ಯಾರ ಸಂಪರ್ಕಕ್ಕೂ ಸಿಗಲ್ಲ, ಮತ್ತೆ ವಾಪಸ್ ಬರ್ತೀನಿ: ಲೋಕೇಶ್ ಕನಕರಾಜ್ ಪತ್ರ
'ಲಿಯೋ' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಲೋಕೇಶ್ ಕನಕರಾಜ್ ಸೋಶಿಯಲ್ ಮೀಡಿಯಾಗೆ ಗುಡ್‌ಬೈ ಹೇಳಿದ್ದಾರೆ. ಈ ಸಂಬಂಧ ಒಂದು ಪತ್ರವನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ರಜನಿಕಾಂತ್ ಮುಂದಿನ ಚಿತ್ರಕ್ಕೆ ಲೋಕೇಶ್ ಆಕ್ಷನ್ ಕಟ್ ಹೇಳಲಿದ್ದಾರೆ.
ಒಂದೇ ಒಂದು ಬ್ಲಾಕ್‌ಬಸ್ಟರ್ ಸಿನಿಮಾದಿಂದ ನಿರ್ದೇಶಕರು ಸ್ಟಾರ್ ಸ್ಟೇಟಸ್ ಸಂಪಾದಿಸುತ್ತಿದ್ದಾರೆ. 'ಕೈದಿ', 'ಮಾಸ್ಟರ್', 'ವಿಕ್ರಂ', 'ಲಿಯೋ' ರೀತಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ಲೋಕೇಶ್ ಕನಕರಾಜ್ ಸೌತ್ ಸಿನಿದುನಿಯಾದ ಸ್ಟಾರ್ ನಿರ್ದೇಶಕರ ಲಿಸ್ಟ್ ಸೇರಿದ್ದಾರೆ. ತಮ್ಮ ಸಿನಿಕರಿಯರ್‌ನಲ್ಲಿ 10 ಸಿನಿಮಾಗಳನ್ನು ಮಾತ್ರ ನಿರ್ದೇಶನ ಮಾಡುವುದಾಗಿಯೂ ಲೋಕೇಶ್ ಘೋಷಿಸಿದ್ದಾರೆ.

ಇತ್ತೀಚೆಗೆ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಕೂಡ ಲೋಕೇಶ್ ಕನಕರಾಜ್ ಆರಂಭಿಸಿದ್ದರು. ತಮ್ಮ ಬ್ಯಾನರ್‌ನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲು ತೀರ್ಮಾನಿಸಿದ್ದಾರೆ. 'ಫೈಟ್ ಕ್ಲಬ್' ಹೆಸರಿನಲ್ಲಿ ಲೋಕೇಶ್ ಅರ್ಪಿಸಿದ ಸಿನಿಮಾ ಕೂಡ ಸಕ್ಸಸ್ ಕಂಡಿದೆ. ಇನ್ನು 'ರೊಲೆಕ್ಸ್', 'ಕೈದಿ'-2 ಸಿನಿಮಾಗಳನ್ನು ಕಟ್ಟಿಕೊಡಬೇಕಿದೆ. ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್‌ಗೆ ಎಂಡ್ ಗೇಮ್ ಪ್ಲ್ಯಾನ್ ಮಾಡಬೇಕಿದೆ.
'ಲಿಯೋ' ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಲೋಕೇಶ್ ಕನಕರಾಜ್ ಈಗಾಗಲೇ ಮುಂದಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಮಿಶ್ರಪ್ರತಿಕ್ರಿಯೆ ಸಿಕ್ಕರೂ ಸಿನಿಮಾ 600 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಮುಂದೆ ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ತಲೈವಾ 171 ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ರಜನಿಕಾಂತ್- ಲೋಕೇಶ್ ಕ್ರೇಜಿ ಕಾಂಬಿನೇಷನ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 'ಜೈಲರ್' ಸಿನಿಮಾ ನಿರ್ಮಿಸಿದ ಸನ್ ಪಿಕ್ಚರ್ಸ್ ಸಂಸ್ಥೆ ಈ ಚಿತ್ರ ಕೈಗೆತ್ತಿಕೊಂಡಿರುವುದು ವಿಶೇಷ.
ದಿಢೀರನೆ ಪತ್ರ ಬರೆದು ನಿರ್ದೇಶಕ ಲೋಕೇಶ್ ಕನಕರಾಜ್ ಸೋಷಿಯಲ್ ಮೀಡಿಯಾಕ್ಕೆ ಬ್ರೇಕ್ ನೀಡುವುದಾಗಿ ಘೋಷಿಸಿದ್ದಾರೆ. ತನ್ನ ಮುಂದಿನ ಪ್ರಾಜೆಕ್ಟ್‌ಗಾಗಿ ಕೆಲಸ ಮಾಡಬೇಕಿದ್ದು ಸೋಷಿಯಲ್ ಮೀಡಿಯಾ ಹಾಗೂ ಫೋನ್‌ನಿಂದ ದೂರ ಇರಲು ತೀರ್ಮಾನಿಸಿದ್ದೇನೆ. ತಾವು ಅರ್ಪಿಸಿದ 'ಫೈಟ್ ಕ್ಲಬ್' ಅನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ತಮ್ಮ ಝೀ ಸ್ಕ್ವಾಡ್ ಬ್ಯಾನರ್ ಅಡಿಯಲ್ಲಿ 'ಫೈಟ್ ಕ್ಲಬ್' ಚಿತ್ರವನ್ನು ತೆರೆಗೆ ತಂದಿದ್ದರು.
ನನ್ನ ಮುಂದಿನ ಪ್ರಾಜೆಕ್ಟ್‌ನತ್ತ ಗಮನಹರಿಸಲು ಎಲ್ಲಾ ಸಾಮಾಜಿಕ ಮಾಧ್ಯಮಗಳಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ಫೇಸ್ ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಹೀಗೆ ಎಲ್ಲ ಸಾಮಾಜಿಕ ಜಾಲತಾಣಗಳನ್ನು ತೊರೆದುತ್ತಿದ್ದು ಸೆಲ್ ಫೋನ್‌ಗೂ ಸಿಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ಲೋಕೇಶ್ ಕನಕರಾಜ್ ಟ್ವೀಟ್ ವೈರಲ್ ಆಗಿದೆ. ಈ ಹಿಂದೆ ಕೂಡ ಲೋಕೇಶ್ ಕನಕರಾಜ್ ಇದೇ ರೀತಿ ಸಾಮಾಜಿಕ ಜಾಲತಾಣಗಳಿಗೆ ಬ್ರೇಕ್ ನೀಡಿದ್ದರು.
ಇನ್ನು ತಲೈವಾ 171 ಸಿನಿಮಾ ತಮ್ಮ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಇರಲ್ಲ ಎಂದು ಈಗಾಗಲೇ ಲೋಕೇಶ್ ಕನಕರಾಜ್ ಹೇಳಿದ್ದಾರೆ. ಬೇರೆಯದ್ದೇ ರೀತಿಯಲ್ಲಿ ಸಿನಿಮಾ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷ ಮೇ ವೇಳೆಗೆ ಸಿನಿಮಾ ಶುರುವಾಗಲಿದೆ. ಇನ್ನು ಈ ಚಿತ್ರದಲ್ಲಿ ಶಾರುಖ್ ಖಾನ್ ಸಹ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಶಾರುಖ್ ಒಪ್ಪದ ಕಾರಣ ರಣ್‌ವೀರ್ ಸಿಂಗ್‌ನ ಕರೆತರುವ ಪ್ರಯತ್ನ ನಡೀತಿದೆಯಂತೆ.
ಲೋಕೇಶ್ ಕನಕರಾಜ್ ಬಳಗದಲ್ಲಿ ರತ್ನ ಕುಮಾರ್ ಎಂಬುವವರು ಬರಹಗಾರರಾಗಿ ಗುರ್ತಿಸಿಕೊಂಡಿದ್ದರು. ಲೋಕೇಶ್ ಹಿಟ್ ಸಿನಿಮಾಗಳಲ್ಲಿ ಆತನ ಪಾಲೂ ಇದೆ. ಆದರೆ ಇದೀಗ ರತ್ನ ಕುಮಾರ್ ಸ್ವತಂತ್ರ ನಿರ್ದೇಶಕರಾಗುತ್ತಿದ್ದು ತಲೈವಾ 171 ಸಿನಿಮಾದಲ್ಲಿ ಕೆಲಸ ಮಾಡಲ್ಲ ಎನ್ನಲಾಗುತ್ತಿದೆ.


Click it and Unblock the Notifications











