ಮಹಿಳೆ ಮತ್ತು ಹಸ್ತಮೈಥುನ: 'ಕಿರಾತಕ' ನಟಿಯ ಬೋಲ್ಡ್ ಉತ್ತರ
'ಕಿರಾತಕ' ಸಿನಿಮಾದಲ್ಲಿ ಯಶ್ ಜೊತೆ ಸಾದಾ-ಸೀದಾ ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸಿದ್ದ ನಟಿ ಒವಿಯಾ ಹೆಲೆನ್ ನಿಜ ಜೀವನದಲ್ಲಿ ಸಖತ್ ಬೋಲ್ಡ್ ಹುಡುಗಿ.
ಚುಂಬನ ದೃಶ್ಯಗಳಿರಲಿ, ಗ್ಲಾಮರಸ್ ಪಾತ್ರಗಳಿರಲಿ ಹಿಂದೆ-ಮುಂದೆ ನೋಡುವುದಿಲ್ಲ ಒವಿಯಾ. ನಡೆಯಲ್ಲಷ್ಟೆ ಅಲ್ಲ, ನುಡಿಯಲ್ಲೂ ತುಂಬಾ ನೇರ ಮತ್ತು ದಿಟ್ಟ ಈ ಕಿರಾತಕ ನಾಯಕಿ ಒವಿಯಾ.
ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ತನ್ನನ್ನು ಕೆಟ್ಟದಾಗಿ ಚೇಡಿಸಲು ಬಂದ ವ್ಯಕ್ತಿಯೊಬ್ಬನಿಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಒವಿಯಾ. ಅಷ್ಟೆ ಅಲ್ಲ ಮದುವೆ ಮತ್ತು ಹಸ್ತಮೈಥುನ ಎರಡರ ಬಗ್ಗೆಯೂ ಮಾತನಾಡಿದ್ದಾರೆ ಈ ನಟಿ.

ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿದ್ದ ಒವಿಯಾ
ಕೆಲವು ದಿನಗಳ ಹಿಂದೆ ಟ್ವಿಟ್ಟರ್‌ನಲ್ಲಿ 'ಏನಾಗುತ್ತಿದೆ?' ಎಂದು ಸುಮ್ಮನೆ ಒಂದು ಪೋಸ್ಟ್ ಹಾಕಿದ್ದರು ಒಲಿವಾ. ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬ 'ಈಗಷ್ಟೆ ಹಸ್ತಮೈಥುನ ಮುಗಿಸಿ ಬಂದೆ' ಎಂದು ಪ್ರತಿಕ್ರಿಯಿಸಿದ್ದಾನೆ.

'ನಿಮಗೆ ಅದು ಒಳ್ಳೆಯದೇ' ಎಂದ ಒವಿಯಾ
ಇದಕ್ಕೆ ಮರುಪ್ರತಿಕ್ರಿಯೆ ನೀಡಿದ ಒವಿಯಾ, 'ನಿನಗೆ ಅದು ಒಳ್ಳೆಯದೇ' ಎಂದು ಹೇಳಿದ್ದಾರೆ. ಇದಕ್ಕೆ ಮತ್ತೊಬ್ಬ ವ್ಯಕ್ತಿ ಪ್ರತಿಕ್ರಿಯಿಸಿ, 'ಮಹಿಳೆಯ ಜೀವನ ಹಾಳುಮಾಡುವುದಕ್ಕಿಂತ ಹಸ್ತ ಮೈಥುನ ಮಾಡಿಕೊಳ್ಳುವುದು ಒಳ್ಳೆಯದು' ಎಂದು ಹೇಳಿದ್ದಾನೆ.

ಕಮೆಂಟ್ ಅನ್ನು ಅನುಮೋದಿಸಿದ ಒವಿಯಾ
ಇದಕ್ಕೆ ಮತ್ತೆ ಪ್ರತಿಕ್ರಿಯಿಸಿರುವ ಒವಿಯಾ, ಆತನ ಕಮೆಂಟ್ ಅನ್ನು ಅನುಮೋದಿಸಿ 'ಅದು ನಿಜ' ಎನ್ನುವ ಮೂಲಕ ಮಹಿಳೆಯ ಜೀವನ ಹಾಳು ಮಾಡುವುದಕ್ಕಿಂತ ಹಸ್ತಮೈಥುನ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ.

ಮಿಸ್ಟರ್ ಮೊಮ್ಮಗ ಸಿನಿಮಾದಲ್ಲೂ ನಟಿಸಿದ್ದಾರೆ
ತಮಿಳು ನಟಿ ಒವಿಯಾ ಮಲೆಯಾಳಂ, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕಿರಾತಕ ಸಿನಿಮಾದಿಂದ ಖ್ಯಾತವಾದ ಅವರು ನಂತರ ಮಿಸ್ಟರ್ ಮೊಮ್ಮಗ ಸಿನಿಮಾದಲ್ಲಿ ನಟಿಸಿದರು. ಪ್ರಸ್ತುತ ಅವರು ರಾಜಾ ಭೀಮ್, ಸಂಭವಮ್ ಎಂಬ ತಮಿಳು ಮತ್ತು ಬ್ಲಾಕ್ ಕಾಫಿ ಎಂಬ ಮಲೆಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











