ಮಗನಿಂದ ದಳಪತಿಗೆ ಮತ್ತೊಂದು ಆಘಾತ ; ಅಪ್ಪನ ಹೆಸರನ್ನೇ ಕೈಬಿಟ್ಟ ಜೇಸನ್ - ಕಾಲಿವುಡ್ ಶಾಕ್

ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ತಂದೆಯೇ ಮೊದಲ ಹೀರೋ. ಕ್ಷೇತ್ರ ಯಾವುದೇ ಇರಲಿ ಹಲವರು ತಮ್ಮ ತಂದೆ ತಾಯಿಯ ಹೆಜ್ಜೆಯ ಜಾಡನ್ನು ಹಿಡಿಯುತ್ತಾರೆ. ತಂದೆ ತಾಯಿಯ ಗುಣಗಳನ್ನೇ ಮೈಗೂಡಿಸಿಕೊಳ್ಳುತ್ತಾರೆ. ತಮ್ಮ ತಂದೆ ತಾಯಿಯಿಂದ ಬದುಕಿನ ಪಾಠವನ್ನು ಕೂಡ ಕಲಿಯುತ್ತಾರೆ.

ಆದರೆ ಕೆಲ ಒಮ್ಮೆ ಬದುಕು ಬೇರೆಯದ್ದೇ ಪಾಠ ಕಲಿಸುತ್ತೆ. ಅಗ್ನಿ ಪರೀಕ್ಷೆಯನ್ನೊಡುತ್ತೆ. ಕಣ್ಣೇದುರೇ ತಂದೆ ತಾಯಿ ಸಂಸಾರದಲ್ಲಿ ಬಿರುಕು ಮೂಡುತ್ತೆ. ಆಗ ಎದೆಯೆತ್ತರಕ್ಕೆ ಬೆಳೆದ ಮಕ್ಕಳ ಮೇಲೆ ಅತೀವ ಒತ್ತಡ ಇರುತ್ತೆ. ಯಾರ ಪರ ನಿಲ್ಲಬೇಕು ಎನ್ನುವ ಗೊಂದಲ ಕಾಡುತ್ತೆ.

Legacy Shift Jason Sanjay Drops V for Mother s Initial Amid Parents Divorce Battle

ಇನ್ನು ತಂದೆ ತಾಯಿಯ ಡಿವೋರ್ಸ್ ಕೇವಲ ಕಾನೂನಾತ್ಮಕ ಪ್ರಕ್ರಿಯೆಯಲ್ಲ, ಮಕ್ಕಳ ಪಾಲಿಗೆ ಅದೊಂದು ಭಾವನಾತ್ಮಕ ಭೂಕಂಪ. ಮಕ್ಕಳು ದೊಡ್ಡವರಾಗುತ್ತಿದ್ದರೂ ಕೂಡ ಹೆತ್ತವರ ಡಿವೋರ್ಸ್‌ದಿಂದಾಗಿ ನಿಂತ ನೆಲ ಕುಸಿದಂತಾಗುತ್ತೆ. ಇದು ಕೇವಲ ಜನಸಾಮಾನ್ಯರ ಮಕ್ಕಳ ಕಥೆ ಮಾತ್ರವಲ್ಲ. ಚಿತ್ರರಂಗದ ಸ್ಟಾರ್ ಕಿಡ್ಸ್‌ಗಳ ಕಥೆ ಮತ್ತು ವ್ಯಥೆಯೂ ಹೌದು. ಜೇಸನ್ ಸಂಜಯ್ ಇದಕ್ಕೆ ಸದ್ಯದ ಉದಾಹರಣೆ.

ಹೌದು, ಪತಿಯ ವಿರುದ್ಧ ಸಂಗೀತಾ ಕಾನೂನು ಸಮರ ಸಾರಿದ ಬೆನ್ನಲ್ಲಿಯೇ ಇಬ್ಬರ ಮುದ್ದಿನ ಮಗ ಮತ್ತು ಉದಯೋನ್ಮುಖ ನಿರ್ದೇಶಕ ಜೇಸನ್ ಸಂಜಯ್ ಅವರ ಮೇಲೀಗ ಹಲವರ ಕಣ್ಣಿದೆ.

ಇದಕ್ಕೆ ಪೂರಕವಾಗಿ ಜೇಸನ್ ಸಂಜಯ್ ತಮ್ಮ ತಂದೆಯನ್ನು ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವ ವಿಚಾರ ಜಗಜ್ಜಾಹೀರಾಗಿದೆ. ಈ ಮೂಲಕ ತಮ್ಮ ಬೆಂಬಲ ತಮ್ಮ ತಾಯಿಗೆ ಎಂಬ ಸಂದೇಶವನ್ನು ಜೇಸನ್ ರವಾನೆ ಮಾಡಿದ್ದಾರೆ ಎಂದು ಇಡೀ ಕಾಲಿವುಡ್ ಉದ್ಯಮ ಮಾತನಾಡಿಕೊಳ್ಳುತ್ತಿದೆ.

ಹೀಗಿರುವಾಗ ಇದೀಗ ಜೇಸನ್ ಸಂಜಯ್ ತಮ್ಮ ತಂದೆಯ ಹೆಸರನ್ನು ಕೂಡ ಕೈ ಬಿಟ್ಟಿದ್ದಾರೆ ಎನ್ನುವ ಸುದ್ದಿ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಹೌದು, ಅಸಲಿಗೆ ಜೇಸನ್ ಕೂಡ ಚಿತ್ರರಂಗಕ್ಕೆ ಬಂದಿದ್ಧಾರೆ. ಆದರೆ ನಾಯಕನಾಗಿ ಅಲ್ಲ ಬದಲಿಗೆ ನಿರ್ದೇಶಕನಾಗಿ. ಇವರ ನಿರ್ದೇಶನದ ಚೊಚ್ಚಲ ಚಿತ್ರ ''ಸಿಗ್ಮಾ'' ಸದ್ಯ ಬಿಡುಗಡೆಯ ಹಂತದಲ್ಲಿದೆ.

Legacy Shift Jason Sanjay Drops V for Mother s Initial Amid Parents Divorce Battle

ತಮ್ಮ ಈ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಜೇಸನ್ ಸಂಜಯ್ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಜೇಸನ್ ಸಂಜಯ್ 'ವಿ' ಎಂಬ ಹೆಸರಿನ ಬದಲು ಜೇಸನ್ ಸಂಜಯ್ 'ಎಸ್' ಎಂದು ಬಳಸಿದ್ದಾರೆ ಎಂದು ''ಫಿಲ್ಮಿ ಫಿಗರ್ಸ್'' ಸೇರಿ ಹಲವು ತಮಿಳು ಪತ್ರಿಕೆಗಳು ವರದಿಯನ್ನು ಮಾಡಿವೆ.

ಇನ್ನೂ ಸಾಮಾನ್ಯವಾಗಿ ಚಿತ್ರರಂಗದ ತಾರೆಯರು ಇರಲಿ, ಜನಸಾಮಾನ್ಯರೇ ಇರಲಿ, ತಂದೆಯ ಹೆಸರಿನ ಇನಿಷಿಯಲ್ ಉಪಯೋಗ ಮಾಡುತ್ತಾರೆ. ಆದರೆ ಈಗ ಜೇಸನ್ ತಮ್ಮ ಹೆಸರಿನ ಮುಂದೆ 'ವಿ' ಬದಲು 'ಎಸ್' ಬಳಸಲು ಮುಂದಾಗಿದ್ಧಾರೆ. ಈ ಹಿನ್ನೆಲೆ ತಮ್ಮ ಹೆಸರಿಂದ ತಂದೆಯ ಹೆಸರನ್ನು ಕೈಬಿಡುವ ಮೂಲಕ ಜೇಸನ್ ತಮ್ಮ ತಾಯಿಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾಯಿಯ ಹಿಂದೆ ಬಂಡೆಗಲ್ಲಿನಂತೆ ನಿಂತಿದ್ಧಾರೆ ಎಂದು ತಮಿಳು ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಿವೆ.

ಇನ್ನು ಎಲ್ಲರಿಗೆ ಗೊತ್ತಿರುವಂತೆ ವಿಜಯ್ ಸದ್ಯ ಸಿನಿಮಾ ರಂಗದಿಂದ ರಾಜಕೀಯ ರಂಗಕ್ಕೆ
ಬಂದಿದ್ಧಾರೆ. ''ತಮಿಳಗ ವೆಟ್ರಿ ಕಳಗಂ'' (TVK) ಪಕ್ಷದ ಮೂಲಕ ಹೊಸದೊಂದು ಕ್ರಾಂತಿ ಮಾಡುವ ವಿಶ್ವಾಸದಲ್ಲಿದ್ಧಾರೆ. ಇನ್ನೇನು ಚುನಾವಣೆಗೆ ಕೆಲವೇ ದಿನಗಳಿವೆ. ಇಂತಹ ಪ್ರಮುಖ ಹಂತದಲ್ಲಿ ಈ ಕೌಟುಂಬಿಕ ವಿವಾದ ದಳಪತಿಗೆ ಈಗಾಗಲೇ ನುಂಗಲಾರದ ತುತ್ತಾಗಿದೆ.

ಹೀಗಿರುವಾಗ ಇದೀಗ ಜೇಸನ್ ತಮ್ಮ ಹೆಸರಿನಲ್ಲಿದ್ದ 'ವಿ' ಕಿತ್ತೆಸೆದು ತಾಯಿಯ 'ಎಸ್' ಹೆಸರನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಅಪ್ಪನ ನೆರಳಿನಿಂದ ಆಚೆ ಬಂದು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಜೇಸನ್ ಮುಂದಾಗಿದ್ದಾರೆ ಎನ್ನುವ ಚರ್ಚೆ ಕೂಡ ಸದ್ಯ ತಮಿಳುನಾಡಿನಲ್ಲಿ ನಡೆಯುತ್ತಿದೆ. ಜೇಸನ್ ಅವರ ಈ ನಡೆಯಿಂದ ಕಾಲಿವುಡ್‌ ಸದ್ಯ ಶಾಕ್ ಆಗಿದೆ.

More from Filmibeat

English summary
From 'V' to 'S': Jason Sanjay makes a massive statement by changing his name following parents' divorce. See how Thalapathy Vijay's son is rebranding his legacy before his big directorial debut.
Read more about: vijay kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X