Leo: 'ವಿಕ್ರಮ್' ರೋಲೆಕ್ಸ್‌ಗೂ 'ಲಿಯೊ' ನಾಯಕಿಗೂ ಲಿಂಕ್? ತ್ರಿಶಾ ಟ್ಯಾಟ್ಯೂ ಹುಟ್ಟುಹಾಕಿತು ಅನುಮಾನ!

ಬ್ಲಾಕ್‌ಬಸ್ಟರ್ ಚಿತ್ರ ಮಾಸ್ಟರ್ ಬಳಿಕ ತಮಿಳು ನಟ ದಳಪತಿ ವಿಜಯ್ ಹಾಗೂ ಮಾಸ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಕಾಂಬಿನೇಶನ್ ಮತ್ತೊಮ್ಮೆ ಒಂದಾಗಿದ್ದು ಇದೀಗ ಲಿಯೊ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು ಸದ್ಯ ಚಿತ್ರ ಸೆಪ್ಟೆಂಬರ್ ತಿಂಗಳಿನಲ್ಲಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.

ಬ್ಲಾಕ್‌ಬಸ್ಟರ್ ಹಿಟ್ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಲಿಯೊ ಸಿನಿಮಾ ಸದ್ಯ ಸಿನಿ ರಸಿಕರಲ್ಲಿ ಅತಿದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ವಿಭಿನ್ನ ಮಾಸ್ ಸಿನಿಮಾಗಳನ್ನು ರೋಮಾಂಚನಕಾರಿ ಅನುಭವ ನೀಡುವ ಮಟ್ಟಕ್ಕೆ ಕಟ್ಟಿಕೊಡಬಲ್ಲ ಹಿಟ್ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಮೇಲೆ ಸಿನಿ ರಸಿಕರಿಗೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟುಕೊಂಡಿದೆ.

trisha-krishnan-scorpio-tattoo

ಇನ್ನು ಲಿಯೊ ಚಿತ್ರ ತನ್ನ ತಾರಾಗಣದ ಕಾರಣದಿಂದಾಗಿಯೂ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ನಾಯಕಿಯಾಗಿ ತ್ರಿಶಾ ಕೃಷ್ಣನ್ ನಟಿಸಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ವಿಜಯ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ತ್ರಿಶಾ ಮಾತ್ರವಲ್ಲದೇ ಪ್ರಿಯಾ ಆನಂದ್ ಹಾಗೂ ಪ್ರಿಯಾಮಣಿ ಸಹ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ದಿಗ್ಗಜ ನಟರಾದ ಸಂಜಯ್ ದತ್, ಅರ್ಜುನ್ ಸರ್ಜಾ ಸಹ ನಟಿಸಿದ್ದು ಇವರುಗಳ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿಸಿದೆ.

ಅಲ್ಲದೇ ಲಿಯೊ ಚಿತ್ರ ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್‌ನ ಒಂದು ಭಾಗ ಎಂದೇ ಹೇಳಲಾಗುತ್ತಿದ್ದು, ಈ ಚಿತ್ರಕ್ಕೂ ಈ ಹಿಂದೆ ಲೋಕೇಶ್ ಕನಕರಾಜ್ ನಿರ್ದೇಶನದ ಅಡಿಯಲ್ಲಿ ಬಿಡುಗಡೆಗೊಂಡಿದ್ದ ಖೈದಿ ಹಾಗೂ ವಿಕ್ರಮ್ ಚಿತ್ರಗಳಿಗೂ ಲಿಯೊಗೂ ಲಿಂಕ್ ಇರಲಿದೆ ಎನ್ನಲಾಗುತ್ತಿದೆ. ವಿಕ್ರಮ್ ಚಿತ್ರದ ಅಂತ್ಯದಲ್ಲಿ ರೋಲೆಕ್ಸ್ ಪಾತ್ರವನ್ನು ಪರಿಚಿಯಿಸಿ ಖೈದಿಗೂ ವಿಕ್ರಮ್ ಚಿತ್ರಕ್ಕೂ ಕನೆಕ್ಷನ್ ಕೊಟ್ಟಿದ್ದ ಲೋಕೇಶ್ ಕನಕರಾಜ್ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ತ್ರಿಶಾ ಕೃಷ್ಣನ್ ನೂತನ ಫೋಟೊವೊಂದು ವೈರಲ್ ಆಗಿದೆ. ಹೌದು, ತ್ರಿಶಾ ಕೃಷ್ಣನ್ ಹಂಚಿಕೊಂಡಿರುವ ಹೊಸ ಫೋಟೊದಲ್ಲಿ ಕೈ ಮೇಲೆ ಚೇಳಿನ ಟ್ಯಾಟ್ಯೂ ಒಂದಿದೆ. ಇದೇ ಟ್ಯಾಟ್ಯೂ ವಿಕ್ರಮ್ ಕ್ಲೈಮ್ಯಾಕ್ಸ್‌ನಲ್ಲಿ ಬರುವ ರೋಲೆಕ್ಸ್ ಕುತ್ತಿಗೆಯಲ್ಲಿಯೂ ಸಹ ಇತ್ತು. ಸದ್ಯ ತ್ರಿಶಾ ಕೈನಲ್ಲಿ ಇರುವ ಈ ಟ್ಯಾಟ್ಯೂವನ್ನು ಗಮನಿಸಿರುವ ಸಿನಿ ರಸಿಕರು ರೋಲೆಕ್ಸ್‌ಗೂ ಲಿಯೊ ಚಿತ್ರದಲ್ಲಿ ಬರುವ ತ್ರಿಶಾ ಪಾತ್ರಕ್ಕೂ ಲಿಂಕ್ ಇದೆ ಹಾಗೂ ಈ ಚಿತ್ರ ಎಲ್‌ಸಿಯುನ ಒಂದು ಭಾಗ ಎಂಬುದು ಪಕ್ಕಾ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಬರೆದುಕೊಳ್ಳುತ್ತಿದ್ದಾರೆ.

More from Filmibeat

English summary
Leo: Trisha Krishnan scorpio tattoo is similar to Rolex tattoo in Vikram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X