR, ಬಳಿಕ ಸಾವಿರ ಕೋಟಿ ಕ್ಲಬ್ ಸೇರಿದ 4ನೇ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ.

  English summary
  KGF Chapter 2 box office: kannada movie crossed Rs 100 crore mark in Tamil Nadu, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X