ಪತ್ನಿ ಶಾಲಿನಿ 44ನೇ ಹುಟ್ಟುಹಬ್ಬಕ್ಕೆ ನಟ ಅಜಿತ್ ದುಬಾರಿ ಉಡುಗೊರೆ

ತಮಿಳು ನಟ ಅಜಿತ್ ಅಪಾರ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ನಟಿಸವುದು ಬಿಟ್ಟರೆ ಸಾರ್ವಜನಿಕವಾಗಿ ಅಜಿತ್ ಕಾಣಿಸಿಕೊಳ್ಳುವುದು ಕಮ್ಮಿ. ತಮ್ಮ ಸಿನಿಮಾ ಪ್ರಚಾರಕ್ಕೆ ಕೂಡ ಅಭಿಮಾನಿಗಳ ಪ್ರೀತಿಯ ಥಲಾ ಮಾಧ್ಯಮಗಳ ಮುಂದೆ ಬರಲ್ಲ. ನಟಿ ಶಾಲಿನಿ ಅವರನ್ನು ಅಜಿತ್ ಪ್ರೀತಿಸಿ ಮದುವೆ ಆಗಿದ್ದಾರೆ.

ಅಜಿತ್‌ಗೆ ಸಿನಿಮಾ ಬಿಟ್ಟರೆ ಬೈಕ್, ಕಾರ್ ಕ್ರೇಜ್ ಜಾಸ್ತಿ. ಪೈಲೆಟ್ ಆಗಿ ತರಬೇತಿ ಪಡೆದಿರುವ ಅವರು ವಿಮಾನ ನಡೆಸಲು ಸೈಲೆನ್ಸ್ ಸಹ ಹೊಂದಿದ್ದಾರೆ. ನೂರಾರು ಕೋಟಿ ಆಸ್ತಿ ಒಡೆಯ. ದುಬಾರಿ ಕಾರುಗಳು ಮಾರುಕಟ್ಟೆಗೆ ಬಂದರೆ ಟೆಸ್ಟ್ ಡ್ರೈವ್ ಮಾಡುವುದು, ಇಷ್ಟವಾದರೆ ಕೊಂಡುಕೊಳ್ಳುವುದು ಅಜಿತ್ ಖಯಾಲಿ. ಇತ್ತೀಚೆಗೆ ದುಬೈನಲ್ಲಿ ಐಷಾರಾಮಿ ಕಾರನ್ನು ಅವರು ಕೊಂಡುಕೊಂಡಿದ್ದರು.

Kollywood actor Ajith gifted Lexus car to his wife Shalini on her 44th birthday

ಕಾಲಿವುಡ್ ನಟ ಅಜಿತ್ ಸದ್ಯ 'ವಿಡಾಮುಯರ್ಚಿ' ಹಾಗೂ 'ಗುಡ್‌ ಬ್ಯಾಡ್ ಅಗ್ಲಿ' ಎನ್ನುವ 2 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಎರಡೂ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಸಂಕ್ರಾಂತಿಗೆ 'ಗುಡ್‌ ಬ್ಯಾಡ್ ಅಗ್ಲಿ' ಬಿಡುಗಡೆ ಖಚಿತ ಎನ್ನಲಾಗುತ್ತದೆ. ಇನ್ನು ಸಿನಿಮಾ ವಿಚಾರ ಪಕ್ಕಕ್ಕಿಟ್ಟರೆ ಈ ಬಾಗಿ ಪತ್ನಿ ಹುಟ್ಟುಹಬ್ಬಕ್ಕೆ ಅಜಿತ್ ಭರ್ಜರಿ ಉಡುಗೊರೆ ನೀಡಿದ್ದಾರೆ.

ಅಜಿತ್ ಪತ್ನಿ ಶಾಲಿನಿ ಎರಡು ದಿನಗಳ ಹಿಂದೆ 45ನೇ ವಸಂತಕ್ಕೆ ಕಾಲಿಟ್ಟಿದ್ದರು. ಇದೇ ಸಂಭ್ರಮದಲ್ಲಿ ಆಕೆಗೆ ದುಬಾರಿ ಲೆಕ್ಸಸ್(Lexus car) ಕಾರನ್ನು ಅಜಿತ್ ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ಕಾರಿನ ಮುಂದೆ ಶಾಲಿನಿ ಕ್ಲಿಕ್ಕಿಸಿಕೊಂಡಿರುವ ಫೋಟೊ ವೈರಲ್ ಆಗುತ್ತಿದೆ. ಅಂದಹಾಗಿ ಈ ಐಷಾರಾಮಿ ಕಾರಿನ ಬೆಲೆ 1 ಕೋಟಿ ರೂ.ಯಿಂದ ಶುರುವಾಗುತ್ತದೆ.

Kollywood actor Ajith gifted Lexus car to his wife Shalini on her 44th birthday

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶಾಲಿನಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಮುಂದೆ ನಾಯಕಿಯಾಗಿ ಬಣ್ಣದ ಲೋಕಕ್ಕೆ ವಾಪಸ್ ಬಂದಿದ್ದರು. ಅಂದಹಾಗೆ ಬಾಲನಟಿಯಾಗಿ ಒಂದ್ಕಾಲದಲ್ಲಿ ಮೋಡಿ ಮಾಡಿದ್ದ ಬೇಬಿ ಶಾಮಿಲಿಯ ಸಹೋದರಿ ಈಕೆ. 25 ವರ್ಷಗಳ ಹಿಂದೆ ಬಂದ 'ಅಮರಕಲಂ' ಚಿತ್ರದಲ್ಲಿ ಅಜಿತ್- ಶಾಲಿನಿ ನಾಯಕ-ನಾಯಕಿಯಾಗಿ ನಟಿಸಿದ್ದರು. ಅದೇ ಸಮಯದಲ್ಲಿ ಶುರುವಾದ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು.

ಶೂಟಿಂಗ್ ವೇಳೆಯೇ ಶಾಲಿನಿಗೆ ಅಜಿತ್ ಪ್ರಪೋಸ್ ಮಾಡಿದ್ದರು. ಬಳಿಕ ಪೋಷಕರನ್ನು ಒಪ್ಪಿಸಿ ಮರುವರ್ಷವೇ ಇಬ್ಬರೂ ಮದುವೆ ಆಗಿದ್ದರು. ಮದುವೆ ಬಳಿಕ ಶಾಲಿನಿ ಸಿನಿಮಾಗಳಲ್ಲಿ ನಟಿಸಿವುದು ಕಮ್ಮಿ ಮಾಡಿದರು. ಮಕ್ಕಳು, ಸಂಸಾರದ ಕಡೆ ಹೆಚ್ಚು ಗಮನ ಹರಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಆಕೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

ಇದೇ ವರ್ಷ ಮೇ 1ರಂದು ನಟ ಅಜಿತ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆಗ ಪತಿಗೆ ಶಾಲಿನಿ ಐಷಾರಾಮಿ ಬೈಕ್ ಅನ್ನು ಗಿಫ್ಟ್ ಆಗಿ ಕೊಟ್ಟಿದ್ದರು. ಅಂದಾಜು 10 ಲಕ್ಷ ರೂ. ಮೌಲ್ಯದ ಡುಕಾಟಿ ಬೈಕ್ ಅನ್ನು ಪತಿಗೆ ಉಡುಗೊರೆಯಾಗಿ ನೀಡಿದ್ದರು. ಇದೀಗ ರಿಟರ್ನ್ ಗಿಫ್ಟ್ ಎನ್ನುವಂತೆ ಪತ್ನಿ ಹುಟ್ಟುಹಬ್ಬಕ್ಕೆ ಅಜಿತ್ ಲೆಕ್ಸಸ್ ಕಾರನ್ನು ಕೊಟ್ಟಿದ್ದಾರೆ.

ತಮಿಳು ನಟ ಅಜಿತ್ ಆಗಾಗ್ಗೆ ಬೈಕ್ ಏರಿ ಪ್ರವಾಸ ಕೈಗೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಬೈಕ್‌ನಲ್ಲೇ ವಿಶ್ವಪರ್ಯಟನೆ ನಡೆಸಿದರು. ಮೊದಲ ಭಾಗವಾಗಿ ಭಾರತ, ಭೂತಾನ್, ನೇಪಾಳ ದೇಶಗಳಲ್ಲಿ ಸುತ್ತಾಡಿ ಬಂದಿದ್ದರು. ಇನ್ನು ಕಾರ್ ರೇಸಿಂಗ್‌ನಲ್ಲಿ ಕೂಡ ಅಜಿತ್ ತೊಡಗಿಸಿಕೊಂಡಿದ್ದಾರೆ. ಮುಂದಿನ ವಾರ ಕಾರ್ ರೇಸಿಂಗ್ ತರಬೇತಿ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಬೈಕ್ ಏರಿ ಮತ್ತೆ ವಿಶ್ವಪರ್ಯಟನೆಗೆ ಹೋಗಲು ಅಜಿತ್ ಸಜ್ಜಾಗುತ್ತಿದ್ದಾರೆ.

More from Filmibeat

English summary
Tamil actor Ajith's special birthday gift for wife Shalini on her birthday;
Read more about: ajith tamil kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X