ಮೂರು ಅವತಾರವೆತ್ತಿದ ಅಜಿತ್ ; ಗುಡ್ ಬ್ಯಾಡ್ ಅಗ್ಲಿ ಚಿತ್ರದ ಪೋಸ್ಟರ್‌ಗೆ ಭಕ್ತಗಣ ಕ್ಯಾಕಿ..!

ಯಾರೊಂದಿಗೂ ಬೆರೆಯದ, ಯಾವ ಅಭಿಮಾನಿ ಸಂಘಗಳೂ ಸೃಷ್ಟಿಯಾಗದಂತೆ ನೋಡಿಕೊಂಡಿರುವ ತಲಾ ಎನ್ನುವ ಬಿರುದಿನಿಂದಲೇ ಫೇಮಸ್ಸಾಗಿರುವ ಕಾಲಿವುಡ್‌ನ ಸೂಪರ್ ಸ್ಟಾರ್ ಅಜಿತ್ ತಮ್ಮ ಅಭಿಮಾನಿಗಳಿಗೆ ತಮ್ಮ ಮುಂದಿನ ಚಿತ್ರ ಗುಡ್ ಬ್ಯಾಡ್ ಅಗ್ಲಿ ಚಿತ್ರದ ಪೋಸ್ಟರ್‌ವೊಂದನ್ನ ಉಡುಗೊರೆಯನ್ನಾಗಿ ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ

ಗುಡ್ ಬ್ಯಾಡ್ ಅಗ್ಲಿ ಹೆಸರೇ ಹೇಳುವಂತೆ ಚಿತ್ರದಲ್ಲಿ ಅಜಿತ್ ಮೂರು ಪಾತ್ರಗಳನ್ನ ನಿರ್ವಹಿಸಿದ್ದಾರಾ ಅನ್ನುವ ಅನುಮಾನ ಮೂಡುವುದು ಸಹಜ. ಇದಕ್ಕೆ ಪೂರಕವಾಗಿ ಬಿಡುಗಡೆಯಾದ ಫೋಸ್ಟರ್‌ನಲ್ಲಿ ಅಜಿತ್ ಅವರ ಮೂರು ಸಾಹಸ ತೋರಿಸಲಾಗಿದೆ.

kollywood-superstar-ajith-kumar-looks-stylish-in-the-striking-first-look-poster-of-good-bad-ugly

ಕೈಯಲ್ಲಿ ಟ್ಯಾಟೂ ಹೊಂದಿರುವ ಮಧ್ಯದಲ್ಲಿರೋ ಅಜಿತ್ ಸಖತ್ ದಪ್ಪ ಕಂಡರೆ, ಮತ್ತೊಂದರಲ್ಲಿ ಅಜಿತ್ ಮಧ್ಯದ ಬೆರಳು ತೋರಿಸಿದ್ದಾರೆ. ಮತ್ತೊಂದರಲ್ಲಿ ಅಜಿತ್ ಅವರು ಹೊಡೆಯೋಕೆ ರೆಡಿ ಆಗಿದ್ದಾರೆ. ಹಸಿರು ಮತ್ತು ಹಳದಿ ಮಿಶ್ರಿತ ಬಟ್ಟೆಯಲ್ಲಿ ಅಜಿತ್ ಇಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಈ ಸಿನಿಮಾದಲ್ಲಿ ಅಜಿತ್‌ ಕುಮಾರ್ ತ್ರಿಬಲ್‌ ರೋಲ್‌ನಲ್ಲಿ ನಟಿಸುತ್ತಿದ್ದಾರಾ ಎಂಬ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.

ಇನ್ನೂ ಅಜಿತ್ ಸಿನಿಮಾ ಸಂಕ್ರಾಂತಿಗೆ ಬಿಡುಗಡೆಯಾಗುವ ವಾಡಿಕೆ ಇದೆ. ಗುಡ್ ಬ್ಯಾಡ್ ಅಗ್ಲಿ ಕೂಡ ಇದೇ ಸಂಪ್ರದಾಯದಡಿ ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೂ ಅಧಿಕ್ ರವಿಚಂದ್ರನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರಿಬ್ಬರ ಕಾಂಬಿನೇಷನ್​ನ ಮೊದಲ ಸಿನಿಮಾ ಅನ್ನುವುದು ವಿಶೇಷ.

ಅಂದ ಹಾಗೇ ಇದು ಅಜಿತ್ ಅಭಿನಯದ 63ನೇ ಚಿತ್ರ. ಮೈತ್ರಿ ಮೂವಿ ಮೇಕರ್ಸ್ ಚಿತ್ರಕ್ಕೆ ಹಣ ಹೂಡುತ್ತಿದೆ. ಈ ಮೂಲಕ ಕಾಲಿವುಡ್ ಸೂಪರ್ ಸ್ಟಾರ್ ಜೊತೆ ಮೊದಲನೇ ಬಾರಿ ಕೈ ಜೋಡಿಸಿದೆ ಮೈತ್ರಿ ಮೂವಿ ಮೇಕರ್ಸ್. ದೇವಿ ಶ್ರೀ ಪ್ರಸಾದ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಭಿನಂದನ್ ರಾಮಾನುಜಂ ಛಾಯಾಗ್ರಹಣ, ವಿಜಯ್ ವೇಲುಕುಟ್ಟಿ ಸಂಕಲನವಿದೆ.

ಇನ್ನೂ ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿ ಅಜಿತ್ ಗೆ ನಾಯಕಿಯಾಗಿ ಕನ್ನಡದ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಇದೆ. ಆದರೆ ಚಿತ್ರತಂಡ ಮಾತ್ರ ನಾಯಕಿಯ ವಿಚಾರದಲ್ಲಿ ಇಲ್ಲಿಯವರೆಗೆ ಗೌಪ್ಯತೆಯನ್ನ ಕಾಪಾಡಿಕೊಂಡು ಬಂದಿದೆ. ಒಂದು ವೇಳೆ ಈ ಸುದ್ದಿ ನಿಜವಾಗಿದ್ದೇ ಆದಲ್ಲಿ ಗುಡ್ ಬ್ಯಾಡ್ ಅಗ್ಲಿ ಶ್ರೀಲೀಲಾ ಅಭಿನಯದ ಮೊದಲ ತಮಿಳು ಸಿನಿಮಾ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.

kollywood-superstar-ajith-kumar-looks-stylish-in-the-striking-first-look-poster-of-good-bad-ugly

ಒಟ್ನಲ್ಲಿ ಸದ್ಯಕ್ಕೆ ಗುಡ್ ಬ್ಯಾಡ್ ಅಗ್ಲಿ ಚಿತ್ರದ ಹೊಚ್ಚ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಜಿತ್ ಅವರ ಅಸಂಖ್ಯಾತ ಅಗಣಿತ ಅಭಿಮಾನಿಗಳ ಸಂಭ್ರಮವನ್ನೂ ಹೆಚ್ಚಿಸಿದೆ. ತಾನು ಒಪ್ಪಿಕೊಂಡ ಸಿನಿಮಾದ ಕೆಲಸಗಳೆಲ್ಲ ಮುಗಿದ ಮೇಲೆ, ಆ ಕಡೆ ತಿರುಗಿಯೂ ನೋಡದ ಅಜಿತ್ ಈ ಬಾರಿ ಗುಡ್ ಬ್ಯಾಡ್ ಅಗ್ಲಿ ಮೂಲಕ ಯಾವ ಮ್ಯಾಜಿಕ್ ಮಾಡ್ತಾರೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ.

More from Filmibeat

English summary
Kollywood Superstar Ajith Kumar's initial glimpse from his forthcoming movie, 'Good Bad Ugly,' has been unveiled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X