For Quick Alerts
  ALLOW NOTIFICATIONS  
  For Daily Alerts

  ನಟಿ ಖುಷ್ಬೂ ಟ್ವಿಟ್ಟರ್ ಖಾತೆ ಹ್ಯಾಕ್: ಯಾರೆಲ್ಲಾ ಖಾತೆಗಳು ಹ್ಯಾಕ್ ಆಗಿತ್ತು?

  |

  ನಟಿ-ರಾಜಕಾರಣಿ ಖುಷ್ಬೂ ಸುಂದರ್ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದಕ್ಕೂ ಮುಂಚೆ 2020ರ ಏಪ್ರಿಲ್ ತಿಂಗಳಲ್ಲಿ ನಟಿಯ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು. ಈಗ ಎರಡನೇ ಬಾರಿ ಹ್ಯಾಕ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

  ಹ್ಯಾಕರ್ಸ್ ಖುಷ್ಬೂ ಅವರ ಪ್ರೊಫೈಲ್ ಫೋಟೋ, ಕವರ್ ಫೋಟೋ, ಖಾತೆಯ ಹೆಸರು ಬದಲಾವಣೆ ಮಾಡಿದ್ದು, ಹಳೆಯ ಎಲ್ಲಾ ಪೋಸ್ಟ್ ಹಾಗು ಟ್ವೀಟ್ಸ್ ಡಿಲೀಟ್ ಮಾಡಿದ್ದಾರೆ ಎಂದು ವರದಿಯಾಗಿದೆ.

  ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ಖುಷ್ಬೂ ''ಮೂರು ದಿನಗಳ ಹಿಂದೆ ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ನನ್ನ ಖಾತೆಯನ್ನು ಮರಳಿ ಪಡೆಯಲು ಟ್ವಿಟ್ಟರ್ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದೇನೆ. ಕಳೆದ ಮೂರು ದಿನದಿಂದ ಈ ಖಾತೆಯಲ್ಲಿ ಆದ ಬೆಳವಣಿಗೆಯಲ್ಲಿ ನನ್ನ ಪಾತ್ರ ಇಲ್ಲ'' ಎಂದು ಪೋಸ್ಟ್ ಹಾಕಿದ್ದಾರೆ. ಇನ್ನು ಇದಕ್ಕೂ ಮುಂಚೆ ಸಾಕಷ್ಟು ಸೆಲೆಬ್ರಿಟಿಗಳ ಟ್ವಿಟ್ಟರ್-ಫೇಸ್‌ಬುಕ್-ಇನ್ಸ್ಟಾಗ್ರಾಂ ಖಾತೆಗಳು ಹ್ಯಾಕ್ ಆಗಿತ್ತು. ಮುಂದೆ ಓದಿ...

  ಊರ್ಮಿಳಾ ಮಾತೋಂಡ್ಕರ್

  ಊರ್ಮಿಳಾ ಮಾತೋಂಡ್ಕರ್

  2020 ಡಿಸೆಂಬರ್ 16 ರಂದು ಊರ್ಮಿಳಾ ಮಾತೋಂಡ್ಕರ್ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿತ್ತು. ನಟಿಯ ಖಾತೆಯ ಅಡಿ ಬರಹ ಸಹ ಬದಲಾಗಿತ್ತು. ಯಾವುದೇ ಪೋಸ್ಟ್ ಗಳು ಪ್ರದರ್ಶನವಾಗುತ್ತಿರಲಿಲ್ಲ. ಎರಡು ದಿನದ ಬಳಿಕ ಇನ್ಸ್ಟಾ ಖಾತೆ ವಾಪಸ್ ಪಡೆದಿದ್ದರು.

  ವರಲಕ್ಷ್ಮಿ ಶರತ್ ಕುಮಾರ್

  ವರಲಕ್ಷ್ಮಿ ಶರತ್ ಕುಮಾರ್

  2020 ಡಿಸೆಂಬರ್ 2 ರಂದು ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಇನ್ಸ್ಟಾಗ್ರಾಂ ಮತ್ತು ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು. ಹ್ಯಾಕ್ ಆದ ಕೂಡಲೇ ನಟಿ ಸೈಬರ್ ಪೊಲೀಸರಿಗೆ ವಿಷಯ ತಿಳಿಸಿದ್ದು, ವೃತ್ತಿಪರರ ಸಹಾಯದಿಂದ 24 ಗಂಟೆಗಳಲ್ಲಿ ಖಾತೆ ಹಿಂತಿರುಗಿಸಿಕೊಂಡಿದ್ದರು.

  ಪೂಜಾ ಬೇಡಿ ವೆಬ್‌ಸೈಟ್ ಹ್ಯಾಕ್

  ಪೂಜಾ ಬೇಡಿ ವೆಬ್‌ಸೈಟ್ ಹ್ಯಾಕ್

  2020 ಅಕ್ಟೋಬರ್ ತಿಂಗಳಲ್ಲಿ ಬಾಲಿವುಡ್ ನಟಿ ಪೂಜಾ ಬೇಡಿ ಅವರ ವೆಬ್‌ಸೈಟ್‌ ಹ್ಯಾಕ್ ಆಗಿತ್ತು. ಖಾತೆ ಹ್ಯಾಕ್ ಮಾಡಿದ್ದ ಹ್ಯಾಕರ್ಸ್ ಡ್ರಗ್ಸ್ ಮಾರುವುದಾಗಿ ಬೆದರಿಕೆ ಹಾಕಿದ್ದಾರು. ಈ ಸಂಬಂಧ ಗೋವಾ ಸೈಬರ್ ಪೊಲೀಸರಿಗೆ ದೂರು ಸಹ ನೀಡಿದ್ದರು.

  ಚಂದನ್ ಶೆಟ್ಟಿ ಫೇಸ್‌ಬುಕ್ ಹ್ಯಾಕ್

  ಚಂದನ್ ಶೆಟ್ಟಿ ಫೇಸ್‌ಬುಕ್ ಹ್ಯಾಕ್

  2020 ಆಗಸ್ಟ್ ತಿಂಗಳಲ್ಲಿ ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿಯ ಫೇಸ್‌ಬುಕ್ ಖಾತೆಯನ್ನು ಕೆಲವು ವಿದೇಶಿ ಪುಂಡರು ಹ್ಯಾಕ್ ಮಾಡಿದ್ದರು. ಚಂದನ್ ಶೆಟ್ಟಿ ಫೇಸ್‌ಬುಕ್ ಖಾತೆಯಿಂದ ಲೈವ್ ಮಾಡಿದ ವಿದೇಶಿ ವ್ಯಕ್ತಿ, ಲೈವ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ದನು. ಅಸಭ್ಯ ಚಿಹ್ನೆಗಳನ್ನು ತೋರಿ ಪುಂಡಾಟ ನಡೆಸಿದ್ದ.

  ಅಶ್ಲೀಲ ಚಿತ್ರ ಶೂಟಿಂಗ್ & ಮಾರಾಟ: ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ | Filmibeat Kannada
  ಬಾಲಿವುಡ್‌ ಸೆಲೆಬ್ರಿಟಿಗಳು ಹೆಚ್ಚು

  ಬಾಲಿವುಡ್‌ ಸೆಲೆಬ್ರಿಟಿಗಳು ಹೆಚ್ಚು

  ಅಮಿತಾಭ್ ಬಚ್ಚನ್, ಶ್ರುತಿ ಹಾಸನ್, ಶಾಹೀದ್ ಕಪೂರ್, ರಕುಲ್ ಪ್ರೀತ್ ಸಿಂಗ್, ಹೃತಿಕ್ ರೋಷನ್, ಆಮಿ ಜಾಕ್ಸನ್, ಹನ್ಸಿಕಾ ಮೊಟ್ವಾನಿ, ತ್ರಿಷಾ, ಪೂನಂ ಪಾಂಡೆ, ಕರಣ್ ಜೋಹರ್ ಅವರ ಸಾಮಾಜಿಕ ಜಾಲತಾಣಗಳ ಸಹ ಈ ಹಿಂದೆ ಹ್ಯಾಕ್ ಆಗಿದ್ದವು.

  English summary
  Actress-politician Khushbu Sundar twitter account has been hacked 3 days back. old tweets and posts have been deleted.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X