ತೀವ್ರ ವಿರೋಧದ ನಡುವೆಯೂ ತ್ರಿಶಾ ವಿರುದ್ಧದ 'ಸೆಕ್ಸಿಸ್ಟ್' ಹೇಳಿಕೆಯನ್ನು ಸಮರ್ಥಿಸಿಕೊಂಡ ಮನ್ಸೂರ್ ಅಲಿ ಖಾನ್!

ತಮಿಳು ಚಿತ್ರರಂಗದಲ್ಲಿ ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ನಟ ಮನ್ಸೂರ್ ಅಲಿ ಖಾನ್ ಈಗ ಮತ್ತೆ ಚಿತ್ರರಂಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟಿ ತ್ರಿಶಾ ವಿರುದ್ಧ ನೀಡಿದ್ದ 'ಸೆಕ್ಸಿಸ್ಟ್' ಮತ್ತು ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಇಡೀ ಚಿತ್ರರಂಗವೇ ಸಿಡಿದುಬಿದ್ದಿದೆ. ಆದರೂ ಕೂಡ ನಟ ಮನ್ಸೂರ್ ಅಲಿ ಖಾನ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನಟಿ ತ್ರಿಶಾ ಕೂಡ ತನ್ನ 'ಲಿಯೋ' ಸಹನಟ ಮನ್ಸೂರ್ ಅಲಿ ಖಾನ್ ಮಾಡಿದ ಲೈಂಗಿಕ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಬಲವಾಗಿ ಖಂಡಿಸಿದ್ದಾರೆ. ಜೊತೆಗೆ ಈ ನಟನ ಹೇಳಿಕೆಗೆ ನಿರ್ದೇಶಕ ಲೋಕೇಶ್ ಕನಗರಾಜ್ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿದೆ.

Leo Actor Mansoor Ali Khan defends his sexist comments against Actress Trisha

ತೀವ್ರ ವಿರೋಧದ ಬಳಿಕವೈ ಕ್ಷಮೆ ಕೇಳದ ನಟ ಮನ್ಸೂರ್ ಅಲಿ ಖಾನ್

ಮನ್ಸೂರ್ ಅಲಿ ಖಾನ್ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಎಲ್ಲಾ ಟೀಕೆ ಮತ್ತು ವಿರೋಧದ ಬಳಿಕ ನಟ ಈಗ ಸ್ಪಷ್ಟೀಕರಣವನ್ನು ನೀಡಿದ್ದಾರೆ. ವಿವಾದಾತ್ಮಕ ಹೇಳಿಕೆಗಳ ಬಗ್ಗೆ ವಾಟ್ಸಾಪ್ ಮೂಲಕ ಸ್ಪಷ್ಟನೆ ನೀಡಲಾಗಿದ್ದು, ಸಂದೇಶದ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮನ್ಸೂರ್ ಅಲಿ ಖಾನ್ ತಮ್ಮ ಸಂದರ್ಶನದಲ್ಲಿ ತ್ರಿಷಾ ಬಗ್ಗೆ ಹೇಗೆ ಹೆಚ್ಚು ಮಾತನಾಡಿದ್ದಾಗಿ ವಿವರಿಸಿದ್ದಾರೆ. ಆದರೆ ಅದನ್ನು ವಿವಾದವಾಗುವ ರೀತಿಯಲ್ಲಿ ಸಣ್ಣ ಸಣ್ಣ ಕ್ಲಿಪ್‌ಗಳಾಗಿ ಟ್ರಿಮ್ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

"ನಾನು ತ್ರಿಶಾ ವಿರುದ್ಧ ಹೇಳಿಕೆಗಳನ್ನು ನೀಡಿದ್ದಿನಿ ಎಂದು ನನ್ನ ಮಗಳು ಮತ್ತು ಮಗ ನ್ಯೂಸ್ ರಿಪೋರ್ಟ್‌ಗಳನ್ನು ಕಳುಹಿಸಿದ್ದಾರೆ. ನನ್ನ ಚಿತ್ರ ಬಿಡುಗಡೆಯ ಸಮಯದಲ್ಲಿ ಮತ್ತು ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷವನ್ನು ಬೆಂಬಲಿಸಿ ನಾನು ಸ್ಪರ್ಧಿಸಲಿದ್ದೇನೆ ಈ ಸಮಯದಲ್ಲಿ ಇದು ನಡೆಯುತ್ತಿದೆ. ನೀವು ನೋಡಿ, ನಾನು ವಿಡಿಯೋದಲ್ಲಿ ತ್ರಿಶಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದೇನೆ. ಹಳೆ ಕಾಲದ ಹಾಗೆ ಈಗಿನ ಕಾಲದಲ್ಲಿ ನಾಯಕಿಯರ ಜೊತೆ ನಟಿಸುವ ಅವಕಾಶಗಳು ಸಿಗುತ್ತಿಲ್ಲ ಎಂದು ನಾನು ನನ್ನ ಹತಾಶೆಯನ್ನು ಹೊರಹಾಕಿದ್ದೆ" ಎಂದಿದ್ದಾರೆ.

Leo Actor Mansoor Ali Khan defends his sexist comments against Actress Trisha

ಮುಂದುವರಿದು, "ಆ ಕಾಮೆಂಟ್‌ಗಳನ್ನು ಹಗುರವಾದ ಧಾಟಿಯಲ್ಲಿ ಹೇಳಿದೆ. ವಿವಾದ ಸೃಷ್ಟಿಸುವ ರೀತಿಯಲ್ಲಿ ವಿಡಿಯೋವನ್ನು ಟ್ರಿಮ್ ಮಾಡಲಾಗಿದೆ. ಇದಕ್ಕೆ ಹೆದರುವ ವ್ಯಕ್ತಿ ನಾನಲ್ಲ. ತ್ರಿಶಾ ಅವರಿಗೆ ಟ್ರಿಮ್ ಮಾಡಿದ ಆವೃತ್ತಿಯನ್ನು ತೋರಿಸಲಾಗಿದೆ. ನನ್ನ ಜೊತೆ ನಟಿಸಿದ್ದ ನಾಯಕಿಯರು ಈಗ ಎಂಎಲ್ ಎ, ಎಂಪಿ ಆಗಿದ್ದಾರೆ. ಅವರು ಯಶಸ್ವಿ ಉದ್ಯಮಿಗಳನ್ನು ವಿವಾಹವಾಗಿದ್ದಾರೆ" ಎಂದು ಹೇಳಿದ್ದಾರೆ.

"ಲಿಯೋ ಸಿನಿಮಾದ ಪೂಜಾ ಸಮಾರಂಭದಲ್ಲಿ, ನನ್ನ ಮಗಳು ದಿಲ್ರುಬಾ, ತ್ರಿಶಾ ಅಭಿಮಾನಿ ಎಂದು ನಾನು ತ್ರಿಶಾಗೆ ಹೇಳಿದೆ. ನನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಲು ನಾನು 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೆ. ನಾನು ಯಾವಾಗಲೂ ನನ್ನ ಸಹನಟರನ್ನು ಗೌರವಿಸುವವನು. ಇದು ನನ್ನ ವಿರುದ್ಧ ಇರುವ ಕೆಲವರ ಕೃತ್ಯ. ನನ್ನ ಮೇಲೆ ಕೋಪ ತರಿಸಲು ಟ್ರಿಮ್ ಮಾಡಿದ ಆವೃತ್ತಿಯನ್ನು ತೋರಿಸಿದ್ದಾರೆ" ಎಂದು ಹೇಳಿದ್ದಾರೆ.

ಮನ್ಸೂರ್ ಅಲಿ ಖಾನ್ ಹೇಳಿದ್ದೇನು..?

ಇತ್ತೀಚಿನ ಮಾಧ್ಯಮ ಸಂವಾದದ ಸಮಯದಲ್ಲಿ, ಮನ್ಸೂರ್ ಚಿತ್ರದ ಬಗ್ಗೆ ಮಾತನಾಡುತ್ತಾ, ನಟಿ ತ್ರಿಶಾ ಅವರೊಂದಿಗೆ 'ಬೆಡ್ ರೂಮ್ ಸೀನ್' ಹಂಚಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿರುವ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದರು. "ಸಿನಿಮಾದಲ್ಲಿ ತ್ರಿಶಾ ಜೊತೆ ಬೆಡ್ ರೂಮ್ ಸೀನ್ ಇರುತ್ತೆ. ಆಕೆನಾ ಎತ್ಕೊಂಡು ಬೆಡ್ ರೂಮ್‌ಗೆ ಹೋಗ್ತೀನಿ" ಎಂದುಕೊಂಡಿದ್ದೆ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದರು.

ಈ ಹೇಳಿಕೆಗಳಿಗೆ ಶೀಘ್ರದಲ್ಲೇ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳಿ ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ವೀಡಿಯೊ ವೈರಲ್ ಆದ ನಂತರ, ತ್ರಿಶಾ ನಟನನ್ನು ಕರೆದು ಮನ್ಸೂರ್ ಅಲಿ ಖಾನ್ ಹೇಳಿದ್ದನ್ನು ತೀವ್ರವಾಗಿ ಖಂಡಿಸಿದರು. ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಭಾಗವಾಗಿರುವ ಖುಷ್ಬು ಸುಂದರ್ ಅವರು ಕೂಡ ಈ ಬಗ್ಗೆ ಖಂಡಿಸಿದ್ದರು.

More from Filmibeat

English summary
Mansoor Ali Khan defends hid comments against Trisha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X