2023ರ ಮೊದಲ 6 ತಿಂಗಳಲ್ಲಿ ಹಿಟ್ ಆದ ತಮಿಳು ಚಿತ್ರಗಳ ಪಟ್ಟಿ; ನೂರು ಕೋಟಿ ಗಳಿಸಿದ್ದೆಷ್ಟು?
ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ತಮಿಳು ಚಿತ್ರರಂಗ ಈ ವರ್ಷವೂ ಸಹ ತನ್ನ ಕೆಲಸವನ್ನು ಮುಂದುವರಿಸಿದೆ. ವರ್ಷದ ಆರಂಭದ ಜನವರಿಯಲ್ಲಿಯೇ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ಎರಡು ಸ್ಟಾರ್ ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ ತಮಿಳು ಚಿತ್ರರಂಗ ವರ್ಷದ ಮೊದಲಾರ್ಧದಲ್ಲಿ ಸಮಾಧಾನಕರ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದೆ.
ವರ್ಷದ ಮೊದಲ ಆರು ತಿಂಗಳುಗಳಲ್ಲಿ 104 ತಮಿಳು ಚಿತ್ರಗಳು ಬಿಡುಗಡೆಯಾಗಿದ್ದು, ಈ ಪೈಕಿ ಕೆಲವು ಚಿತ್ರಗಳು ಸಕ್ಸಸ್ ಆಗಿದ್ದರೆ, ಇನ್ನೂ ಹಲವಾರು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿವೆ. ತಮಿಳಿನ ಅಯೋಥಿ, ವಿಡುದಲೈ ಪಾರ್ಟ್ 1, ಗುಡ್ ನೈಟ್, ಪೊನ್ನಿಯಿನ್ ಸೆಲ್ವನ್ ಪಾರ್ಟ್ 2, ದಾದಾ, ಬೊಮ್ಮೈ ನಾಯಕಿ, ದ ಗ್ರೇಟ್ ಇಂಡಿಯನ್ ಕಿಚನ್, ಮಾಮಣ್ಣನ್ ಈ ಚಿತ್ರಗಳು ಭರ್ಜರಿ ಗೆಲುವು ಕಂಡರೆ, ದಳಪತಿ ವಿಜಯ್ ನಟನೆಯ ವಾರಿಸು ಹಾಗೂ ತಲಾ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ದೊಡ್ಡ ಗಳಿಕೆ ಮಾಡುವಲ್ಲಿ ಯಶಸ್ಸು ಸಾಧಿಸಿವೆ.

ಹಾಗಿದ್ದರೆ ತಮಿಳು ಚಿತ್ರರಂಗದಲ್ಲಿ ಈ ವರ್ಷದ ಮೊದಲಾರ್ಧದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಕಳೆದ ವರ್ಷ ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ಇಂಡಸ್ಟ್ರಿ ಹಿಟ್ ಆಗಿದ್ದ ಪೊನ್ನಿಯಿನ್ ಸೆಲ್ವನ್ ಚಿತ್ರದ ಸೀಕ್ವೆಲ್ ಪೊನ್ನಿಯಿನ್ ಸೆಲ್ವನ್ 2 342 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ತಮಿಳು ಸಿನಿಮಾ ಎನಿಸಿಕೊಂಡಿದೆ.
2. ವಿಜಯ್ ನಟನೆಯ ವಾರಿಸು ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 302 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
3. ತಲಾ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರ ಸಹ ನೂರು ಕೋಟಿ ಕ್ಲಬ್ ಸೇರಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 201 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
4. ಧನುಷ್ ನಟನೆಯ ವಾತಿ ಸಿನಿಮಾ 116 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು ಈ ವರ್ಷದ ಮೊದಲಾರ್ಧದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ನಾಲ್ಕನೇ ತಮಿಳು ಸಿನಿಮಾ ಎನಿಸಿಕೊಂಡಿದೆ.
5. ವಿಡುದಲೈ ಪಾರ್ಟ್ 1 ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 53 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ವರ್ಷದ ಮೊದಲಾರ್ಧದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
6. ಪಿಚ್ಚೈಕಾರನ್ 2 ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 43 ಕೋಟಿ ಗಳಿಕೆ ಮಾಡಿದ್ದು, ವರ್ಷದ ಮೊದಲಾರ್ಧದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
7. ಕನ್ನಡದ ಮಫ್ತಿ ಚಿತ್ರದ ರಿಮೇಕ್ ಪತ್ತು ತಲ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 37 ಕೋಟಿ ಗಳಿಸುವ ಮೂಲಕ ವರ್ಷದ ಮೊದಲಾರ್ಧದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.


Click it and Unblock the Notifications











