For Quick Alerts
  ALLOW NOTIFICATIONS  
  For Daily Alerts

  ಎಲ್ಲೆಲ್ಲೂ 'ಈಗ' ಕಿಚ್ಚ ಸುದೀಪ್ ಚಿತ್ರದ ಭಾರೀ ಹವಾ

  |

  ಇದೇ ತಿಂಗಳ 30 ರಂದು (ಮೇ 30, 2012) ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾದಲಿರುವ ಕನ್ನಡ ನಟ ಕಿಚ್ಚ ಸುದೀಪ್ ಚಿತ್ರ ಈಗ, ಪ್ರೇಕ್ಷಕರ ಭರ್ಜರಿ ನಿರೀಕ್ಷೆಗೆ ಕಾರಣವಾಗಿದೆ. ಪ್ರಸಿದ್ಧ ತಮಿಳು ಸನ್ ಟಿವಿ ವಾಹಿನಿ ಈ ಚಿತ್ರದ ಸ್ಯಾಟಲೈಟ್ ಹಕ್ಕನ್ನು ರು. 3.5 ಕೋಟಿಗೆ ಖರೀದಿ ಮಾಡಿದೆ. ತಮಿಳಿನಲ್ಲಿ ಈ ಚಿತ್ರಕ್ಕೆ 'ನಾನ್' ಎಂದಿ ಹೆಸರಿಡಲಾಗಿದೆ.

  ಆದರೆ ಕನ್ನಡದಲ್ಲಿ ಈ ಚಿತ್ರ ನಿರ್ಮಾಣವಾಗಲೀ, ಡಬ್ ಆಗಲೀ ಆಗಿಲ್ಲ. ಕನ್ನಡಿಗರು ಕನ್ನಡನಟನ ಈ ಚಿತ್ರವನ್ನು ತಮಿಳು ಅಥವಾ ತೆಲಗು ಭಾಷೆಯಲ್ಲಿ ನೋಡಬೇಕಾಗಿದೆ. ಈ ಚಿತ್ರ ಕರ್ನಾಟಕದಲ್ಲಿ 100ಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಮೇ 30ಕ್ಕೆ ಬರಲಿರುವ ಈ ಚಿತ್ರದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ.

  ನಿರ್ದೇಶಕ ಎಸ್ ಎಸ್ ರಾಜಮೌಳಿಯವರ ನಿರ್ದೇಶನದ ಯಾವ ಚಿತ್ರವೂ ಇದುವರೆಗೆ ಸೋತಿಲ್ಲ. ಹಾಗಾಗಿ ಇಡೀ ದಕ್ಷಿಣ ಭಾರತ ಈ ಚಿತ್ರದ ಬಿಡುಗಡೆಗೆ ಕಾದು ಕುಳಿತಿದೆ. ನಾಯಕನ ಪಾತ್ರಕ್ಕಿಂತಲೂ ಮಿಗಿಲಾದ ಖಳನಾಯಕನ ಪಾತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ಅಮೋಘವಾಗಿ ನಟಿಸಿದ್ದಾರೆ ಎಂಬ ಮಾಹಿತ ಜಗಜ್ಜಾಹೀರಾಗಿದೆ. ಹೀಗಾಗಿ ಕನ್ನಡಿಗರಿಗೆ ಈಗಲೇ ಪುಳಕ ಪ್ರಾರಂಭವಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Kannada Actor Kichcha Sudeep's Telugu Movie Eega to release on May 30th 2012 all over South India. Exclusive Promotion started for this movie through tv and print media. Famous director S S Rajamouli directed this. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X