Kollywood 2025: ಮೊದಲ 6 ತಿಂಗಳಲ್ಲಿ ತಮಿಳು ಚಿತ್ರಗಳ ಫಲಿತಾಂಶ ಏನಾಯ್ತು?

ವರ್ಷದ ಮೊದಲ 6 ತಿಂಗಳು ಕಳೆದೆ ಹೋಯ್ತು. ನೂರಾರು ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿದ್ದವು. ವಾಡಿಕೆಯಂತೆ ಗೆದ್ದ ಸಿನಿಮಾಗಳಿಗಿಂತ ಸೋತ ಸಿನಿಮಾಗಳೇ ಸಂಖ್ಯೆ ಹೆಚ್ಚಿದೆ. ತಮಿಳು ಚಿತ್ರರಂಗದಲ್ಲಿ ಈ ವರ್ಷ ತಕ್ಕ ಮಟ್ಟಿಗೆ ಸಿನಿಮಾಗಳು ಸದ್ದು ಮಾಡಿವೆ.

ಸ್ಟಾರ್ ನಟರ ಆರ್ಭಟ ಅಲ್ಲೂ ನಡೀಲಿಲ್ಲ. ಕಂಟೆಂಟ್ ಇರುವ ಸಿನಿಮಾಗಳಿಗೆ ಪ್ರೇಕ್ಷಕರು ಮಣೆ ಹಾಕಿದ್ದಾರೆ. ಬಹುಕೋಟಿ ವೆಚ್ಚದ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ. ಆದರೆ ಸಣ್ಣ ಬಜೆಟ್ ಸಿನಿಮಾಗಳು ಭರ್ಜರಿ ಸಕ್ಸಸ್ ಕಂಡು ಅಚ್ಚರಿ ಮೂಡಿಸಿವೆ. ಒಟ್ಟಾರೆ ಮೊದಲ 6 ತಿಂಗಳಲ್ಲಿ 110 ತಮಿಳು ಸಿನಿಮಾಗಳು ಬಿಡುಗಡೆಯಾಗಿ ಚಿತ್ರರಂಗ ಸಿಹಿ, ಕಹಿ ಎರಡೂ ಉಂಡಿದೆ.

Kollywood 2025 first half report Hits Misses amp amp Surprises at the Box Office

ಈ ವರ್ಷ ತಮಿಳಿನಲ್ಲಿ ದೊಡ್ಡದಾಗಿ ಹಿಟ್ ಆದ ಸಿನಿಮಾ ಅಜಿತ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ'. ಪ್ರದೀಪ್ ರಂಗನಾಥನ್ ಅಭಿನಯದ 'ಡ್ರ್ಯಾಗನ್' ಮತ್ತೊಂದು ಅಚ್ಚರಿ ಗೆಲುವು ಎಂದೇ ಹೇಳಬೇಕು. ಆದರೆ ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗಳನ್ನೇ ಹಿಂದಿಕ್ಕಿ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಮಾತ್ರ 'ಟೂರಿಸ್ಟ್ ಫ್ಯಾಮಿಲಿ'. ಗಳಿಕೆ ವಿಚಾರದಲ್ಲಿ ಈ ಸಿನಿಮಾ ಸ್ಟಾರ್‌ಗಳ ಸಿನಿಮಾಗಳನ್ನು ಮೀರಿಸದೇ ಇದ್ದರೂ ಕೇವಲ 8 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ 80 ಕೋಟಿ ರೂ. ಕೊಳ್ಳೆ ಹೊಡೆದಿತ್ತು.

ಅಜಿತ್ ದರ್ಬಾರ್

ಸ್ಟಾರ್ ನಟರ ಸಿನಿಮಾಗಳು ಹೆಚ್ಚು ಹೆಚ್ಚು ಬರಲ್ಲ ಎನ್ನುವ ಅಪವಾದ ಇದೆ. ಆದರೆ ಈ ವರ್ಷ ಕಾಲಿವುಡ್‌ನಲ್ಲಿ ಅಜಿತ್ ನಟನೆಯ 2 ಸಿನಿಮಾಗಳು 2 ತಿಂಗಳ ಅಂತರಲ್ಲಿ ಬಂದಿತ್ತು. 'ವಿಡಮುಯರ್ಚಿ' ಜೊತೆಗೆ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಎರಡೂ ಚಿತ್ರಗಳಿಗೆ ಪ್ರೇಕ್ಷಕರಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ 'ಗುಡ್ ಬ್ಯಾಡ್ ಅಗ್ಲಿ' ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. 250 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಈ ವಿಚಾರದಲ್ಲಿ 'ವಿಡಮುಯರ್ಚಿ' ಸಿನಿಮಾ ಹಿಂದೆ ಬಿದ್ದಿತ್ತು.

ಅಚ್ಚರಿ ಗೆಲುವು

'ಕೋಮಲಿ', 'ಲವ್ ಟುಡೇ' ಸಿನಿಮಾಗಳಿಂದ ಸಂಚಲನ ಸೃಷ್ಟಿಸಿವರು ನಟ, ನಿರ್ದೇಶಕ ಪ್ರದೀಪ್ ರಂಗನಾಥನ್. ಈ ವರ್ಷ ನಿರ್ದೇಶಕ ಪಕ್ಕಕ್ಕಿಟ್ಟು 'ಡ್ರ್ಯಾಗನ್' ಚಿತ್ರದಲ್ಲಿ ಹೀರೊ ಆಗಿ ಕೆಲಸ ಮಾಡಿದ್ದರು. ಅಶ್ವಥ್ ಮಾರಿಮುತ್ತು ನಿರ್ದೇಶನದ ಈ ಕಾಮಿಡಿ ಡ್ರಾಮಾ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದು ವಿಶೇಷ. ಯಾವುದೇ ನಿರೀಕ್ಷೆ ಇಲ್ಲದೇ ಬಂದು ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಮುಂದೆ ಪ್ರದೀಪ್ ಸ್ಟಾರ್ ನಟನಾಗಿ ಬೆಳೆಯುತ್ತಾರೆ ಎಂದು ಕೆಲವರು ಭವಿಷ್ಯ ನುಡಿಯುವಂತಾಗಿದೆ. ಇನ್ನು ಶಶಿಕುಮಾರ್ ಹಾಗೂ ಸಿಮ್ರನ್ ನಟನೆಯ 'ಟೂರಿಸ್ಟ್ ಫ್ಯಾಮಿಲಿ' ಸಿನಿಮಾ ಕೂಡ ಇದೇ ಲಿಸ್ಟ್ ಸೇರುತ್ತದೆ.

Kollywood 2025 first half report Hits Misses amp amp Surprises at the Box Office

ಹೀನಾಯ ಸೋಲು

ವಿಕ್ರಂ ನಟನೆಯ 'ವೀರ ಶೂ ಧೀರನ್', ಸೂರ್ಯ ಅಭಿನಯದ ರೆಟ್ರೋ, ಧನುಷ್ ಹಾಗೂ ನಾಗಾರ್ಜುನ ಜೋಡಿಯ 'ಕುಬೇರ' ಮತ್ತು ಕಮಲ್ ಹಾಸನ್ - ಮಣಿರತ್ನಂ ಜೊತೆಯಾಗಿದ್ದ 'ಥಗ್ ಲೈಫ್' ಸಿನಿಮಾಗಳು ಈ ವರ್ಷ ದೊಡ್ಡಮಟ್ಟದಲ್ಲಿ ಸೋಲುಂಡವರು. ಸ್ವತಃ ಸೂರ್ಯ 'ರೆಟ್ರೋ' ಚಿತ್ರ ನಿರ್ಮಾಣ ಮಾಡಿದ್ದರಿಂದ ಹೆಚ್ಚು ನಷ್ಟವಾಗಲಿಲ್ಲ. ಇನ್ನುಳಿದಂತೆ ಧನುಷ್ ನಟನೆಯ 'ಕುಬೇರ' ಸಿನಿಮಾ ತೆಲುಗಿನಲ್ಲಿ ಆವರೇಜ್ ಹಿಟ್ ಅನಿಸಿಕೊಂಡಿದೆ. ಆದರೆ ಯಾಕೋ ತಮಿಳಿನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಇನ್ನು ವಿಕ್ರಂ ಸಿನಿಮಾಗಳು ಮೊದಲಿನ ರೀತಿ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡ್ತಿಲ್ಲ. ಕಳೆದ ವರ್ಷ 'ತಂಗಲಾನ್', ಈ ವರ್ಷ 'ವೀರ ಶೂ ಧೀರನ್' ಅದಕ್ಕೆ ಉತ್ತಮ ಉದಾಹರಣೆ. ವಿಜಯ್ ಸೇತುಪತಿ ನಟನೆಯ 'ಏಸ್' ಸಿನಿಮಾ ಕೂಡ ಗಮನ ಸೆಳೆಯಲಿಲ್ಲ.

'ಥಗ್ ಲೈಫ್' ನಿರಾಸೆ

ದಶಕಗಳ ಬಳಿಕ ಕಮಲ್ ಹಾಸನ್ ಹಾಗೂ ಮಣಿರತ್ನಂ ಒಟ್ಟಾಗಿದ್ದ ಸಿನಿಮಾ 'ಥಗ್ ಲೈಫ್' ನಿರೀಕ್ಷೆ ಹುಸಿಗೊಳಿಸಿತು. ಕನ್ನಡ ಭಾಷೆಯ ಬಗ್ಗೆ ಕಮಲ್ ವಿವಾದಾತ್ಮಕ ಹೇಳಿಕೆಯಿಂದ ಕರ್ನಾಟಕದಲ್ಲಿ ಚಿತ್ರಕ್ಕೆ ಹಿನ್ನಡೆಯಾಗಿತ್ತು. ಅಷ್ಟೇ ಸಿನಿಮಾ ನೋಡಿದ ತಮಿಳು ಪ್ರೇಕ್ಷಕರು ಹೀನಾಯವಾಗಿ ಟ್ರೋಲ್ ಮಾಡಿಬಿಟ್ಟರು. ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಲು ಸಿನಿಮಾ ತಿಣುಕಾಡುವಂತಾಯಿತು.

ದೊಡ್ಡ ಸಿನಿಮಾಗಳ ಕಥೆ ಇದು. ಇನ್ನು ಸಣ್ಣ ಸಿನಿಮಾಗಳ ವಿಚಾರಕ್ಕೆ ಬಂದರೆ 12 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ವಿಶಾಲ್ ನಟನೆಯ 'ಮದಗದರಾಜ' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ಬಂದು ಗೆದ್ದಿತ್ತು. ಸೂರಿ ಹಾಗೂ ಐಶ್ವರ್ಯ ಲಕ್ಷ್ಮಿ ಜೋಡಿಯ 'ಮಾಮನ್' ಚಿತ್ರ ಕೂಡ ಗೆಲುವಿನ ನಗೆ ಬೀರಿತು. 'ಮಾರ್ಗನ್', 'ಇಲೆವೆನ್', 'ಡಿಎನ್‌ಎ', 'ಕಾದಲಿಕ್ಕ ನೇರಮಿಲ್ಲೈ' ರೀತಿಯ ಸಿನಿಮಾಗಳು ಓಕೆ ಓಕೆ ಎನಿಸಿಕೊಂಡವು. ಮುಂದೆ ರಜನಿಕಾಂತ್ ನಟನೆಯ 'ಕೂಲಿ' ಸೇರಿ ಒಂದಷ್ಟು ದೊಡ್ಡ ಸಿನಿಮಾಗಳು ನಿರೀಕ್ಷೆ ಹುಟ್ಟಾಕ್ಕಿವೆ.

More from Filmibeat

English summary
Tamil Cinema Mid-Year Review 2025: Big Stars Stumble, Small Films Shine
Read more about: kollywood ajith
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X