ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಫೇಸ್ ಬುಕ್ ಹ್ಯಾಕ್ ಆಗಿದೆಯೇ!? ನಿರ್ದೇಶಕ ನೀಡಿದ ಸ್ಪಷ್ಟನೆಯೇನು?
ತಮಿಳು ಸಿನಿಮಾ ನಿರ್ದೇಶಕ ಲೋಕೇಶ್ ಕನಕರಾಜ್ ಬುಧವಾರ ಬೆಳಗ್ಗೆಯಿಂದಲೇ ಸುದ್ದಿಯಲ್ಲಿದ್ದಾರೆ. ಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಕೆಲವು ಅಸಭ್ಯ ವಿಡಿಯೋಗಳು ಪೋಸ್ಟ್ ಆಗಲು ಆರಂಭಿಸಿದ್ದವು. ತಕ್ಷಣ ನಿರ್ದೇಶಕರ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದರು.
ಹಾಗಾದರೇ ನಿಜವಾಗಿ ಆಗಿದ್ದೇನು ಎನ್ನುವ ಬಗ್ಗೆ ತಿಳಿಯಲು ಅಭಿಮಾನಿಗಳು ಕುತೂಹಲ ತೋರಿಸಿದ್ದರು. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವು ಚರ್ಚೆಗಳು ಆರಂಭವಾದವು. ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಹಲವು ಮೀಮ್‌ಗಳು ಮತ್ತು ಕೆಲವು ಗೊಂದಲಮಯ ಕಾಮೆಂಟ್‌ಗಳಿಗೆ ಕಾರಣ ನಂತರ, ನಿರ್ದೇಶಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆಯೇ?: ಲೋಕೇಶ್ ಕನಕರಾಜ್ ಹೇಳಿದ್ದೇನು?
ಫೇಸ್‌ಬುಕ್ ಖಾತೆ ಹ್ಯಾಕ್ ಬಗ್ಗೆ ಲೋಕೇಶ್ ಕನಕರಾಜ್ ಅವರು ತಮ್ಮ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ತಾವು ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಖಾತೆಗಳನ್ನು ಮಾತ್ರ ಬಳಸುತ್ತೇನೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅವರ ಹೆಸರಿನಲ್ಲಿ ಯಾವುದೇ ಖಾತೆಗಳಿ ಇದ್ದರೇ ಅದನ್ನು ನಿರ್ಲಕ್ಷಿಸುವಂತೆ ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
"ಎಲ್ಲರಿಗೂ ಹಾಯ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ವೇದಿಕೆಯಲ್ಲಿ ಮಾತ್ರ ಲಭ್ಯವಿದ್ದೇನೆ. ನಾನು ಇತರ ಯಾವುದೇ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಿಲ್ಲ ಅಥವಾ ಬಳಸುವುದಿಲ್ಲ. ದಯವಿಟ್ಟು ಇತರ ಯಾವುದೇ ವಂಚನೆಯ ಖಾತೆಗಳನ್ನು ನಿರ್ಲಕ್ಷಿಸಿ ಮತ್ತು ಫಾಲೋ ಮಾಡದಿರಿ" ಎಂದು ಟ್ವೀಟ್ ಮಾಡಿದ್ದಾರೆ.
ಲೋಕೇಶ್ ಕನಕರಾಜ್ ಪೋಸ್ಟ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ನಿಮ್ಮ ಈ ಮೇಸ್ಎಜ್ ಹಲವು ಅನುಮಾನಗಳನ್ನು ಕ್ಲಿಯರ್ ಮಾಡಿದೆ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ, "ಫೇಸ್‌ಬುಕ್ ಖಾತೆ ಹ್ಯಾಕ್ ಆಗಿ ಟ್ರೆಂಡಿಂಗ್ ಆಗುತ್ತಿದೆ" ಎಂದು ಬರೆದಿದ್ದಾರೆ. ಆದರೆ, ನಟನ ಸ್ಪಷ್ಟನೆ ಹಲವು ಗೊಂದಲಗಳಿಗೆ ತೆರೆ ಎಳೆದಿದೆ.
ಲೋಕೇಶ್ ಕನಕರಾಜ್ ಇತ್ತೀಚಿನ ಸಿನಿಮಾಗಳು
ಇತ್ತೀಚೆಗೆ ಲೋಕೇರ್ಶ ಕನಕರಾಜ್ ನಿರ್ದೇಶನದ ದಳಪತಿ ವಿಜಯ್, ತ್ರಿಶಾ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಲಿಯೋ ಬಿಡುಗಡೆಯಾಗಿ ಭರ್ಜರಿ ಯಶಸ್ವಿಯಾಗಿದೆ. ಲೋಕೇಶ್ ಕನಕರಾಜ್ ಸಿನೆಮ್ಯಾಟಿಕ್ ಯೂನಿವರ್ಸ್‌ಗೆ 'ಲಿಯೋ' ಇತ್ತೀಚಿನ ಸೇರ್ಪಡೆಯಾಗಿದೆ. ಲಿಯೋ ಚಿತ್ರವು ಕೈತಿ ಮತ್ತು ವಿಕ್ರಮ್ ಸಿನಿಮಾದ ನಂತರ ಎಲ್‌ಯುಸಿಗೆ ಸೇರಿದ ಮತ್ತೊಂದು ಸಿನಿಮಾ.
ನಿರ್ದೇಶಕರ ಮುಂದಿನ ಸಿನಿಮಾ ರಜನಿಕಾಂತ್ ಜೊತೆಗೆ ಇದೆ. ಇನ್ನೂ ಹೆಸರಿಸದ ಸಿನಿಮಾವನ್ನು 'ತಲೈವರ್ 171' ಎನ್ನಲಾಗುತ್ತಿದೆ. ನಟ ರಜನಿಕಾಂತ್ ಅವರು ಟಿಜೆ ಜ್ಞಾನವೇಲ್ ಅವರೊಂದಿಗಿನ ವೆಟೈಯನ್ ಸಿನಿಮಾ ಮುಗಿಸಿದ ನಂತರ ಚಿತ್ರೀಕರಣ ಆರಂಭಿಸಲಿದೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ಚಿತ್ರವು ತೆರೆಗೆ ಬರಲಿದೆ. ಆದರೆ, ಈ ಸಿನಿಮಾ ಲೋಕೇಶ್ ಕನಕರಾಜ್ ಸಿನೆಮ್ಯಾಟಿಕ್ ಯೂನಿವರ್ಸ್ ಭಾಗವಾಗಿರುವುದಿಲ್ಲ.
ಇನ್ನು, ನಿರ್ದೇಶಕ ಕೈತಿ 2 ಮತ್ತು ಸೂರ್ಯ ಪಾತ್ರದ ರೋಲೆಕ್ಸ್‌ನ ಪರಿಚಯದೊಂದಿಗೆ ಲೋಕೇಶ್ ಕನಕರಾಜ್ ಯೂನಿವರ್ಸ್‌ಗೆ ಹೊಸ ಸೇರ್ಪಡೆಗಳನ್ನು ಮಾಡುವ ನಿರೀಕ್ಷೆಯಿದೆ. ಇದರ ಜೊತೆಗೆ ನಟ ಶಾರುಖ್ ಖಾನ್ ಜೊತೆಗೆ ಕೆಲಸ ಮಾಡಲಿದ್ದಾರೆ ಎಂಬ ಬಗ್ಗೆಯೂ ವರದಿಯಾಗುತ್ತಿದೆ. ಮಂಗಳವಾರ ಶಾರುಖ್ ಖಾನ್‌ಗೆ ಸ್ಕ್ರಿಪ್ಟ್ ಅನ್ನು ವಿವರಿಸಿದ್ದಾರೆ ಮತ್ತು ಶೀಘ್ರದಲ್ಲೇ ಚಿತ್ರದ ಮಾಹಿತಿ ದೊರೆಯಲಿದೆ ಎನ್ನಲಾಗಿದೆ.


Click it and Unblock the Notifications











