ಮಾಧ್ಯಮಗಳಿಗೆ ಅಗೌರವ ತೋರಿದ ಖುಷ್ಬೂ ವಾಯ್ಸ್ ಮೆಸೇಜ್ ವೈರಲ್: ಕ್ಷಮೆಯಾಚಿಸಿದ ನಟಿ
ಖ್ಯಾತ ನಟಿ ಮತ್ತು ರಾಜಕಾರಣಿ ಖುಷ್ಬೂ ಮಾಧ್ಯಮಗಳಿಗೆ ಅಗೌರವ ತೋರಿ ಮಾತನಾಡಿದ ವಾಯ್ಸ್ ಮೆಸೇಜ್ ವೈರಲ್ ಆಗಿದೆ. ಮಾಧ್ಯಮಗಳಿಗೆ ಅವಮಾನವಾಗುವ ಹಾಗೆ ಮಾತನಾಡಿ ವಿವಾದದಲ್ಲಿ ಸಿಲುಕಿರುವ ನಟಿ ಖುಷ್ಬೂ ಈಗ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
Recommended Video
ಅಲ್ಲದೆ ವಾಯ್ಸ್ ಮೆಸೇಜ್ ಲೀಕ್ ಮಾಡಿದವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ವಾಯ್ಸ್ ಮೆಸೇಜ್ ವೈರಲ್ ಆಗುತ್ತಿದ್ದಂತೆ ನಟಿ ಖುಷ್ಬೂ ಟ್ವಿಟ್ಟರ್ ನಲ್ಲಿ ಮಾಧ್ಯಮದವರಿಗೆ ಕ್ಷಮೆಯಾಚಿಸಿದ್ದಾರೆ. ಅಷ್ಟಕ್ಕು ಖುಷ್ಬೂ ಹೇಳಿದ್ದೇನು? ವಾಯ್ಸ್ ಮೆಸೇಜ್ ನಲ್ಲಿ ಏನಿದೆ? ಮುಂದೆ ಓದಿ..

ಏನಿದು ವಾಯ್ಸ್ ಮೆಸೇಜ್
ನಟಿ ಖುಷ್ಬೂ ಇತ್ತೀಚಿಗೆ ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡುವಂತೆ ತಮಿಳು ನಾಡು ಸರ್ಕಾರದ ಜೊತೆ ಸಭೆ ನಡೆಸಿದ್ದರು. ನಂತರ ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಈಗಾಗಲೆ ಧಾರಾವಾಹಿ ಚಿತ್ರೀಕರಣ ಪ್ರಾರಂಭವಾಗಿದೆ. ನಂತರ ಖುಷ್ಬೂ ನಿರ್ಮಾಪಕರ ವಾಟ್ಸಪ್ ಗ್ರೂಪ್ ನಲ್ಲಿ ಚಿತ್ರೀಕರಣ ಸೆಟ್ ನಲ್ಲಿ ಮಾಧ್ಯಮಕ್ಕೆ ಅನುಮತಿ ನೀಡದಂತೆ ವಾಯ್ಸ್ ಮೆಸೇಜ್ ಹಾಕಿದ್ದಾರೆ. ಈ ಮೆಸೇಜ್ ನಿರ್ಮಾಪಕ ಗ್ರೂಪ್ ನಿಂದ ಲೀಕ್ ಆಗಿದೆ.

ಖುಷ್ಬೂ ಹೇಳಿದ್ದನು?
ನಟಿ ಖುಷ್ಬೂ ಮಾಧ್ಯಮದ ಬಗ್ಗೆ ವಾಯ್ಸ್ ಮೆಸೇಜ್ ನಲ್ಲಿ "ನಾವು ಮಾಧ್ಯಮದವರಿಗೆ ಫೋಟೋ ಅಥವಾ ವಿಡಿಯೋಗಳನ್ನು ನೀಡದಂತೆ ನೋಡಿಕೊಳ್ಳಬೇಕು. ಚಿತ್ರೀಕರಣ ಪ್ರಾರಂಭಿಸುವುದನ್ನೆ ಕಾಯುತ್ತಿದ್ದಾರೆ. ಮಾಧ್ಯಮದವರಿಗೆ ಈಗ ಕೋವಿಡ್-19 ಹೊರತುಪಡಿಸಿ ಬೇರೆ ಯಾವುದೇ ಸುದ್ದಿ ಸಿಗುತ್ತಿಲ್ಲ. ಹಾಗಾಗಿ ಶೂಟಿಂಗ್ ಗಾಗಿ ಕಾಯುತ್ತಿದ್ದಾರೆ" ಅವರನ್ನು ದೂರವಿಡಿ. ಎನ್ನುವ ಅರ್ಥದಲ್ಲಿ ವಾಯ್ಸ್ ಮೆಸೇಜ್ ಮಾಡಿದ್ದಾರೆ.

ಇಂತಹ ನಿರ್ಮಾಪಕರು ಇದ್ದಾರೆ ಎಂದು ಹೇಳಲು ನಾಚಿಯಾಗುತ್ತೆ
"ಎಡಿಟ್ ಮಾಡಲಾದ ನನ್ನ ವಾಯ್ಸ್ ಸಂದೇಶ ಪತ್ರಿಕಾ ಮಾಧ್ಯಮದಲ್ಲಿ ಸುತ್ತುವರೆದಿದೆ. ಇದು ನಮ್ಮ ನಿರ್ಮಾಪಕರ ಗುಂಪಿನಿಂದ ಹೋಗಿದೆ. ನಮ್ಮ ನಡುವೆ ಇಂತಹ ಚೀಪ್ ನಿರ್ಮಾಪಕರಿದ್ದಾರೆ ಎಂದು ಹೇಳಲು ನಾಚಿಕೆಯಾಗುತ್ತಿದೆ. ನನ್ನ ಉದ್ದೇಶ ಪತ್ರಿಕೆಯವರನ್ನು ಅಗೌರವಗೊಳಿಸುವುದಲ್ಲ" ಎಂದು ಹೇಳಿದ್ದಾರೆ.

ಕ್ಷಮೆಯಾಚಿಸಿದ ಖುಷ್ಬೂ
"ನನ್ನ 34 ವರ್ಷಗಳ ವೃತ್ತಿ ಜೀವನದಲ್ಲಿ ಯಾವತ್ತು ನಾನು ಮಾಧ್ಯಮವನ್ನು ಅಗೌರವಗೊಳಿಸಿಲ್ಲ. ನಾನು ನಿಮ್ಮಲ್ಲಿ ಯಾರನ್ನಾದರು ನೋವಿಸಿದ್ದರೆ ನಾನು ಪ್ರಾಮಾಣಿಕ ಕ್ಷಮೆಯಾಚಿಸುತ್ತೇನೆ" ಎಂದು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಸಂದೇಶ ಲೀಕ್ ಮಾಡಿದ್ದು ಯಾರು ಎಂದು ಗೊತ್ತಾಗಿದೆ
"ಈ ವಾಯ್ಸ್ ಮೆಸೇಜ್ ಲೀಕ್ ಮಾಡಿದ್ದು ಯಾರು ಎಂದು ಗೊತ್ತಾಗಿದೆ. ಆದರೆ ನಾನು ಅವರನ್ನು ಹೆದರಿಸುವುದಿಲ್ಲ. ನನ್ನ ಮೌನ ಮತ್ತು ಕ್ಷಮೆ ಅವರಿಗೆ ದೊಡ್ಡ ಶಿಕ್ಷೆ." ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











