ರಜನಿ ಅಲ್ಲ, ಪ್ರಭಾಸ್ ಅಲ್ಲ; ಅತಿಹೆಚ್ಚು ಬಾರಿ 200 ಕೋಟಿ ಗಳಿಸಿದ್ದು ಈ ನಟನ ಚಿತ್ರಗಳು!

ಕಳೆದ ಶುಕ್ರವಾರ ( ಜೂನ್ 16 ) ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಮೊದಲ ಬಾಲಿವುಡ್ ಚಿತ್ರ, ಬಹು ನಿರೀಕ್ಷಿತ ಆದಿಪುರುಷ್ ಬಿಡುಗಡೆಯಾಯಿತು. ಓಂ ರಾವತ್ ನಿರ್ದೇಶನದ ಈ ಚಿತ್ರ ಬಿಡುಗಡೆಯಾದ ಬಳಿಕ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಹೀಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಆದಿಪುರುಷ್ ಗಳಿಕೆ ಮೇಲೆ ತುಸು ಪೆಟ್ಟು ಬಿದ್ದಿದ್ದು, ಆದರೂ ಸಹ ಚಿತ್ರ ಸಮಾಧಾನಕರ ಕಲೆಕ್ಷನ್ ಮಾಡುವಲ್ಲಿ ಸಫಲವಾಗಿದೆ. ಹೌದು, ಆದಿಪುರುಷ್ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 140 ಕೋಟಿ ಗಳಿಸಿದರೆ, ಎರಡನೇ ದಿನ 100 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ಮೂರನೇ ದಿನವೂ ಆದಿಪುರುಷ್ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

 List of south Indian actors who have given 200 crores club films; Vijay tops the list

ಹೀಗೆ ಆದಿಪುರುಷ್ ಸಿನಿಮಾ ಟೀಕೆ ಹಾಗೂ ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಎರಡು ದಿನಗಳಲ್ಲಿ 240 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದು, ಎರಡು ದಿನಗಳಲ್ಲಿ 200 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಪ್ರಭಾಸ್ ನಟನೆಯ ನಾಲ್ಕನೇ ಚಿತ್ರ 200 ಕೋಟಿ ಕ್ಲಬ್ ಸೇರಿದ ದಾಖಲೆಯನ್ನು ಬರೆದಿದೆ.

ಹೌದು, ಡಾರ್ಲಿಂಗ್ ಪ್ರಭಾಸ್ ನಟನೆಯ ಬಾಹುಬಲಿ ದ ಬೆಗಿನಿಂಗ್, ಬಾಹುಬಲಿ ದ ಕನ್ಕ್ಲೂಷನ್, ಸಾಹೋ ಹಾಗೂ ಆದಿಪುರುಷ್ ಚಿತ್ರಗಳು 200 ಕೋಟಿಗಿಂತ ಹೆಚ್ಚಿನ ಕಲೆಕ್ಷನ್ ಮಾಡಿವೆ. ಹೀಗೆ ಅತಿಹೆಚ್ಚು ಬಾರಿ 200 ಕೋಟಿ ಕ್ಲಬ್ ಚಿತ್ರಗಳನ್ನು ನೀಡಿರುವ ಸೌತ್ ನಟರ ಪಟ್ಟಿಯಲ್ಲಿ ಪ್ರಭಾಸ್ ಮೂರನೇ ಸ್ಥಾನದಲ್ಲಿದ್ದಾರೆ. ಹಾಗಿದ್ದರೆ ಅತಿಹೆಚ್ಚು 200 ಕೋಟಿ ಕ್ಲಬ್ ಚಿತ್ರಗಳನ್ನು ನೀಡಿದ ಸೌತ್ ನಟರ ಪಟ್ಟಿ ಹೇಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ವಿಜಯ್ - ಮೆರ್ಸಲ್, ಸರ್ಕಾರ್, ಬಿಗಿಲ್, ಬೀಸ್ಟ್, ವಾರಿಸು ಹಾಗೂ ಮಾಸ್ಟರ್

2. ರಜನಿಕಾಂತ್ - 2.0, ಕಬಾಲಿ, ದರ್ಬಾರ್, ಪೆಟ್ಟಾ ಹಾಗೂ ಎಂದಿರನ್.

3. ಪ್ರಭಾಸ್ - ಬಾಹುಬಲಿ ದ ಬೆಗಿನಿಂಗ್, ಬಾಹುಬಲಿ ದ ಕನ್ಕ್ಲೂಷನ್, ಸಾಹೋ ಹಾಗೂ ಆದಿಪುರುಷ್

4. ರಾಮ್ ಚರಣ್ - ಆರ್‌ ಆರ್ ಆರ್ ಹಾಗೂ ರಂಗಸ್ಥಲಂ

5. ಅಲ್ಲು ಅರ್ಜುನ್ - ಅಲಾ ವೈಕುಂಠಪುರಂಲೋ ಹಾಗೂ ಪುಷ್ಪ ದ ರೈಸ್

6. ಚಿರಂಜೀವಿ - ಸೈರಾ ಹಾಗೂ ವಾಲ್ತೇರು ವೀರಯ್ಯ

7. ಅಜಿತ್ - ತುನಿವು ಹಾಗೂ ವಿಶ್ವಾಸಂ

8. ಯಶ್ - ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2

9. ಜೂನಿಯರ್ ಎನ್‌ಟಿಆರ್ - ಆರ್ ಆರ್ ಆರ್

10. ರಿಷಬ್ ಶೆಟ್ಟಿ - ಕಾಂತಾರ

ಈ ಮೂಲಕ ತಮಿಳು ನಟ ದಳಪತಿ ವಿಜಯ್ ನಟನೆಯ ಒಟ್ಟು 6 ಚಿತ್ರಗಳು 200 ಕೋಟಿ ಕ್ಲಬ್ ಸೇರಿದ್ದು, ವಿಜಯ್ ಅತಿಹೆಚ್ಚು 200 ಕೋಟಿ ಕ್ಲಬ್ ಚಿತ್ರಗಳನ್ನು ನೀಡಿದ ದಕ್ಷಿಣ ಭಾರತದ ನಟ ಎನಿಸಿಕೊಂಡಿದ್ದಾರೆ. ರಜನಿಕಾಂತ್ ನಟನೆಯ 5 ಚಿತ್ರಗಳು ಈ ದಾಖಲೆಯನ್ನು ಮಾಡಿದ್ದು, ಕನ್ನಡದ ಪೈಕಿ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರ ಸರಣಿ ಮೂಲಕ ಈ ದಾಖಲೆಯನ್ನು ಮಾಡಿದ್ದಾರೆ ಮತ್ತು ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಮೂಲಕ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

More from Filmibeat

English summary
List of south Indian actors who have given 200 crores club films; Vijay tops the list. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X