For Quick Alerts
  ALLOW NOTIFICATIONS  
  For Daily Alerts

  ರಾಮ್ ಚರಣ್ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿ ಆಗ್ತಾರಾ 'ಕಬೀರ್ ಸಿಂಗ್' ಸುಂದರಿ

  |

  ಟಾಲಿವುಡ್ ನ ಸ್ಟಾರ್ ನಟ ರಾಮ್ ಚರಣ್ ಮುಂದಿನ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿರುವ ವಿಚಾರ ಹಳೆಯದು. ಆದರೆ ರಾಮ್ ಚರಣ್ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿ ಯಾರಾಗುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

  ಶಂಕರ್ ಮತ್ತು ರಾಮ್ ಚರಣ್ ಸಿನಿಮಾ ಅನೌನ್ಸ್ ಆದಾಗಿನಿಂದ ದಿನಕ್ಕೊಬ್ಬರ ನಾಯಕಿಯರ ಹೆಸರು ಕೇಳಿಬರುತ್ತಿದೆ. ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಸಾಕಷ್ಟು ನಟಿಯರ ಹೆಸರುಗಳು ಓಡಾಡದುತ್ತಿದೆ. ಇದೀಗ ಮತ್ತೋರ್ವ ಖ್ಯಾತ ನಟಿಯ ಹೆಸರು ಸೇರಿಕೊಂಡಿದೆ.

  ರಾಮ್ ಚರಣ್-ಶಂಕರ್ ಚಿತ್ರಕ್ಕೆ ರಶ್ಮಿಕಾ ಬದಲು ಮತ್ತೋರ್ವ ಸ್ಟಾರ್ ನಟಿ ಆಯ್ಕೆರಾಮ್ ಚರಣ್-ಶಂಕರ್ ಚಿತ್ರಕ್ಕೆ ರಶ್ಮಿಕಾ ಬದಲು ಮತ್ತೋರ್ವ ಸ್ಟಾರ್ ನಟಿ ಆಯ್ಕೆ

  ರಾಮ್ ಚರಣ್ ಜೊತೆ ಖ್ಯಾತ ನಟಿ ಕಿಯಾರಾ ಅಡ್ವಾನಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಸದ್ಯದಲ್ಲೇ ಸಿನಿಮಾತಂಡ ನಾಯಕಿಯ ಹೆಸರು ಅನೌನ್ಸ್ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಈಗಾಗಲೇ ಕಿಯಾರಾ ಫೈನಲ್ ಆಗಿದ್ದಾರೆ ಎನ್ನುವ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

  ನಿರ್ದೇಶಕ ಶಂಕರ್ ಮತ್ತು ನಿರ್ಮಾಪಕ ದಿಲ್ ರಾಜು ಇಬ್ಬರು ಕಿಯಾರ ಅಡ್ವಾನಿ ಅವರನ್ನು ಆಯ್ಕೆ ಮಾಡಿದ್ದಾರಂತೆ. ಈಗಾಗಲೇ ಕಿಯಾರ ಜೊತೆ ಮಾತುಕತೆ ನಡೆಸಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ಸಿನಿಮಾದಲ್ಲಿ ನಟಿಸಲು ಕಿಯಾರಾ ಕೂಡ ತುಂಬಾ ಆಸಕ್ತರಾಗಿದ್ದು, ಸದ್ಯದಲ್ಲೇ ರಾಮ್ ಚರಣ್ 15ನೇ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

  Yuvarathna film team lands in trouble!

  ಮೂಲಗಳ ಪ್ರಕಾರ ಶಂಕರ್ ಮತ್ತು ರಾಮ್ ಚರಣ್ ಸಿನಿಮಾ ಜೂನ್ ತಿಂಗಳಿಂದ ಪ್ರಾರಂಭವಾಗಲಿದೆಯಂತೆ. ಡಿಸೆಂಬರ್ ತಿಂಗಳೊಳಗೆ ಸಿನಿಮಾ ಚಿತ್ರೀಕರಣ ಮುಗಿಸುವ ಪ್ಲಾನ್ ಮಾಡಿದ್ದು, ಮುಂದಿನ ವರ್ಷ ಸಿನಿಮಾ ಬಿಡುಗಡೆಗೆ ಮಾಡಲು ಸಿನಿಮಾತಂಡ ನಿರ್ಧರಿಸಿದೆ.

  English summary
  Bollywood Actress Kiara Advani likely to play lead opposite Ram Charan next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X