'ಪತಿಯನ್ನು ಭೇಟಿ ಮಾಡಿದ ತಿಂಗಳಲ್ಲೇ ನಾನು ಗರ್ಭಿಣಿಯಾದೆ'; ಹೆಬ್ಬುಲಿ ಬ್ಯೂಟಿ ಅಮಲಾ ಪೌಲ್

By ಫಿಲ್ಮಿಬೀಟ್ ಡೆಸ್ಕ್

ಕಿಚ್ಚ ಸುದೀಪ್ ನಟಿಸಿದ 'ಹೆಬ್ಬುಲಿ' ಸಿನಿಮಾದ ನಟಿ ಅಮಲಾ ಪೌಲ್ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಕೆಲವೊಮ್ಮೆ ವಿವಾದಗಳಿಂದ ಸುದ್ದಿಯಲ್ಲಿ ಇರುತ್ತಾರೆ. ಮತ್ತೊಮ್ಮೆ ಕಾಸ್ಟ್ಯೂಮ್‌ನಿಂದ ಟ್ರೋಲ್‌ಗೆ ಒಳಗಾಗುತ್ತಾರೆ. ಇನ್ನೊಮ್ಮೆ ಏನೋ ಹೇಳಿಕೆ ಕೊಟ್ಟು ಟೀಕೆಗೆ ಗುರಿಯಾಗುತ್ತಾರೆ. ಇದೆಲ್ಲವನ್ನೂ ಹೊರತು ಪಡಿಸಿ, ಇತ್ತೀಚೆಗೆ ಅಮಲಾ ಪೌಲ್ ಗಂಡು ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದರು.

ಅಮಲಾ ಪೌಲ್ ಗರ್ಭ ಧರಿಸಿದ ಬಳಿಕ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. ತಮ್ಮ ಸಿನಿಮಾ ಪ್ರಚಾರದಲ್ಲಿ ಆಕ್ಟಿವ್ ಆಗಿ ಓಡಾಡಿದ್ದರು. ಹೆರಿಗೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅಂದಾಗ, ವೇದಿಕೆ ಮೇಲೆ ಹೆಜ್ಜೆ ಹಾಕಿ ಹುಬ್ಬೇರಿಸಿದ್ದರು. ಇದೇ ಸಮಯದಲ್ಲಿ ಅಮಲಾ ಪೌಲ್‌ಗೆ ಸಿನಿಮಾದಲ್ಲೂ ಯಶಸ್ಸು ಸಿಕ್ಕಿತ್ತು. ಈಕೆ ನಟಿಸಿದ 'ಆಡು ಜೀವಿತಂ' ಸಿನಿಮಾ ಬಾಕ್ಸಾಫೀಸ್‌ನಲ್ಲೂ ಗೆದ್ದು ಬೀಗಿತ್ತು.

Kollywood actress Amala Paul got pregnant after she met her husband Jagat Desai

ಇತ್ತೀಚೆಗೆ ಅಮಲಾ ಪೌಲ್ ನಟಿಸಿದ 'ಲೆವೆಲ್ ಕ್ರಾಸ್' ಅನ್ನುವ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ಸಿನಿಮಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಹೆರಿಗೆ ಬಳಿಕ ವಿಶ್ರಾಂತಿ ಪಡೆಯದೆ ಅಮಲಾ ಪೌಲ್ ಓಡಾಡುತ್ತಿದ್ದಾರೆ. ಈ ನಟಿಯ ಕಮಿಟ್‌ಮೆಂಟ್‌ಗೆ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ ಜಗತ್ ದೇಸಾಯಿ ಕೂಡ ಪತಿಗೆ ಸಂಪೂರ್ಣ ಬೆಂಬಲ ಕೊಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಗೆಳತಿ ಪರ್ಲ್‌ ಮಣಿ ಶೋನಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಓಪನ್ ಆಗಿ ಮಾತಾಡಿಕೊಂಡಿದ್ದಾರೆ.

ಈ ಸಂದರ್ಶನದಲ್ಲಿ ಅಮಲಾ ಪೌಲ್ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಟೀಕೆಗೆ ಗುರಿಯಾಗಿದ್ದನ್ನು ನೆನಪಿಸಿಕೊಂಡಿದ್ದಾರೆ. ಆದರೆ, ಅದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಹಾಗೇ ಮಗ ಇಳೈ ಹಾಗೂ ಪತಿ ಜಗತ್ ದೇಸಾಯಿ ಇಬ್ಬರು ತನ್ನ ಜೀವನದಲ್ಲಿ ಬಂದಿದ್ದಕ್ಕೆ ನಾನು ಅದೃಷ್ಟಶಾಲಿ ಎಂದು ಹೇಳಿಕೊಂಡಿದ್ದಾರೆ. ಹಾಗೇ ಗರ್ಭಿಣಿಯಾಗಿದ್ದಾಗ, ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತೇವೆ. ಆರಾಮಾಗಿ ಉಳಿದುಬಿಡುತ್ತಿದ್ದೆ. ಪತಿ ಜಗತ್ ಇಲ್ಲದೆ ಇದ್ದಿದ್ದರೆ, ನಾನು ಹಾಗೇ ಆಗುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಇದೇ ವೇಳೆ ಅಮಲಾ ಪೌಲ್ ತನ್ನ ಪತಿ ಜಗತ್‌ಗೂ ಸಿನಿಮಾ ಅಂದರೆ, ತುಂಬಾನೇ ಇಷ್ಟವೆಂದು ಹೇಳಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ಕಾಣುವ ಕನಸನ್ನು ನಾನು ಕಾಣುತ್ತೇನೆ. ನಾನು ಬಯಸಿದ್ದಕ್ಕಿಂತ ಉತ್ತಮ ಜೀವನ ಸಿಕ್ಕಿದೆ. ಪತಿ ಜಗತ್ ದೇಸಾಯಿಯನ್ನು ಭೇಟಿಯಾದ ಒಂದು ತಿಂಗಳಲ್ಲಿಯೇ ನಾನು ಗರ್ಭಿಣಿಯಾದೆ ಎಂದು ಹೇಳಿಕೊಂಡಿದ್ದಾರೆ. ಅಮಲಾ ಪೌಲ್ ಈ ಸಂದರ್ಶನ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Kollywood actress Amala Paul got pregnant after she met her husband Jagat Desai

ಇತ್ತೀಚೆಗೆ ಅಮಲಾ ಪೌಲ್ ಹಾಗೂ ಆಸಿಪ್ ಅಲಿ ನಟಿಸಿದ್ದ 'ಲೆವೆಲ್ ಕ್ರಾಸ್‌' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾವನ್ನು ಕಥೆ ಬಗ್ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಸಿನಿಮಾ ಹಣ ಗಳಿಕೆಯಲ್ಲಿ ಅಂದುಕೊಳ್ಳುವಷ್ಟು ಸದ್ದು ಮಾಡಲಿಲ್ಲ. ಇದೇ ಸಿನಿಮಾದ ಪ್ರಚಾರದ ವೇಳೆ ಅಮಲಾ ಪೌಲ್ ತುಂಡು ಉಡುಗೆ ತೊಟ್ಟು ಪ್ರಚಾರಕ್ಕೆ ಹೋಗಿದ್ದರು. ಆ ವೇಳೆನೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

'ಲೆವೆಲ್ ಕ್ರಾಸ್' ಸಿನಿಮಾದ ಪ್ರಚಾರದ ಭಾಗವಾಗಿ ಆಸಿಫ್ ಅಲಿ ಜೊತೆ ಅಮಲಾ ಪೌಲ್ ಕೊಚ್ಚಿಯ ಎರ್ನಾಕುಲಂನ ಸೇಂಟ್ ಆಲ್ಬರ್ಟ್ ಕಾಲೇಜಿಗೆ ಹೋಗಿದ್ದರು. ಈ ವೇಳೆ ಕಪ್ಪು ಬಣ್ಣದ ಶಾರ್ಟ್ ಡ್ರೆಸ್‌ನಲ್ಲಿ ಧರಿಸಿ, ಕಾಲೇಜಿಗೆ ಹೋಗಿದ್ದರು. ಇದನ್ನು ನೋಡಿದ ನೆಟ್ಟಿಗರು ವಿದ್ಯಾರ್ಥಿಗಳಿಗೆ ಯಾವ ರೀತಿಯ ಸಂದೇಶ ಕೊಡುತ್ತೀರಾ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ನನಗೆ ಆ ಡ್ರೆಸ್ ಕಂಫರ್ಟೆಬಲ್ ಆಗಿತ್ತು. ಅದನ್ನು ಕ್ಯಾಮರಾಗಳು ಸರಿಯಾಗಿ ತೋರಿಸಿಲ್ಲ ಎಂದು ಖಡಕ್ ಉತ್ತರ ಕೊಟ್ಟಿದ್ದರು.

More from Filmibeat

English summary
Actress Amala Paul got pregnant after she met her husband
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X