ಖಾಸಗಿ ವೀಡಿಯೋ ಲೀಕ್; ಇವೆಂಟ್‌ನಲ್ಲಿ "ನಿರ್ದೇಶಕರು ಹೇಳಿದಂತೆ ಮಾಡಿದ್ದೇನೆ" ಎಂದ ಶ್ರುತಿ ನಾರಾಯಣನ್!

By ಫಿಲ್ಮಿಬೀಟ್ ಡೆಸ್ಕ್

ಇತ್ತೀಚೆಗೆ ತಮಿಳು ನಟಿ ಶ್ರುತಿ ನಾರಾಯಣನ್ ಅವರದ್ದೇ ಎನ್ನಲಾದ ಖಾಸಗಿ ವಿಡಿಯೋ ಲೀಕ್ ಆಗಿತ್ತು. ಈ ವಿಡಿಯೋ ಹೊರ ಬೀಳುತ್ತಿದ್ದಂತೆ ಶ್ರುತಿ ನಾರಾಯಣನ್ ಟಾಕ್ ಆಫ್ ದಿ ಟೌನ್ ಆಗಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದ ಈ ನಟಿ, ಪಾತ್ರಕ್ಕಾಗಿ ಈ ಹಂತಕ್ಕೆ ಇಳಿದು ಬಿಟ್ರಾ? ಅಂತ ಕೆಲವು ಕಿಡಿ ಕಾಡಿದ್ದರು.

ಮತ್ತೆ ಕೆಲವರು ಇದು ಶ್ರುತಿ ನಾರಾಯಣ್ ಅವರ ಖಾಸಗಿ ವಿಡಿಯೋ ಅಲ್ಲ. ಎಐ ತಂತ್ರಜ್ಞಾನವನ್ನು ಬಳಸಿರಬಹುದು ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದರು. ತಮಿಳು ಕಿರುತೆರೆಯಲ್ಲಿ ಒಳ್ಳೊಳ್ಳೆಯ ಸೀರಿಯಲ್‌ಗಳಲ್ಲಿ ನಟಿಸಿದ ಶ್ರುತಿಯ ಇಮೇಜ್ ಬೇರೆನೇ ಇತ್ತು. ಆದರೆ, ಖಾಸಗಿ ವಿಡಿಯೋ ಲೀಕ್ ಆದ ಬಳಿಕ ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ. ಈ ಬಗ್ಗೆ ಪರೋಕ್ಷವಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ಕೂಡ ನೀಡಿದ್ದರು.

Leaked video controversy tamil actress Shruthi Narayanan reacts in guts audio release

ಇಷ್ಟೆಲ್ಲ ನಡೆಯುತ್ತಿರುವಾಗಲೇ ಶ್ರುತಿ ನಾರಾಯಣ್ ವೇದಿಕೆ ಮೇಲೆ ಪ್ರತ್ಯಕ್ಷ ಆಗಿದ್ದಾರೆ. ಖಾಸಗಿ ವಿಡಿಯೋ ಲೀಕ್ ಆದ ಬಳಿಕ 23 ವರ್ಷದ ನಟಿಯ ಬದುಕು ಹಾಳಾಗಿ ಹೋಯ್ತು ಅಂತ ಹಲವರು ಮಾತಾಡಿಕೊಂಡಿದ್ದರು. ಅದಕ್ಕೆ ಇನ್‌ಸ್ಟಾಗ್ರಾಂ ಸ್ಟೋರೀಸ್ ಮೂಲಕ ಪ್ರತಿಕ್ರಿಯೆಯನ್ನು ಕೊಟ್ಟಿದ್ದರು. ಈ ಬೆನ್ನಲ್ಲೇ ಶ್ರುತಿ ನಾರಾಯಣನ್ ತನ್ನ ಸಿನಿಮಾ ಇವೆಂಟ್‌ನಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಸೀರೆಯುಟ್ಟು ಟ್ರೆಡಿಷನಲ್ ಲುಕ್‌ನಲ್ಲಿ ಬಂದಿದ್ದ ಈ ನಟಿ ಆ ಸಿನಿಮಾ ಬಗ್ಗೆ ಮಾತಾಡಿದ್ದಾರೆ.

ಶ್ರುತಿ ನಾರಾಯಣನ್ ತಮಿಳಿನಲ್ಲಿ 'ಕಾರ್ತಿಕ ದೀಪಂ' ಹಾಗೂ 'ಸಿರಗಾದಿಕ ಆಸೈ' ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಎರಡೂ ಧಾರಾವಾಹಿಗಳು ಈಕೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದವು. ಕಿರುತೆರೆಯಲ್ಲಿ ಈ ಜನಪ್ರಿಯವಾದ ಬಳಿಕ ವೆಬ್‌ ಸೀರಿಸ್‌ಗೂ ಎಂಟ್ರಿ ಕೊಟ್ಟಿದ್ದರು. ಬಹುಭಾಷಾ ನಟಿ ಸಮಂತಾ ನಟಿಸಿದ್ದ 'ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಇದರೊಂದಿಗೆ ಧನುಷ್ ನಟಿಸಿದ 'ಮಾರಿ' ಸಿನಿಮಾದಲ್ಲೂ ಈ ನಟಿ ನಟಿಸಿದ್ದರು.

Leaked video controversy tamil actress Shruthi Narayanan reacts in guts audio release

ಇನ್ನೇನು ಸಿನಿಮಾಗಳಲ್ಲಿ ಈಕೆಗೆ ಅವಕಾಶ ಸಿಗುತ್ತಿದೆ ಅನ್ನುವಾಗಲೇ ಇಂತಹದ್ದೊಂದು ಘಟನೆ ನಡೆದು ಹೋಗಿದೆ. ಆದರೆ, ಈ ಖಾಸಗಿ ವಿಡಿಯೋ ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಿದ್ದು ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದರು. "ನನ್ನ ವಿಡಿಯೋವನ್ನು ಹಂಚುವುದು ನಿಮಗೆ ತಮಾಷೆಯಾಗಿ ಕಾಣಿಸುತ್ತದೆ. ಆದರೆ, ನನಗೆ ಹಾಗೂ ನನ್ನ ಆತ್ಮೀಯರಿಗೆ ಇದು ತುಂಬಾನೇ ಕಷ್ಟದ ಸನ್ನಿವೇಶ. ನನಗೆ ಇಂದು ತುಂಬಾನೇ ಕಷ್ಟದ ಸಮಯ. ಹಾಗೇ ಇಂತಹ ಸಂದರ್ಭವನ್ನು ಹ್ಯಾಂಡಲ್ ಮಾಡುವುದು ತುಂಬಾನೇ ಕಷ್ಟಕರ ಎನಿಸಿದೆ." ಎಂದು ಹೇಳಿಕೊಂಡಿದ್ದರು.

ಶ್ರುತಿ ನಾರಾಯಣನ್ ಇದು ಅಸಲಿ ಅಲ್ಲ ಅನ್ನೋದನ್ನು ಒತ್ತಿ ಹೇಳುತ್ತಿರುವಾಗಲೇ ಮತ್ತೊಂದು ವಿಡಿಯೋ ರಿಲೀಸ್ ಆಗಿತ್ತು. ಈ ವೇಳೆ ಸ್ವತ: ನಿರ್ದೇಶಕರೊಬ್ಬರೇ ಈ ವಿಡಿಯೋವನ್ನು ರಿಲೀಸ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಅದರಲ್ಲೂ 15 ಸಿನಿಮಾಗಳನ್ನು ನಿರ್ದೇಶಿಸಿರುವ ಡೈರೆಕ್ಟರ್ ಎನ್ನುವ ಸುದ್ದಿ ಹಬ್ಬದ ಬಳಿಕವಂತೂ ನೆಟ್ಟಿಗರು ಕುತೂಹಲ ತಾಳಲಾರದೆ ಆ ನಿರ್ದೇಶಕನನ್ನು ಹುಡುಕಾಡುವುದಕ್ಕೆ ಶುರು ಮಾಡಿದ್ದರು.

ಸತತವಾಗಿ ಬಿಡುಗಡೆಯಾದ ಎರಡನೇ ವಿಡಿಯೋ ಸಮಸ್ಯೆಯನ್ನು ಮತ್ತಷ್ಟು ಕೆರಳಿಸಿತು. ಅವರು ಇದನ್ನು ಉದ್ದೇಶಪೂರ್ವಕವಾಗಿ ಮತ್ತು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ ಎಂಬ ಧ್ವನಿಗಳು ಕೇಳಿಬಂದವು. ಎರಡನೇ ವಿಡಿಯೋ ನಂತರ, ಪರಿಸ್ಥಿತಿ ಹೀಗಿದೆ ಎಂದು ಅವರು ಹೇಳಿದರು, '15 ಚಿತ್ರಗಳನ್ನು ನಿರ್ದೇಶಿಸಿದ ನಿರ್ದೇಶಕರು ಆ ಕೆಲಸ ಮಾಡಿದರು.' ಅವರು ಹಾಗೆ ಹೇಳಿದ ನಂತರ, ಆ ನಿರ್ದೇಶಕ ಯಾರಿರಬಹುದು ಎಂದು ತಿಳಿಯಲು ನೆಟಿಜನ್‌ಗಳು ಹುಡುಕಲು ಪ್ರಾರಂಭಿಸಿದರು.

ಇಂತಹ ಕಷ್ಟದ ಸಮಯದಲ್ಲಿಯೂ ಶ್ರುತಿ ತಾನು ನಟಿಸಿದ 'ಗಟ್ಸ್' ಅನ್ನುವ ಸಿನಿಮಾದ ಆಡಿಯೋ ರಿಲೀಸ್ ಇವೆಂಟ್‌ಗೆ ಹಾಜರಾಗಿದ್ದಾರೆ. ಈ ವೇಳೆ "ನನಗೆ ಏನೂ ಗೊತ್ತಿಲ್ಲ. ಈ ಸಿನಿಮಾದಲ್ಲಿ ಹೇಗೆ ನಟಿಸಬೇಕು ಅಂತ ನಿರ್ದೇಶಕರು ಹೇಳಿಕೊಟ್ಟಿದ್ದಾರೆ. ಅದನ್ನೇ ನಾನು ಮಾಡಿದ್ದೇನೆ. ನನಗೆ ಸೂಕ್ಷ್ಮವಾಗಿ ನಟಿಸುವುದನ್ನು ಹೇಳಿಕೊಟ್ಟಿದ್ದಾರೆ. ಈ ಸಿನಿಮಾಗೆ ನಿಮ್ಮ ಬೆಂಬಲ ಕೊಡಿ. ಈ ಸಿನಿಮಾದಲ್ಲಿ 2ನೇ ನಾಯಕಿಯಾಗಿ ನಟಿಸಿದ್ದರೂ, ಆ ಪಾತ್ರ ಚೆನ್ನಾಗಿದೆ." ಎಂದು ಶ್ರುತಿ ನಾರಾಯಣನ್ ಹೇಳಿಕೊಂಡಿದ್ದಾರೆ.

More from Filmibeat

English summary
Leaked video controversy tamil actress Shruthi Narayanan reacts in guts audio release;
Read more about: actress video kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X