'ಲಿಯೋ'ಗೆ ತಮಿಳುನಾಡಿನಲ್ಲೇ ಇಲ್ಲದ ಅರ್ಲಿ ಮಾರ್ನಿಂಗ್ ಶೋ ಕರ್ನಾಟಕದಲ್ಲಿ ಯಾಕೆ?

ಕರ್ನಾಟಕದಲ್ಲಿ ಪರಭಾಷಾ ಸಿನಿಮಾ ಹಾವಳಿ ಮುಂದುವರೆದಿದೆ. ರಜನಿಕಾಂತ್ 'ಜೈಲರ್' ಬಳಿಕ ವಿಜಯ್ ನಟನೆಯ 'ಲಿಯೋ' ಸಿನಿಮಾ ಕರ್ನಾಟಕ ಬಾಕ್ಸಾಫೀಸ್‌ ಕೊಳ್ಳೆ ಹೊಡೆಯಲು ಮುಂದಾಗಿದೆ. ಈಗಾಗಲೇ 'ಲಿಯೋ' ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳೇ ಬೆಳಗ್ಗೆ 10 ಗಂಟೆಗೆ ಪ್ರದರ್ಶನ ಆರಂಭಿಸುತ್ತವೆ. ಆದರೆ ತಮಿಳಿನ ಚಿತ್ರವೊಂದನ್ನು ಬೆಳ್ಳಂ ಬೆಳಗ್ಗೆ 4 ಗಂಟೆಗೆ ಪ್ರದರ್ಶನ ಮಾಡಲಾಗುತ್ತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲು ಮುಂಜಾನೆ 6 ಗಂಟೆಗೆ ಮೊದಲ ಶೋ ಪ್ರದರ್ಶನವಾಗುತ್ತಿದೆ. ವಿಪರ್ಯಾಸ ಅಂದ್ರೆ ತಮಿಳುನಾಡಿನಲ್ಲೇ ಅಲ್ಲಿನ ಸರ್ಕಾರ 'ಲಿಯೋ' ಚಿತ್ರದ ಅರ್ಲಿ ಮಾರ್ನಿಂಗ್‌ ಶೋಗಳಿಗೆ ಅವಕಾಶ ಕೊಟ್ಟಿಲ್ಲ. ಅಲ್ಲಿ ಬೆಳಗ್ಗೆ 9 ಗಂಟೆ ಬಳಿಕವೇ ಸಿನಿಮಾ ಪ್ರದರ್ಶನ ಮಾಡುವಂತೆ ಸರ್ಕಾರ ಆದೇಶಿಸಿದೆ.

Leo-early-morning-shows-bengaluru

ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಲಿಯೋ' ಭಾರೀ ಕುತೂಹಲ ಮೂಡಿಸಿದೆ. ದಳಪತಿ ವಿಜಯ್ ಜೊತೆ ತ್ರಿಶಾ ನಾಯಕಿಯಾಗಿ ನಟಿಸಿದ್ದಾರೆ. ಅರ್ಜುನ್ ಸರ್ಜಾ, ಸಂಜಯ್ ದತ್‌ರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಈಗಾಗಲೇ ಸಿನಿಮಾ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಇದೇ ಗುರುವಾರ ಸಿನಿಮಾ ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸಲಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ.

ಸ್ವಾಗತ್ ಎಂಟರ್‌ಪ್ರೈಸಸ್ ಸಂಸ್ಥೆ ಕರ್ನಾಟಕದಲ್ಲಿ 'ಲಿಯೋ' ಸಿನಿಮಾ ವಿತರಣೆ ಹಕ್ಕು ಖರೀದಿಸಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರದರ್ಶನಕ್ಕೆ ತಯಾರಿ ನಡೆಸಲಾಗುತ್ತಿದೆ. ಇತ್ತೀಚೆಗೆ ಯಾವುದೇ ದೊಡ್ಡ ಸಿನಿಮಾಗಳು ಬರದೇ ಥಿಯೇಟರ್‌ಗಳು ಪ್ರೇಕ್ಷಕರ ಬರ ಎದುರಿಸುತ್ತಿವೆ. ಹಾಗಾಗಿ 'ಲಿಯೋ' ರೀತಿಯ ದೊಡ್ಡ ಸಿನಿಮಾಗಳನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನಗಳು ನಡೀಯಿದೆ.

ರಜನಿಕಾಂತ್ ನಟನೆಯ 'ಜೈಲರ್' ಚಿತ್ರಕ್ಕೂ ಬೆಳಗ್ಗೆ 4 ಗಂಟಗೆ ತಮಿಳುನಾಡಿನಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನುಮತಿ ಕೋರಲಾಗಿತ್ತು. ಆದರೆ ಸರ್ಕಾರ ಅವಕಾಶ ನೀಡಿರಲಿಲ್ಲ. 'ಲಿಯೋ' ಚಿತ್ರದ ನಿರ್ಮಾಪಕರು ಮನವಿ ಮಾಡಿದ್ದರು. ಆದರೆ ಸರ್ಕಾರ ಮೊದಲ ವಾರ 5 ಶೋ ಪ್ರದರ್ಶನಕ್ಕೆ ಮಾತ್ರ ಅವಕಾಶ ನೀಡಿದೆ. ಬೆಳಗ್ಗೆ 9 ಗಂಟೆಯ ಬಳಿಕ ಸಿನಿಮಾ ಪ್ರದರ್ಶಿಸುವಂತೆ ಆದೇಶ ನೀಡಿದೆ. ರಾತ್ರಿ 1 ಗಂಟೆಗೆ ಮುನ್ನ ಪ್ರದರ್ಶನ ಮುಗಿಸುವಂತೆ ಹೇಳಿದೆ. ಇದನ್ನು ಪ್ರಶ್ನಿಸಿ ನಿರ್ಮಾಪಕರು ದೂರು ದಾಖಲಿಸಲು ಮುಂದಾಗಿದ್ದಾರೆ.

ಸ್ಟಾರ್‌ ನಟರ ಸಿನಿಮಾಗಳು ರಿಲೀಸ್ ಆದಾಗ ಥಿಯೇಟರ್‌ಗಳ ಮುಂದೆ ಸಂಭ್ರಮಾಚರಣೆ ನಡೆಯುತ್ತದೆ. ಬೆಳ್ಳಂ ಬೆಳಗ್ಗೆ ಸಂಭ್ರಮಾಚರಣೆ ಸಂದರ್ಭಗಳಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಇದೇ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಅಜಿತ್ ನಟನೆಯ 'ಥುನಿವು' ಸಿನಿಮಾ ರಿಲೀಸ್ ಆಗಿತ್ತು. ಅಜಿತ್ ಅಭಿಮಾನಿಯೊಬ್ಬ ಸಂಭ್ರಮಾಚರಣೆ ವೇಳೆ ಟ್ಯಾಂಕರ್ ಮೇಲಿಂದ ಬಿದ್ದ ಘಟನೆ ನಡೆದಿತ್ತು. ವಿಜಯ್‌ಗೂ ತಮಿಳುನಾಡಿನಲ್ಲಿ ಭಾರೀ ಕ್ರೇಜ್ ಇದೆ. ಹಾಗಾಗಿ ಸಿನಿಮಾ ರಿಲೀಸ್ ವೇಲೆ ಅಹಿತಕರ ಘಟನೆಗಳು ನಡೆಯಬಾರದು ಎಂದು ಅಲ್ಲಿ ಸರ್ಕಾರ ಅರ್ಲಿ ಮಾರ್ನಿಂಗ್ ಶೋಗಳಿಗೆ ಅನುಮತಿ ನೀಡಿಲ್ಲ.

ಕರ್ನಾಟಕ ಮಾತ್ರವಲ್ಲ ಆಂಧ್ರ, ತೆಲಂಗಾಣ ಹಾಗೂ ಕೇರಳದಲ್ಲೂ ಬೆಳ್ಳಂ ಬೆಳಗ್ಗೆ 'ಲಿಯೋ' ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ತಮಿಳುನಾಡಿನಲ್ಲಿ ಅರ್ಲಿ ಮಾರ್ನಿಂಗ್ ಶೋಗಳಿಲ್ಲದೇ ಎದುರಾಗುವ ನಷ್ಟ ಉಳಿದ ಹೊರರಾಜ್ಯಗಳಿಂದ ಸರಿದೂಗುವ ಲೆಕ್ಕಾಚಾರವೂ ನಡೆದಿದೆ. ಇದೆಲ್ಲದರ ನಡುವೆ ಕರ್ನಾಟಕದಲ್ಲಿ ಬೆಳ್ಳಂ ಬೆಳಗ್ಗೆ ತಮಿಳು ಸಿನಿಮಾವನ್ನು ಪ್ರದರ್ಶಿಸುವ ಅವಶ್ಯಕತೆ ಏನಿದೆ? ಎನ್ನುವ ಪ್ರಶ್ನೆಯೂ ಎದ್ದಿದೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ಬರೀ 'ಲಿಯೋ' ಮಾತ್ರವಲ್ಲ ಬೆಂಗಳೂರಿನಲ್ಲಿ ತೆಲುಗಿನ 'ಟೈಗರ್ ನಾಗೇಶ್ವರ ರಾವ್' ಸಿನಿಮಾ ಮೊದಲ ಪ್ರದರ್ಶನ ಬೆಳಗ್ಗೆ 6 ಗಂಟೆಗೆ ಶುರುವಾಗುತ್ತಿದೆ.

More from Filmibeat

English summary
Thalapathy vijay's LEO shows start from 4am across Karnataka;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X