For Quick Alerts
  ALLOW NOTIFICATIONS  
  For Daily Alerts

  ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ವಿಜಯ್?

  |
  ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ವಿಜಯ್? | VIJAY | FILMIBEAT KANNADA

  ಭಾರತ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಸೂಪರ್ ಸ್ಟಾರ್ ರಜಿನಿಕಾಂತ್ ಎಂದು ಹೇಳಲಾಗುತ್ತಿತ್ತು. ಒಂದು ಸಿನಿಮಾಗೆ ರಜಿನಿಕಾಂತ್ 80ರಿಂದ 90 ಕೋಟಿ ಪಡೆಯುತ್ತಾರೆ ಎನ್ನುವ ಸುದ್ದಿ ಇದೆ. ಸಂಭಾವನೆ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಬಹಿರಂಗ ಪಡಿಸದಿದ್ದರು ಸೂಪರ್ ಸಂಭಾವನೆ ವಿಚಾರ ಆಗಾಗ ಸದ್ದು ಮಾಡುತ್ತಲೆ ಇರುತ್ತೆ.

  ತಲೈವಾ ದರ್ಬಾರ್ ಸಿನಿಮಾಗೆ ಬರೋಬ್ಬರಿ 90 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಕೇಳಬಿರುತ್ತಿದೆ. ಆದರೀಗ ಸೂಪರ್ ಸ್ಟಾರ್ ಅನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ ಇಳೆಯ ದಳಪತಿ ವಿಜಯ್. ವಿಜಯ್ ಈಗ ದಕ್ಷಿಣ ಭಾರತೀಯ ಚಿತ್ರರಂಗದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಮಾತ್ರವಲ್ಲ, ಭಾರತದಲ್ಲಿಯೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನುವ ಖ್ಯಾತಿ ಗಳಿಸಿದ್ದಾರೆ.

  ಸಂಭಾವನೆ ವಿಚಾರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಿಂದಿಕ್ಕಿದ ನಟ ವಿಜಯ್ಸಂಭಾವನೆ ವಿಚಾರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಿಂದಿಕ್ಕಿದ ನಟ ವಿಜಯ್

  ಮುಂದಿನ ಸಿನಿಮಾಗೆ ವಿಜಯ್ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರಂತೆ. ಒಂದುವೇಳೆ ವಿಜಯ್ ಸದ್ಯ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಸಂಭಾವನೆ ಪಡೆದುಕೊಂಡರೆ, ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಲಿದ್ದಾರೆ. ಬಾಲಿವುಡ್ ನ ಸ್ಟಾರ್ ನಟರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆಯಲಿದ್ದಾರೆ. ಹಾಗಾದರೆ ವಿಜಯ್ ಸಂಭಾವನೆ ಎಷ್ಟು? ಮುಂದೆ ಓದಿ..

  ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತದ ನಟ

  ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತದ ನಟ

  ಇಳೆಯದಳಪತಿ ವಿಜಯ್ ಭಾರತೀಯ ಚಿತ್ರರಂಗದಲ್ಲಿಯೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಹೇಳಲಾಗುತ್ತಿದೆ. ಬಿಗಿಲ್ ಸಿನಿಮಾ ಕಲೆಕ್ಷನ್ 300 ಕೋಟಿ ಗಡಿದಾಟಿರುವ ಹಿನ್ನಲೆ ವಿಜಯ್ ಸಂಭಾವನೆ ಕೂಡ ದಾಖಲೆ ಮಟ್ಟಕ್ಕೆ ಹೆಚ್ಚಾಗಿದೆ. ವಿಜಯ್ ಮುಂದಿನ ಸಿನಿಮಾಗೆ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಶಿವಮೊಗ್ಗ ಜೈಲಿನಿಂದ ಹೊರಬಂದು ಅಭಿಮಾನಿಗಳಿಗೆ ದರ್ಶನ ನೀಡಿದ ನಟ ವಿಜಯ್ಶಿವಮೊಗ್ಗ ಜೈಲಿನಿಂದ ಹೊರಬಂದು ಅಭಿಮಾನಿಗಳಿಗೆ ದರ್ಶನ ನೀಡಿದ ನಟ ವಿಜಯ್

  ಮುಂಗಡ ಹಣ ಪಡೆದಿರುವ ವಿಜಯ್

  ಮುಂಗಡ ಹಣ ಪಡೆದಿರುವ ವಿಜಯ್

  ವಿಜಯ್ ಈಗಾಗಲೆ ಮುಂದಿನ ಸಿನಿಮಾಗೆ ಮುಗಡ ಹಣ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ದೊಡ್ಡ ಪ್ರೊಡಕ್ಷನ್ ಕಂಪೆನಿಯ ಜೊತೆ ವಿಜಯ್ ಈಗಾಗಲೆ ಮಾತುಕತೆ ಮಾಡಿದ್ದು ಇನ್ನು ಹೆಸರಿಡದ ಚಿತ್ರಕ್ಕೆ ಮುಂಗಡವಾಗಿ ಹಣ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ಸಿನಿಮಾಗೆ ಖ್ಯಾತ ನಿರ್ದೇಶಕ 'ಅಸುರನ್' ಖ್ಯಾತಿಯ ವೆಟ್ರಿಮಾರನ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

  ಜೂನಿಯರ್ NTR ಮತ್ತು ವಿಜಯ್ ಫ್ಯಾನ್ಸ್ ಕಿತ್ತಾಡುತ್ತಿರುವುದು ಈ ಕಾರಣಕ್ಕಾ?ಜೂನಿಯರ್ NTR ಮತ್ತು ವಿಜಯ್ ಫ್ಯಾನ್ಸ್ ಕಿತ್ತಾಡುತ್ತಿರುವುದು ಈ ಕಾರಣಕ್ಕಾ?

  ಅಕ್ಷಯ್, ಖಾನ್ ಗಳನ್ನು ಹಿಂದಿಕ್ಕಿದ ವಿಜಯ್

  ಅಕ್ಷಯ್, ಖಾನ್ ಗಳನ್ನು ಹಿಂದಿಕ್ಕಿದ ವಿಜಯ್

  ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಖಾನ್ ತ್ರಯರು ಮತ್ತು ನಟ ಅಕ್ಷಯ್ ಕುಮಾರ್ ಪಡೆಯುವ ಸಂಭಾವನೆಯನ್ನು ಹಿಂದಿಕ್ಕಿ ವಿಜಯ್ ನಂಬರ್ 1 ಪಟ್ಟಕ್ಕೆ ಏರಿರುವುದು ಅಚ್ಚರಿ ಮೂಡಿಸಿದೆ. ಅಕ್ಷಯ್ ಕುಮಾರ್ ಸಿನಿಮಾವೊಂದಕ್ಕೆ 50 ರಿಂದ 60 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಮಾಸ್ಟರ್ ಚಿತ್ರದಲ್ಲಿ ವಿಜಯ್

  ಮಾಸ್ಟರ್ ಚಿತ್ರದಲ್ಲಿ ವಿಜಯ್

  ವಿಜಯ್ ಸದ್ಯ ಮಾಸ್ಟರ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಮತ್ತು ವಿಜಯ್ ಸೇತುಪತಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮಾಸ್ಟರ್ ಸದ್ಯ ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮಾಸ್ಟರ್ ಸಿನಿಮಾ ಈ ವರ್ಷ ದೀಪಾವಳಿಗೆ ರಿಲೀಸ್ ಆಗುವ ಸಾಧ್ಯತೆ ಇದೆ.

  Read more about: vijay ವಿಜಯ್
  English summary
  Kollywood actor Vijay highest paid actor in India. Vijay beats Super star Rajinikanth, Akshay Kumar And Khans In terms of remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X