ಧನುಷ್ 2, ಅಜಿತ್ 5, ವಿಜಯ್ 8; ಅತಿಹೆಚ್ಚು 100 ಕೋಟಿ ಕ್ಲಬ್ ಚಿತ್ರ ನೀಡಿದ ತಮಿಳು ನಟ ಯಾರು?

ಈ ಹಿಂದೆ ಚಿತ್ರಗಳು ನೂರು ದಿನಗಳನ್ನು ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಪೂರೈಸಿದರೂ ಸಹ ನೂರು ಕೋಟಿ ಕಲೆಕ್ಷನ್ ಆಗುತ್ತಿರಲಿಲ್ಲ. ಆದರೆ ಈಗ ಬಿಡುಗಡೆಯಾದ ಮೂರ್ನಾಲ್ಕು ದಿನಗಳಲ್ಲಿಯೇ ನೂರು ಕೋಟಿ ಕಲೆಕ್ಷನ್ ಮಾಡಿ ವೇಗವಾಗಿ ನೂರು ಕೋಟಿ ಕ್ಲಬ್ ಸೇರಿಬಿಡುತ್ತಿವೆ. ಹೈಪ್ ಇರುವ ಬಿಗ್ ಬಜೆಟ್ ಚಿತ್ರಗಳಂತೂ ಮೊದಲ ದಿನವೇ ಲೀಲಾಜಾಲವಾಗಿ ನೂರು ಕೋಟಿ ಕಲೆಕ್ಷನ್ ಮಾಡುತ್ತವೆ.

ಹೀಗೆ ಚಿತ್ರಗಳು ನೂರು ಕೋಟಿ ಕ್ಲಬ್ ಅನ್ನು ಸುಲಭವಾಗಿ ಸೇರಲು ಕಾರಣ ಈಗಿನ ದುಬಾರಿ ಟಿಕೆಟ್ ದರಗಳು ಹಾಗೂ ದೇಶದಾದ್ಯಂತ ಮತ್ತು ವಿದೇಶಿ ನೆಲದಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುತ್ತಿರುವುದು. ಅದರಲ್ಲಿಯೂ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ದೊಡ್ಡ ಮಟ್ಟದಲ್ಲಿ ಕ್ಲಿಕ್ ಆದ ಮೇಲಂತೂ ಚಿತ್ರಗಳಿಗೆ ನೂರು ಕೋಟಿ ಕ್ಲಬ್ ಸೇರುವುದು ಇನ್ನೂ ಸುಲಭವಾಗಿಬಿಟ್ಟಿದೆ.

List of Tamil actors with highest number of 100 crore club films

ಕೇವಲ ಒಂದು ಭಾಷೆಯಲ್ಲಿ ಬಿಡುಗಡೆಯಾಗಿ ಐವತ್ತು ಕೋಟಿ ಮುಟ್ಟುತ್ತಿದ್ದ ನಟರ ಚಿತ್ರಗಳು ಇದೀಗ ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತಿವೆ. ಇದಕ್ಕೆ ಉತ್ತಮ ಉದಾಹರಣೆ ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳು. ಹೌದು, ಕಳೆದ ವರ್ಷ ಬಿಡುಗಡೆಗೊಂಡ ಹಲವಾರು ಚಿತ್ರಗಳು ದೊಡ್ಡ ದೊಡ್ಡ ಸ್ಟಾರ್ ನಟರು ಇಲ್ಲದಿದ್ದರೂ, ಬಿಗ್ ಬಜೆಟ್‌ನೊಂದಿಗೆ ತಯಾರಾಗದಿದ್ದರೂ ನೂರು ಕೋಟಿ ಕ್ಲಬ್ ಸೇರಿದವು. ಭಾರತದ ಎಲ್ಲಾ ಭಾಷೆಯ ಚಿತ್ರಗಳೂ ಸೇರಿದಂತೆ ಒಟ್ಟು 31 ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರಿದ್ದವು.

ಕಳೆದ ವರ್ಷದ ರೀತಿಯೇ ಈ ವರ್ಷವೂ ಸಹ ಚಿತ್ರಗಳ ಸೆಂಚುರಿ ಮುಂದುವರಿದಿದೆ. ಮೊದಲಿಗೆ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ತಮಿಳಿನ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಈ ಎರಡೂ ಚಿತ್ರಗಳೂ ಸಹ ನೂರು ಕೋಟಿಗೂ ಅಧಿಕ ಸಂಪಾದಿಸಿದವು. ಅತ್ತ ತೆಲುಗಿನ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಹಾಗೂ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಚಿತ್ರಗಳೂ ಸಹ ನೂರು ಕೋಟಿಗಿಂತ ಅಧಿಕ ಗಳಿಸಿದವು.

ಈ ಚಿತ್ರಗಳ ಬಳಿಕ ಚಿತ್ರಮಂದಿರದ ಅಂಗಳಕ್ಕೆ ಬಂದ ಪಠಾಣ್ ಮೊದಲ ದಿನವೇ ನೂರು ಕೋಟಿ ಬಾಚಿತು. ಇದೀಗ ತಮಿಳು ಚಿತ್ರವಾದ ವಾತಿ ಸರತಿ. ಹೌದು, ಧನುಷ್ ಹಾಗೂ ಸಂಯುಕ್ತ ಮೆನನ್ ನಟನೆಯ ವಾತಿ ಚಿತ್ರ ನೂರು ಕೋಟಿ ಕ್ಲಬ್ ಸೇರಿದೆ. ತಮಿಳಿನ ಜತೆಗೆ ತೆಲುಗಿನಲ್ಲಿ ಸಾರ್ ಎಂಬ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಎರಡೂ ಭಾಷೆಯ ಕಲೆಕ್ಷನ್ ಸೇರಿದಂತೆ ನೂರು ಕೋಟಿ ಸಂಪಾದಿಸಿದೆ. ಈ ಮೂಲಕ ಧನುಷ್ ನಟನೆಯ ಎರಡನೇ ಚಿತ್ರ ನೂರು ಕೋಟಿ ಕ್ಲಬ್ ಸೇರಿದೆ.

ಹೌದು, ಕಳೆದ ವರ್ಷ ಧನುಷ್ ತಮ್ಮ ಸಿನಿ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ನೂರು ಕೋಟಿ ಕ್ಲಬ್ ಸೇರಿದ್ದರು. ತಿರುಚಿತ್ರಾಂಬಲಂ ಎಂಬ ಧನುಷ್ ನಟನೆಯ ಚಿತ್ರ ಸೆಂಚುರಿ ಬಾರಿಸಿತ್ತು. ಹೀಗೆ ಧನುಷ್ ನಟನೆಯ ಎರಡು ಚಿತ್ರಗಳು ಬ್ಯಾಕ್ ಟು ಬ್ಯಾಕ್ ನೂರು ಕೋಟಿ ಕ್ಲಬ್ ಸೇರಿದ್ದು, ತಮಿಳಿನ ಯಾವ ನಟರ ಎಷ್ಟು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ ಎಂಬ ಚರ್ಚೆಗಳು ಆರಂಭವಾಗಿವೆ. ಇಲ್ಲಿಯವರೆಗೂ ಒಟ್ಟು 12 ತಮಿಳು ನಟರು ನೂರು ಕೋಟಿ ಕ್ಲಬ್ ಚಿತ್ರಗಳನ್ನು ನೀಡಿದ್ದು, ಆ ನಟರು ಯಾರು ಹಾಗೂ ಎಷ್ಟು ನೂರು ಕೋಟಿ ಕ್ಲಬ್ ಚಿತ್ರಗಳನ್ನು ನೀಡಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ರಜನಿಕಾಂತ್ - 10 ಚಿತ್ರಗಳು

2. ಸೂರ್ಯ - 8 ಚಿತ್ರಗಳು

3. ವಿಜಯ್ - 7 ಚಿತ್ರಗಳು

4. ಅಜಿತ್ - 5 ಚಿತ್ರಗಳು

5. ಕಮಲ್ ಹಾಸನ್ - 3 ಚಿತ್ರಗಳು

6. ಕಾರ್ತಿ - 3 ಚಿತ್ರಗಳು

7. ರಾಘವ ಲಾರೆನ್ಸ್ - 2 ಚಿತ್ರಗಳು

8. ಧನುಷ್ - 2 ಚಿತ್ರಗಳು

9. ವಿಕ್ರಮ್ - 2 ಚಿತ್ರಗಳು

10. ಶಿವ ಕಾರ್ತಿಕೇಯನ್ - 2 ಚಿತ್ರಗಳು

11. ಸಿಂಬು - ಚಿತ್ರ

12. ಜಯಮ್ ರವಿ - ಚಿತ್ರ

More from Filmibeat

English summary
List of Tamil actors with highest number of 100 crore club films. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X