Daniel Balaji Death ; ಅಗಲಿದ ಗೆಳೆಯ ಡ್ಯಾನಿಯಲ್ ಬಾಲಾಜಿಗೆ ಕಿಶೋರ್ ಅಕ್ಷರ ನಮನ..!

ಇವತ್ತು ಇದ್ದಂಗೆ ನಾಳೆ ಇರಲ್ಲ. . ಈಗಿದ್ದಂಗೆ, ಇನ್ನೆರಡು ಸೆಕೆಂಡ್ ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಇದಕ್ಕೆ ಡ್ಯಾನಿಯಲ್ ಬಾಲಾಜಿ ಅವರ ಅಕಾಲಿಕ ನಿಧನ ಮತ್ತೊಂದು ಸಾಕ್ಷಿ

ಹೌದು. ತಮ್ಮ ಅಭಿನಯದಿಂದ ಕೇವಲ ತಮಿಳುನಾಡಿನಲ್ಲಷ್ಟೇ ಅಲ್ಲ, ಕರ್ನಾಟಕದಲ್ಲಿಯೂ ಕೂಡ ಮನೆ ಮಾತಾಗಿದ್ದವರು ಡ್ಯಾನಿಯಲ್ ಬಾಲಾಜಿ. ಕಿರಾತಕ ಚಿತ್ರದಲ್ಲಿ ಇವರು ನಿರ್ವಹಿಸಿದ್ದ ಪಾತ್ರವನ್ನ ಯಶ್ ಅಭಿಮಾನಿಗಳಷ್ಟೇ ಅಲ್ಲ ಕನ್ನಡದ ಕಲಾಪ್ರೇಮಿಗಳು ಕೂಡ ಮರೆಯಲು ಸಾಧ್ಯ ಇಲ್ಲ. ಕೇವಲ ಕಿರಾತಕ ಮಾತ್ರ ಅಲ್ಲ 'ಶಿವಾಜಿನಗರ', 'ಡವ್','ಬೆಂಗಳೂರು ಅಂಡರ್‌ವರ್ಲ್ಡ್' ಚಿತ್ರಗಳಲ್ಲಿಯೂ ಕೂಡ ನಟಿಸಿದ್ದ ಡ್ಯಾನಿಯಲ್ ಬಾಲಾಜಿ ಕನ್ನಡದ ಪ್ರಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರ ಕುಟುಂಬದ ಸದಸ್ಯರು ಹೌದು ಅನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ

Kishore wrote an emotional post about his departed friend Daniel Balaji

ಇಂಥ ಡ್ಯಾನಿಯಲ್ ಬಾಲಾಜಿ ಅಭಿನಯಿಸಿದ ಹತ್ತಾರು ಸಿನಿಮಾಗಳಲ್ಲಿ ಪೊಲ್ಲಾಧವನ್ ಸಿನಿಮಾ ಕೂಡ ಒಂದು. ವಿಶೇಷ ಅಂದರೆ ಈ ಚಿತ್ರದಲ್ಲಿ ಇವರ ಜೊತೆ ಕನ್ನಡದ ಹುಲಿ ಕಿಶೋರ್ ಕೂಡ ಕಾಣಿಸಿಕೊಂಡಿದ್ದರು. ಆ ಕಾಲದಲ್ಲಿ ಕಿಶೋರ್ ಹಾಗೂ ಡ್ಯಾನಿಯಲ್ ಬಾಲಾಜಿ ಇಬ್ಬರಿಗೂ ಈ ಚಿತ್ರ ಹೆಸರನ್ನ ತಂದು ಕೊಟ್ಟಿತ್ತು. ಆ ನಂತರ ಇದೇ ಧನುಷ್ ಅಭಿನಯದ ವಡಚೆನೈ ಚಿತ್ರದಲ್ಲಿ ಕೂಡ ತೆರೆ ಹಂಚಿಕೊಂಡಿದ್ದರು ಕಿಶೋರ್ ಹಾಗೂ ಡ್ಯಾನಿಯಲ್ ಬಾಲಾಜಿ. ಆದರೆ ಈಗ ಡ್ಯಾನಿಯಲ್ ಬಾಲಾಜಿ ದೈಹಿಕವಾಗಿ ನಮ್ಮ ನಡುವೆ ಇಲ್ಲ. ಹೀಗಾಗಿ ಆಘಾತಕ್ಕೊಳಗಾಗಿರುವ ಕಿಶೋರ್ ತಮ್ಮ ನೆಚ್ಚಿನ ಗೆಳೆಯ ಡ್ಯಾನಿಯಲ್ ಬಾಲಾಜಿ ನೆನಪಿನಲ್ಲಿ ಪತ್ರವನ್ನ ಬರೆದಿದ್ದಾರೆ. ಮನದ ನೋವನ್ನ ಹಂಚಿಕೊಂಡಿದ್ದಾರೆ

ಗುಡ್ ಬೈ ಬ್ರದರ್.. ವಿಲ್ ಮಿಸ್ ಯು..!

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಡ್ಯಾನಿಯಲ್ ಬಾಲಾಜಿ ಜೊತೆ ಕಳೆದ ಸುಮಧುರ ಕ್ಷಣಗಳನ್ನ ಮೆಲುಕು ಹಾಕಿರುವ ಕಿಶೋರ್, ಪೊಲ್ಲಾದವನ್ ನಮಗೆಲ್ಲರಿಗೆ ಕೇವಲ ಸಿನಿಮಾ ಆಗಿರಲಿಲ್ಲ ಮನೆಯಾಗಿತ್ತು, ಕುಟುಂಬವಾಗಿತ್ತು ಅಂದಿದ್ದಾರೆ. ನಿಯಮಿತವಾಗಿ ಯಾವುದೇ ಮಾತುಕತೆಯಿಲ್ಲದಿದ್ದರೂ, ನಮ್ಮಲ್ಲಿ ಒಬ್ಬರ ಆಲೋಚನೆಗಳು, ಚಲನಚಿತ್ರಗಳು ಮತ್ತು ಯಶಸ್ಸಿನ ಬಗ್ಗೆ ಯಾವಾಗಲಾದರೂ ಬರುವ ಸುದ್ದಿ ಅಥವಾ ವೀಡಿಯೊವನ್ನು ನೋಡಿದಾಗ ನಮ್ಮ ಮುಖದಲ್ಲಿ ಮೂಡುವ ಆ ಮುಗುಳ್ನಗೆ.. ನಾವು ಪರಸ್ಪರರ ಬಗ್ಗೆ ಮಾತನಾಡುವಾಗ .. ಹೊಮ್ಮುವ ಆ ಹೆಮ್ಮೆಯ ಭಾವ.. ನಮ್ಮೊಂದಿಗೆ ಅಥವಾ ನಾವಿಲ್ಲದೆ ನಮ್ಮಲ್ಲಿ ಯಾರು ಯಾವ ಕೆಲಸ ಮಾಡಿದ್ರೂ ನಾವು ಪಡುವ ಆ ಸಂತೋಷ ... ಏನೆಂದು ಹೇಳಲಿ ಎಂದು ತಮ್ಮ ನೋವನ್ನ ಹಂಚಿಕೊಂಡಿದ್ದಾರೆ.

Kishore wrote an emotional post about his departed friend Daniel Balaji

ಇನ್ನೂ ನಾನು ಎಲ್ಲಿ ಹೋದರೂ ಕೂಡ ಜನ ಯಾವಾಗ ವಡಚೆನ್ನೈ -2 ಎಂದು ಕೇಳುತ್ತಲೇ ಇರುತ್ತಾರೆ. ನಾನು ತಮಾಷೆಯಾಗಿ ಹೇಳುತ್ತಿರುತ್ತೇನೆ ವೆಟ್ರಿ ಒಪ್ಪಿಕೊಂಡಿರುವ ಸಿನಿಮಾಗಳ ಸಾಲು ನೋಡಿದ್ರೆ ನಾವು 70 ವರ್ಷ ವಯಸ್ಸಿನವರಾದಾಗ ಮಾತ್ರ ಮಾಡಲು ಸಾಧ್ಯವಾಗಬಹುದು ಎಂದು. ಆದರೆ... ಈಗಲೂ ಅನಿಸುತ್ತಿದೆ ನಾನು ಕರೆ ಮಾಡಿದರೆ ಆ ಕಡೆಯಿಂದ ಆ ನಿನ್ನದೇ ಸ್ಟೈಲಿನ ಕೊರಳ ದನಿ ಅಣ್ಣಾ .. ಎಪ್ಪಡಿ ಇರುಕ್ಕೀಂಗ ಎಂದು ಕೇಳಬಹುದೇನೋ ಎಂದು ಭಾವುಕರಾಗಿದ್ದಾರೆ ಕಿಶೋರ್

More from Filmibeat

English summary
Kannada Actor Kishore Wrote An Emotional Letter Remembering His Departed Friend Daniel Balaji.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X