ಬಾರೋ ವಿಜಯ್ , ಏಕ ವಚನದಲ್ಲೇ ಗುಡುಗಿದ ಬಿಗ್ ಬಾಸ್ ಸ್ಫರ್ಧಿ ; ಕಿಡ್ನಿ ಕಳ್ಳಿ, ನಾಯಿ- ಸಿಡಿದೆದ್ದ ದಳಪತಿ ಮಹಿಳಾ ಪಡೆ

ಚಿತ್ರರಂಗ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಇವತ್ತು ಇಲ್ಲಿ ಸ್ಟಾರ್ ಆದವರು ನಾಳೆಯ ದಿವಸ ಲೀಡರ್ ಆಗ್ತಾರೆ. ಮೆರೆಯುತ್ತಾರೆ. ಹರಸಿ ಹಾರೈಸಿ ಆಶೀರ್ವಾದ ಮಾಡಿದ ಜನರನ್ನೇ ಮರೆಯುತ್ತಾರೆ. ಅದರಲ್ಲಿಯೂ ಪಕ್ಕದ ತಮಿಳುನಾಡಿನಲ್ಲಿ ರಾಜಕೀಯದ ಮೇಲೆ ಚಿತ್ರರಂಗದವರಿಗೆ ವಿಶೇಷ ಆಸಕ್ತಿ ಮೊದಲಿಂದ ಇದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಬಹುತೇಕರು ರಾಜಕೀಯಕ್ಕೆ ಇಳಿದಿದ್ದಾರೆ. ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಇಳಯ ದಳಪತಿ ಎಂದೇ ಪ್ರಖ್ಯಾತವಾದ ವಿಜಯ್ ಕೂಡ ಈ ಸಾಲಿನಲ್ಲಿ ನಿಂತವರೇ.

limit-your-words-tvk-fan-goes-nuclear-on-bigg-boss-julie-for-insulting-thalapathy-vijay

ಈಗಾಗಲೇ ಚಿತ್ರರಂಗದಂತೆಯೇ ರಾಜಕೀಯ ರಣರಂಗದಲ್ಲಿ ಕೂಡ ಗೆಲ್ಲುವ ವಿಶ್ವಾಸದಲ್ಲಿರುವ ವಿಜಯ್, ಚುನಾವಣೆಯಲ್ಲಿ ಜನರ ಮುಂದೆ ಬರಲಿರುವ 234 ಅಭ್ಯರ್ಥಿಗಳನ್ನು ಪರಿಚಯಿಸಿದ್ದಾರೆ. ವಿಜಯ್ ಸ್ವತಃ ಪೆರಂಬೂರು ಹಾಗೂ ತಿರುಚಿ ಪೂರ್ವ ಎಂಬ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದಿದ್ದಾರೆ. ಒಂದು ಕ್ಷೇತ್ರದಲ್ಲಿ ಸೋತರೂ, ಇನ್ನೊಂದರಲ್ಲಿ ಗೆಲ್ಲುವ ಭರವಸೆಯಲ್ಲಿದ್ದಾರೆ.

ಆದರೆ ಇದೇ ಸಮಯದಲ್ಲಿ ಮತ್ತೊಂದು ಬದಿಯಿಂದ ವಿಜಯ್ ವಿರುದ್ಧ ಹಲವರು ಈಗ ವಾಕ್ಸಮರ ಸಾರಿದ್ಧಾರೆ. ಏಕವಚನದಲ್ಲಿಯೇ ವಿಜಯ್ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಆ ಪೈಕಿ ಜೂಲಿ ಕೂಡ ಒಬ್ಬರು. ಹೌದು.. ಮರಿಯಾ ಜೂಲಿಯಾನಾ.. ''ಬಿಗ್ ಬಾಸ್''' ಜೂಲಿ ಎಂದೇ ಪಕ್ಕದ ಚೆನ್ನೈನಲ್ಲಿ ಖ್ಯಾತರಾದವರು ಇವರು.

2017ರಲ್ಲಿ ತಮಿಳರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗೂಳಿ ಪಳಗಿಸುವ ''ಜಲ್ಲಿಕಟ್ಟು'' ಎಂಬ ದೇಸಿ ಕ್ರೀಡೆಯ ವಿರುದ್ಧ ದೇಶವ್ಯಾಪಿ ಆಕ್ರೋಶದ ಅಲೆ ಎದ್ದಿತ್ತಲ್ಲ..? ಆ ಕಾಲದಲ್ಲಿ ಬೆಳಕಿಗೆ ಬಂದ ಪ್ರತಿಭೆ ಇವರು. 3500 ವರ್ಷಗಳ ಇತಿಹಾಸ ಇದೆ ಎನ್ನಲಾಗುವ ಜಲ್ಲಿಕಟ್ಟುವನ್ನು ಸುಪ್ರೀಂಕೋರ್ಟ್‌ ನಿಷೇಧಿಸಿದಾಗ ವಿರೋಧ ಮಾಡಿದವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಇದೇ ಮರಿಯಾ ಜೂಲಿಯಾನ.

ಹೀಗೆ ಸಿಕ್ಕ ಈ ಖ್ಯಾತಿಯ ಪ್ರಭೆಯಲ್ಲಿಯೇ ತಮಿಳು ''ಬಿಗ್ ಬಾಸ್‌''ನ ಮನೆಯನ್ನು ಪ್ರವೇಶ ಮಾಡಿ ಆ ನಂತರ ''ಬಿಗ್ ಬಾಸ್'' ಜೂಲಿ ಎಂದೇ ಜನಜನಿತರಾದ ಈ ಚೆಲುವೆ ಆ ನಂತರ್ ''ಬಿಗ್ ಬಾಸ್ ಜೋಡಿಗಳ್'' ಎಂಬ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕೂಡ ಕಾಣಿಸಿಕೊಂಡರು. ನೋಡ .. ನೋಡುತ್ತಾ .. ತಮಿಳು ಕಿರುತೆರೆಯಲ್ಲಿ ನಿರೂಪಕಿಯಾಗಿ ಕೂಡ ಹೆಸರು ಮಾಡಿದರು. ಇಷ್ಟೇ ಯಾಕೆ ಎರಡು ಮೂರು ಸಿನಿಮಾಗಳನ್ನು ಕೂಡ ಮಾಡಿದರು.

limit-your-words-tvk-fan-goes-nuclear-on-bigg-boss-julie-for-insulting-thalapathy-vijay

ಇಂಥಾ ಜೂಲಿ ಈಗ ವಿಜಯ್ ವಿರುದ್ಧ ನಿಂತಿದ್ದಾರೆ. ''ಬಾರೋ ವಿಜಯ್'' ಎಂದು ಏಕವಚನದಲ್ಲಿಯೇ ಸಂಬೋಧಿಸಿ ಸವಾಲು ಹಾಕುತ್ತಿದ್ಧಾರೆ. ವಿಜಯ್ ಮತ್ತು ಅವರ ಕಾರ್ಯಕರ್ತರನ್ನು ಮತ್ತು ಅಭಿಮಾನಿಗಳನ್ನು ಕೆಣಕುತ್ತಿದ್ಧಾರೆ. ನಿರೀಕ್ಷೆಯಂತೆ ಟಿವಿಕೆ ಮಹಿಳಾ ಪದಾಧಿಕಾರಿಗಳು ಈಗ ಜೂಲಿ ವಿರುದ್ಧ ಸಮರ ಸಾರಿದ್ದು ಜೂಲಿಯನ್ನು ನಾಯಿ.. ಕಿಡ್ನಿ ಕಳ್ಳಿ.. ಎಂದು ಕರೆದಿದ್ಧಾರೆ.

ವಿಲ್ಲಿವಕ್ಕಂನಲ್ಲಿ 12ನೇ ತರಗತಿ ವಿದ್ಯಾರ್ಥಿನಿಯನ್ನು ಅ*ತ್ಯಾಚಾರ ಮಾಡಿ, ಎರಡು ಮೂರು ವರ್ಷದ ಮಕ್ಕಳನ್ನು ಬಿಡದೇ ಅವರ ಮೇಲೆ ಕ್ರೌರ್ಯ ಮೆರೆದಾಗ ಈಕೆಯ ಬಾಯಿಗೆ ಬೀಗ ಬಿದ್ದಿತ್ತು ಎಂದು ಹೇಳಿರುವ ಮಹಿಳಾ ಪದಾಧಿಕಾರಿಗಳು ಈಗ ಯಾವ ಬಾಯಿ ಇಟ್ಟುಕೊಂಡು ಇವಳು ಮಾತನಾಡಲು ಬಂದಿದ್ದಾಳೆ ? ಎಂದು ಕಿಡಿ ಕಾರಿದ್ದಾರೆ. ಆಕೆಯೊಬ್ಬಳು ಕಿಡ್ನಿ ಕಳ್ಳಿ.. ''ಬಿಗ್ ಬಾಸ್‌''ದಿಂದ ಓಡಿಸಲ್ಪಟ್ಟ ನಾಯಿ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ಧಾರೆ.

ಸದ್ಯ ಮಹಿಳಾ ಕಾರ್ಯಕರ್ತೆ ಜೂಲಿ ವಿರುದ್ಧ ಕಿಡಿ ಕಾರುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ವಿಜಯ್ ಅಭಿಮಾನಿಗಳು ಈ ವಿಡಿಯೋವನ್ನು ವ್ಯಾಪಕವಾಗಿ ಶೇರ್ ಮಾಡುತ್ತಿದ್ಧಾರೆ. ಮತ್ತೊಂದು ಕಡೆ ವಿಜಯ್ ಅಭಿಮಾನಿಗಳಿಂದ ತನಗೆ ಬೆದರಿಕೆ ಇದೆ ಎಂದು ಜೂಲಿ ಅಲವತ್ತುಕೊಂಡಿದ್ಧಾರೆ.

More from Filmibeat

English summary
"The TVK army strikes back! A female supporter slams Bigg Boss Julie for her disrespectful comments about Thalapathy Vijay. As the political heat rises in 2026, witness how fans are defending their leader against public insults. Full details inside."
Read more about: biggboss vijay politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X