Lal Salaam: ಕೋಟಿ ಕೋಟಿ ಸಂಭಾವನೆ ಪಡೆಯುವ ರಜನಿಕಾಂತ್ ಮಗಳ ಸಿನಿಮಾದಲ್ಲಿ ನಟಿಸಲು ಪಡೆದ ಹಣವೆಷ್ಟು ಗೊತ್ತೆ?

ಈ ವರ್ಷದ ಭರ್ಜರಿ ಹಿಟ್ ಸಿನಿಮಾ ನೀಡಿರುವ ರಜನಿಕಾಂತ್ ತಮ್ಮ ಜೈಲರ್ ಸಿನಿಮಾದಿಂದ ಮತ್ತೆ ತಾನೇ ಸೂಪರ್ ಸ್ಟಾರ್ ಎಂಬುದನ್ನು ಸಾಬೀತು ಪಡಿಸಿದ್ದಾರೆ. ವಯಸ್ಸು ಮಾಗಿದಷ್ಟು ಅಭಿಮಾನಿಗಳ ಸಂಖ್ಯೆ ಏರುತ್ತಲೇ ಇದೆ. ಜೈಲರ್ ಯಶಸ್ಸು ರಜನಿಕಾಂತ್ ಅವರ ಸಂಭಾವನೆ ಮತ್ತೆ ಬೇಡಿಕೆ ಎರಡನ್ನೂ ಹೆಚ್ಚಿಸಿದೆ.

ಸದ್ಯ ತಲೈವರ್ ತಮ್ಮ ಮಗಳು ಐಶ್ವರ್ಯಾ ರಜನಿಕಾಂತ್ ಬರೆದು ನಿರ್ದೇಶಿಸುತ್ತಿರುವ ಲಾಲ್ ಸಲಾಮ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕ್ರಿಕೆಟ್‌ ಹಿನ್ನೆಲೆಯದ್ದು ಎಂದು ವರದಿಯಾಗಿದೆ. ಮಗಳು ಮತ್ತು ತಂದೆಯ ಸಿನಿಮಾ ನೋಡಲು ಸೂಪರ್ ಸ್ಟಾರ್ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಸಂಭಾವನೆ ವಿಚಾರ ಬೆಳಕಿಗೆ ಬಂದಿದೆ.

Lal Salaam: Superstar Rajinikanths Remuneration For Aishwaryas Lal Salaam

ಲಾಲ್ ಸಲಾಮ್‌ಗಾಗಿ ರಜನಿಕಾಂತ್ ಪಡೆದ ಸಂಭಾವನೆ?

ಜೈಲರ್ ಸಿನಿಮಾ ಸಕ್ಸಸ್‌ನಲ್ಲಿರುವ ರಜನಿಕಾಂತ್ ಮಗಳ ಸಿನಿಮಾಗೆ ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಜೈಲರ್‌ಗಾಗಿ ರಜನಿಕಾಂತ್ 110 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಹೀಗಿರುವಾಗ ಲಾಲ್ ಸಲಾಮ್ ಚಿತ್ರದಲ್ಲಿ ಮೊಯ್ದೀನ್ ಭಾಯ್ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ಸುಮಾರು 40 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ ಎಂದು ವರದಿಯಾಗಿದೆ!.

ಹೌದು, ಮಗಳ ಸಿನಿಮಾಗಾಗಿ ನಟ ಕೇವಲ 40 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಜೈಲರ್‌ ಸಿನಿಮಾ ನಟನೆಗಾಗಿ 110 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಆದರೆ, ಅದರ ಐತಿಹಾಸಿಕ ಯಶಸ್ಸಿನ ನಂತರ, ನಿರ್ಮಾಪಕ ಕಲಾನಿಧಿ ಮಾರನ್ ಅವರು 100 ಕೋಟಿ ರೂಪಾಯಿಗಳ ಮತ್ತೊಂದು ಚೆಕ್ ಅನ್ನು ಬೋನಸ್ ಆಗಿ ಹಸ್ತಾಂತರಿಸಿದ್ದರು. ಹೀಗಾಗಿ ಜೈಲರ್ ಸಿನಿಮಾಗಾಗಿ ಅವರು ಪಡೆದ ಸಂಭಾವನೆ ಒಟ್ಟು 210 ಕೋಟಿ ರೂಪಾಯಿಯಾಗಿದೆ. ಲಾಲ್ ಸಲಾಮ್‌ಗಾಗಿ ಅವರು ತೆಗೆದುಕೊಂಡಿರುವ ಹಣ ಅನೇಕರನ್ನು ಆಶ್ಚರ್ಯಗೊಳಿಸಿದೆ. ಮತ್ತೆ ಕೆಲವರನ್ನು ಆಘಾತಗೊಳಿಸಿದೆ.

ಲಾಲ್ ಸಲಾಮ್ ಬಿಡುಗಡೆ

ಲಾಲ್ ಸಲಾಮ್ ಚಲನಚಿತ್ರವು ಡಿಸೆಂಬರ್ 8, 2023 ರಂದು ಧಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಜೈಲರ್‌ನ ದೊಡ್ಡ ಯಶಸ್ಸು ನೀಡಿರುವ ರಜನಿಕಾಂತ್ ಅವರಿಗೆ ಲಾಲ್ ಸಲಾಮ್ ಸಿನಿಮಾ ಕುಡ ಉತ್ತಮ ಯಶಸ್ಸನ್ನು ನೀಡಬೇಕು ಎಂಬ ಒತ್ತಡವಿದೆ. ಅದರಲ್ಲು ಮಗಳು ಐಶ್ವರ್ಯಾಗೆ ಈ ಒತ್ತಡ ಹೆಚ್ಚಾಗಿದೆ.

Lal Salaam: Superstar Rajinikanths Remuneration For Aishwaryas Lal Salaam

ಜೈಲರ್ ಯಶಸ್ಸು, ಜೈ ಭೀಮ್ ನಿರ್ದೆಶಕ ಜಿಟಿ ಜ್ಞಾನವೇಲ್ ಮತ್ತು ಲೋಕೇಶ್ ಕನಕರಾಜ್ ಜೊತೆಗಿನ ಎರಡು ಪ್ರಾಜೆಕ್ಟ್‌ಗಳ ಘೋಷಣೆಯ ನಂತರ ಲಾಲ್ ಸಲಾಮ್ ಮೇಲಿನ ನಿರೀಕ್ಷೆಗಳು ಮಾತ್ರ ಗಗನಕ್ಕೇರಿವೆ. ಐಶ್ವರ್ಯಾ ಈಗಾಗಲೇ 2012 ರಲ್ಲಿ ಬಿಡುಗಡೆಯಾದ ಧನುಷ್ - ಶ್ರುತಿ ಹಾಸನ್ ಅಭಿನಯದ '3' ಸಿನಿಮಾ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಇದಾದ ನಂತರ ಅವರು ವೈ ರಾಜಾ ವೈ ಮತ್ತು ಸಿನಿಮಾ ವೀರನ್ ಎಂಬ ಸಾಕ್ಷ್ಯಚಿತ್ರವನ್ನು ಮಾಡಿದ್ದರು. ಐಶ್ವರ್ಯಾ ಅವರಿಗೆ ಲಾಲ್ ಸಲಾಮ್‌ ಮೇಲೆ ಭಾರೀ ವಿಶ್ವಾಸವಿದೆ. ನಿರ್ದೇಶಕಿ ಐಶ್ವರ್ಯ ಇತ್ತೀಚೆಗೆ ಟ್ವೀಟ್ ಮಾಡಿದ್ದು, ತಲೈವರ್ ರಜನಿಕಾಂತ್ ಅವರು ಲಾಲ್ ಸಲಾಂ ಚಿತ್ರದಲ್ಲಿನ ತಮ್ಮ ಭಾಗಕ್ಕೆ ಡಬ್ಬಿಂಗ್ ಮುಗಿಸಿದ್ದಾರೆ ಮತ್ತು ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದಿದ್ದರು.

ಲಾಲ್ ಸಲಾಮ್ ಪಾತ್ರವರ್ಗ

ಲಾಲ್ ಸಲಾಮ್ ನಲ್ಲಿ ಮೊಯ್ದೀನ್ ಭಾಯಿ ಪಾತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ಮೊಯ್ದೀನ್ ಪತ್ನಿಯಾಗಿ ನಿರೋಷಾ ಮತ್ತು ಮೊಯ್ದೀನ್ ಸಹೋದರಿಯಾಗಿ ಜೀವಿತಾ ರಾಜಶೇಖರ್ ನಟಿಸಿದ್ದಾರೆ. ತಾರಾಗಣದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್, ಟೈಗರ್ ಗಾರ್ಡನ್ ತಂಗದುರೈ, ಸೆಂಥಿಲ್, ಜಯ್ ಪರಾಶರ್ ಮತ್ತು ತಂಬಿ ರಾಮಯ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಲೆಜೆಂಡರಿ ಕಪಿಲ್ ದೇವ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರಕ್ಕೆ ಎಆರ್ ರಹಮಾನ್ ಅವರ ಸಂಗೀತ, ವಿಷ್ಣು ರಾಮಸಾಮಿ ಛಾಯಾಗ್ರಹಣ ಮತ್ತು ಬಿ ಪ್ರವೀಣ್ ಭಾಸ್ಕರ್ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಕಲಾ ನಿರ್ದೇಶಕ ರಾಮು ತಂಗರಾಜ್‌ ನೇತೃತ್ವ ವಹಿಸಿದ್ದರು. ಸುಭಾಸ್ಕರನ್ ಅಲ್ಲಿರಾಜ ಅವರು ತಮ್ಮ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಭಾರಿ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.

More from Filmibeat

English summary
Rajinikanth's remuneration for Aishwarya Rajinikanth's Lal Salaam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X