Leo: ಬಿಡುಗಡೆಗೂ ಮುನ್ನವೇ ದಳಪತಿ ವಿಜಯ್ 'ಲಿಯೋ' ಸಿನಿಮಾ ದೃಶ್ಯಗಳು ಲೀಕ್!
'ಲಿಯೋ' ಅಕ್ಟೋಬರ್ 19 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಆದರೆ, ಸಿನಿಮಾ ಸುತ್ತ ವಿವಾದಗಳ ಹುತ್ತವೇ ಬೆಳೆದಿದೆ. ಹಲವೆಡೆ ಮಾರ್ನಿಂಗ್ ಶೋಗಳಿಗೆ ಅನುಮತಿ ನೀಡಿಲ್ಲ. ತೆಲುಗು ವರ್ಷನ್ ಬಿಡುಗಡೆಗೆ ನಿರ್ಬಂಧ ಹೇರಲಾಗಿದೆ. ಇದರ ಜೊತೆಗೆ ದಳಪತಿ ವಿಜಯ್ ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರದ ಆರಂಭಿಕ ದೃಶ್ಯ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.
ಹೌದು... ಕೆಲವು ಅಭಿಮಾನಿಗಳು ಸೋರಿಕೆಯಾದ ಕ್ಲಿಪ್ ಅನ್ನು ನೋಡಲು ಉತ್ಸಾಹ ತೋರುತ್ತಿದ್ದಾರೆ. ಆದರೆ, ಹಲವು ಮಂದಿ ಇಂತಹ ಸಿನಿಮಾದ ಪೈರಸಿ ಸರಿಯಲ್ಲ ಎನ್ನುತ್ತಿದ್ದಾರೆ. ಇದನ್ನು ರಿಪೋರ್ಟ್ ಮಾಡಲು ಸಿನಿಮಾ ತಂಡಕ್ಕೆ ಮನವಿ ಮಾಡಿದ್ದಾರೆ. ಈ ಕೆಲವು ಕ್ಲಿಪ್‌ಗಳನ್ನು ಅಭಿಮಾನಿಗಳು ರಿಪೋರ್ಟ್ ಮಾಡಿದ ನಂತರ ಟ್ವಿಟರ್‌ನಲ್ಲಿ ಕ್ಲಿಪ್‌ಗಳನ್ನು ತೆಗೆಯಲಾಗಿದೆ.

'ಲಿಯೋ' ಚಿತ್ರದ ಆರಂಭದ ದೃಶ್ಯ ಲೀಕ್
ವಿಜಯ್ ಅವರ 'ಲಿಯೋ' ಅಕ್ಟೋಬರ್ 19 ರಂದು ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆಯ ಮೊದಲು, ವಿಜಯ್ ಮತ್ತು ತೋಳ ಇರುವ ಆರಂಭಿಕ ದೃಶ್ಯವು ಈಗ ಸೋರಿಕೆಯಾಗಿದೆ. ಈ ವಿಡಿಯೋವನ್ನು ಥಿಯೇಟರ್‌ನಲ್ಲಿ ತೆಗೆಯಲಾಗಿದೆಯಂತೆ. ಡಿಲಿಟೇಡ್ ವಿಡಿಯೋ ಇದು ಎಂದು ಹಂಚಲಾಗುತ್ತಿತ್ತು. ಹಲವಾರು ಬಳಕೆದಾರರು ಕೆಲವು ಸೆಕೆಂಡುಗಳ ಸಣ್ಣ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ವಿಜಯ್ ಬಿಳಿ ಬಟ್ಟೆಯಲ್ಲಿ ತೋಳವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.
ವೀಡಿಯೊವನ್ನು ನಿಷ್ಕ್ರಿಯಗೊಳಿಸುವ ಮೂಲಕ ಅದರ ಪ್ರಸಾರವನ್ನು ತಡೆಯಲು ಚಿತ್ರತಂಡ ಕ್ರಮ ಕೈಗೊಂಡಿದೆ. ಆದರೆ, ಈಗಾಗಲೇ ವೀಡಿಯೊ ಕಾಳ್ಗಿಚ್ಚಿನಂತೆ ಹರಡಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವಿಟರ್‌ನಲ್ಲಿ ನೇರವಾಗಿ ಮೆಸೇಜ್ ಮೂಲಕ ಯಾರಿಗಾದರೂ ಅದನ್ನು ಫಾರ್ವರ್ಡ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ದೃಶ್ಯವನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದೆಯಂತೆ.
ಲೀಕ್ ಆಗಿರುವ ಕ್ಲಿಪ್‌ಗಳನ್ನು ರಿಪೋರ್ಟ್ ಮಾಡಿ ಎಂದ ಫ್ಯಾನ್ಸ್!
ಈಗಾಗಲೇ ಟ್ವಿಟರ್‌ನಲ್ಲಿ ಲೀಕಡ್ ಎಂಬುದು ಟ್ರೆಂಡಿಗ್ ಆಗಿದೆ. ಘಟನೆಯ ಹಿನ್ನೆಲೆಯಲ್ಲಿ ಪೈರಸಿ ಬೇಡ ಎಂದು ಅನೇಕ ಪ್ರೇಕ್ಷಕರನ್ನು ವಿನಂತಿಸುವ ಪೋಸ್ಟ್‌ಗಳು ಕಾಣಿಸಿಕೊಂಡಿವೆ. ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ. ಹೀಗೆ ಮಾಡುವುದರಿಂದ ಚಿತ್ರತಂಡದ ಶ್ರಮ ವ್ಯರ್ಥವಾಗುತ್ತದೆ ಎಂದು ಹಲವರು ಮನವಿ ಮಾಡಿದ್ದಾರೆ.

'ಲಿಯೋ'
ಲೋಕೇಶ್ ಕನಕರಾಜ್ ಬರೆದು ನಿರ್ದೇಶಿಸಿರುವ 'ಲಿಯೋ' ಆಕ್ಷನ್ ಥ್ರಿಲ್ಲರ್ ಸಿನಿಮಾ. ಪ್ರಮುಖ ಪಾತ್ರಗಳಲ್ಲಿ ವಿಜಯ್ ಜೊತೆಗೆ ಸಂಜಯ್ ದತ್, ತ್ರಿಶಾ, ಅರ್ಜುನ್ ಸರ್ಜಾ, ಮಿಸ್ಕಿನ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಮತ್ತು ಸ್ಯಾಂಡಿ ಇದ್ದಾರೆ. 'ಲಿಯೋ' ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.


Click it and Unblock the Notifications











