Leo scam: 'ಲಿಯೋ' ₹400 ಕೋಟಿ ರೂ. ಕಲೆಕ್ಷನ್ ರಿಪೋರ್ಟ್ ಫೇಕ್? ಆನ್‌ಲೈನ್‌ ಬುಕ್ಕಿಂಗ್ ಎಲ್ಲಾ ಮೋಸ?

ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ದಸರಾ ಸಂಭ್ರಮದಲ್ಲಿ ರಿಲೀಸ್ ಆಗಿ ಪ್ರದರ್ಶನ ಕಾಣುತ್ತಿದೆ. ಆದರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದು ನಿಧಾನವಾಗಿ ಕ್ರೇಜ್ ಕಮ್ಮಿ ಆಗ್ತಿದೆ. ಸಿನಿಮಾ ಮೊದಲ ದಿನ 148 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಘೋಷಿಸಿತ್ತು. ಬಳಿಕ ಸಿನಿಮಾ ಗಳಿಕೆ ಬಗ್ಗೆ ಅಧಿಕೃತ ಮಾಹಿತಿ ಸಿಗಲಿಲ್ಲ.

ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಸಿನಿಮಾ ಸೆಟ್ಟೇರಿದ ದಿನದಿಂದಲೂ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. 'ಖೈದಿ', 'ವಿಕ್ರಂ' ರೀತಿಯ ಸೆನ್ಸೇಷನಲ್ ಸಿನಿಮಾಗಳ ಸರದಾರ ಲೋಕೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂದಾಗಲೇ ಕುತೂಹಲ ಮೂಡಿತ್ತು. ಈ 'ಮಾಸ್ಟರ್' ಚಿತ್ರದಲ್ಲಿ ವಿಜಯ್- ಲೋಕೇಶ್ ಒಟ್ಟಿಗೆ ಕೆಲಸ ಮಾಡಿದ್ದರು. ಸಿನಿಮಾ ಸಕ್ಸಸ್ ಕಂಡಿತ್ತು. ಹಾಗಾಗಿ ಸಹಜವಾಗಿಯೇ ಈ ಕಾಂಬಿನೇಷನ್‌ ಬಗ್ಗೆ ನಿರೀಕ್ಷೆ ಇತ್ತು. ನಿರೀಕ್ಷೆಗೆ ತಕ್ಕಂತೆ ಪ್ರೀ ರಿಲೀಸ್ ಬ್ಯುಸಿನೆಸ್ ನಡೆದಿತ್ತು.

Leo-fake-collections-trend

ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ 'ಲಿಯೋ' ಸಿನಿಮಾ ಹಿಂದೆ ಬಿದ್ದಿತ್ತು. ಪರಿಣಾಮ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್ ಮಾಡ್ತಿಲ್ಲ ಎನ್ನುವ ಚರ್ಚೆ ನಡೀತಿದೆ. ಭಾರೀ ಹೈಪ್ ಇದ್ದಿದ್ದರಿಂದ ಅಡ್ವಾನ್ಸ್ ಬುಕ್ಕಿಂಗ್ ಚೆನ್ನಾಗಿತ್ತು. ಬೆಂಗಳೂರಿನಲ್ಲಿ ಟಿಕೆಟ್ ದರ 1000 ರೂ. ದಾಟಿತ್ತು. ಮೊದಲ ದಿನ ಅಡ್ವಾನ್ಸ್ ಬುಕ್ಕಿಂಗ್ ಕಾರಣ ಚಿತ್ರಕ್ಕೆ ಭಾರೀ ಓಪನಿಂಗ್ ಸಿಕ್ಕಿತ್ತು. ಭಾರತದಲ್ಲಿ ಮಾತ್ರವಲ್ಲದೇ ಓವರ್‌ಸೀಸ್‌ ಮಾರ್ಕೆಟ್‌ನಲ್ಲೂ ಭರ್ಜರಿ ಕಲೆಕ್ಷನ್ ಆಗಿತ್ತು. ಮಿಶ್ರಪ್ರತಿಕ್ರಿಯೆ ಬಳಿಕ ಸಿನಿಮಾ ಸದ್ದು ಕಮ್ಮಿ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಿನಿಮಾ 300, 400, 500 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನುವ ಚರ್ಚೆ ನಡೀತಿದೆ. ಆದರೆ ಇದು ಫೇಕ್ ಎಂದು ಕೆಲವರು ಹೇಳುತ್ತಿದ್ದಾರೆ. ಚಿತ್ರತಂಡ ಮೊದಲ ದಿನ 148 ಕೋಟಿ ರೂ. ಕಲೆಕ್ಷನ್ ಎಂದು ಘೋಷಿಸಿದ ಬೆನ್ನಲ್ಲೇ ನೆಗೆಟಿವ್ ಟಾಕ್ ಶುರುವಾಯಿತು. 4000 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾ ಇಷ್ಟು ಕಲೆಕ್ಷನ್ ಮಾಡೋಕೆ ಹೇಗೆ ಸಾಧ್ಯ? KGF-2, RRR ಸಿನಿಮಾಗಳು 10000 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಹಾಗಾಗಿ ಭಾರೀ ಕಲೆಕ್ಷನ್ ದಾಖಲಾಗಿತ್ತು. ಆದರೆ 'ಲಿಯೋ' ಇಷ್ಟು ಗಳಿಸಲು ಸಾಧ್ಯವೇ ಇಲ್ಲ ಎಂದರು.

'ಲಿಯೋ' ಕಲೆಕ್ಷನ್ ವಿಚಾರದಲ್ಲಿ ಪ್ರಾಕ್ಸಿ ನಡೀತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಆರೋಪಿಸುತ್ತಿದ್ದಾರೆ. ಸದ್ಯ #Leoscam #LeoDisaster ಟ್ಯಾಗ್ ಟ್ರೆಂಡ್ ಆಗುತ್ತಿದೆ. ಒಬ್ಬ ನಟನ ಸಿನಿಮಾ ಕಲೆಕ್ಷನ್ ಬಗ್ಗೆ ಬಗ್ಗೆ ಬೇರೆ ನಟರ ಅಭಿಮಾನಿಗಳು ಫೇಕ್ ಎನ್ನುವುದು ಸಹಜ. 'ಲಿಯೋ' ವಿಚಾರದಲ್ಲೂ ಇದೇ ನಡೀತಿದೆ ಎನ್ನುವವರು ಇದ್ದಾರೆ.

ಥ್ರಿಯೇಟ್ರಿಕಲ್ ರಿಲೀಸ್ ಸಿನಿಮಾಗಳ ರೆವೆನ್ಯೂ ಟ್ರಾಕ್ಕಿಂಗ್ ಸೈಟ್ ಕಾಮ್‌ಸ್ಕೋರ್ ನೀಡಿರುವ 'ಲಿಯೋ' ಕಲೆಕ್ಷನ್ ಲೆಕ್ಕ ಸುಳ್ಳು ಎನ್ನುವುದು ಕೆಲವರ ವಾದ. ಮತ್ತೊಂದು ಕಡೆ ರಜನಿಕಾಂತ್ ಅಭಿಮಾನಿಗಳು 'ಜೈಲರ್' ಸಿನಿಮಾ ಬುಕ್ಕಿಂಗ್ ಇದಕ್ಕಿಂತ ಚೆನ್ನಾಗಿತ್ತು. ಆದರೆ ಕಲೆಕ್ಷನ್ ಕಮ್ಮಿ ಇತ್ತು. ಅದು ಹೇಗೆ ಸಾಧ್ಯ? ಎನ್ನುತ್ತಿದ್ದಾರೆ. 'ಲಿಯೋ' ಬುಕ್ಕಿಂಗ್ ಫುಲ್ ಎಂದು ತೋರಿಸಿದರೂ ಥಿಯೇಟರ್ ಖಾಲಿ ಇದೆ ನೋಡಿ ಎಂದು ವಿಡಿಯೋವೊಂದು ವೈರಲ್ ಆಗ್ತಿದೆ.

'ಲಿಯೋ' ಆದ 5 ದಿನಕ್ಕೆ ವಿಜಯ್ ನಟನೆಯ ಹೊಸ ಸಿನಿಮಾ ಮುಹೂರ್ತ ನೆರವೇರಿದೆ. ವೆಂಕಟ್ ಪ್ರಭು ನಿರ್ದೇಶನದ ಚಿತ್ರದಲ್ಲಿ ವಿಜಯ್ ನಟಿಸುತ್ತಿದ್ದು ಅದ್ಧೂರಿಯಾಗಿ ಪೂಜೆ ಸಲ್ಲಿಸಿ ಚಿತ್ರೀಕರಣಕ್ಕೆ ಚಾಲನೆ ಕೊಡಲಾಗಿದೆ. ಕಲಾವಿದರು ಹಾಗೂ ತಂತ್ರಜ್ಞರ ತಂಡವನ್ನು ಘೋಷಿಸಲಾಗಿದೆ. 'ಲಿಯೋ' ಸಿನಿಮಾ ರಿಲೀಸ್ ಆಗಿ ವಾರಕ್ಕೆ ಹೊಸ ಸಿನಿಮಾ ಯಾಕೆ ಶುರು ಮಾಡಿದರು? ಎಂದು ಕೆಲವರು ಕೇಳುತ್ತಿದ್ದಾರೆ.

More from Filmibeat

English summary
Netizens slams leo makers for collection reports
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X