ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್, ವೀವ್ಸ್ ಪಡೆದುಕೊಂಡ 10 ಟ್ರೈಲರ್‌ಗಳ ಪಟ್ಟಿ
ಈ ಹಿಂದೆ ಚಿತ್ರದ ಹಾಡುಗಳು ಚೆನ್ನಾಗಿವೆ, ಚಿತ್ರವೂ ಚೆನ್ನಾಗಿರಬಹುದು ಎಂದು ಸಿನಿ ರಸಿಕರು ಹಾಡುಗಳ ಗುಣಮಟ್ಟವನ್ನು ಆಧರಿಸಿ ಚಿತ್ರಗಳ ಮೇಲೆ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತಿದ್ದರು. ಅದೇ ರೀತಿ ಈಗಿನ ದಿನಗಳಲ್ಲಿ ಚಿತ್ರದ ಟ್ರೈಲರ್‌ಗಳನ್ನು ವೀಕ್ಷಿಸಿ ಚಿತ್ರ ಹೇಗಿರಬಹುದು, ಚಿತ್ರ ಯಾವ ರೀತಿಯ ಫಲಿತಾಂಶ ಬರಬಹುದು ಎಂಬುದನ್ನು ನಿರ್ಧರಿಸಿಬಿಡ್ತಾರೆ ಸಿನಿ ಪ್ರೇಮಿಗಳು.
ಚಿತ್ರವೊಂದರ ಟ್ರೈಲರ್ ಕೆಟ್ಟದಾಗಿದ್ದು ನಂತರ ಚಿತ್ರ ಚೆನ್ನಾಗಿ ಮೂಡಿ ಬಂದರೂ ಫಲಿತಾಂಶ ನೆಲಕಚ್ಚಿದ ಸಾಕಷ್ಟು ಉದಾಹರಣೆಗಳಿವೆ. ಹಾಗಂದ ಮಾತ್ರಕ್ಕೆ ಚಿತ್ರ ಹೇಗಿದ್ದರೂ ಸಹ ಅಚ್ಚುಕಟ್ಟಾಗಿ ಟ್ರೈಲರ್ ಕಟ್ ಮಾಡಿದರೆ ಜನ ಚಿತ್ರವನ್ನು ಮೆಚ್ಚಿಕೊಳ್ತಾರೆ ಎಂದಲ್ಲ. ಬದಲಾಗಿ ಚಿತ್ರದ ಬಗ್ಗೆ ಜನರಲ್ಲಿ ಒಳ್ಳೆ ಅಭಿಪ್ರಾಯ ಮೂಡಿಸಬಹುದಷ್ಟೇ. ಹೌದು, ಟ್ರೈಲರ್ ಚೆನ್ನಾಗಿದ್ದರೆ ಅದಕ್ಕಿಂತ ಒಳ್ಳೆಯ ಪ್ರಮೋಷನ್ ಮತ್ತೊಂದಿಲ್ಲ.
ಅದರಲ್ಲಿಯೂ ಸ್ಟಾರ್ ನಟರ ಚಿತ್ರಗಳ ಟ್ರೈಲರ್‌ಗಳು ಹಾಗೂ ಟೀಸರ್ ಚೆನ್ನಾಗಿ ಇರಲೇಬೇಕು. ಆ ಟ್ರೈಲರ್‌ಗಳಲ್ಲಿನ ಅಂಶಗಳನ್ನು ನೋಡಿಯೇ ಚಿತ್ರದ ಕಥೆ ಇಷ್ಟೇ ಎಂಬ ಚರ್ಚೆಗಳನ್ನು ಆರಂಭಿಸಿಬಿಡುತ್ತಾರೆ ಸಿನಿ ರಸಿಕರು. ಇನ್ನು ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಅಥವಾ ಸಮೀಪದ ದಿನಗಳಲ್ಲಿ ಬಿಡುಗಡೆಯಾಗಲಿವೆ ಎಂದಾಗಂತೂ ಆ ಚಿತ್ರಗಳ ಟ್ರೈಲರ್‌ಗಳ ನಡುವೆಯೂ ಪೈಪೋಟಿ ಏರ್ಪಡುವುದು ಕಾಮನ್. ಅದೇ ರೀತಿ ಇದೇ ಸಂಕ್ರಾಂತಿ ಪ್ರಯುಕ್ತ ಒಂದೇ ದಿನ ಬಿಡುಗಡೆಯಾಗಲಿರುವ ತಮಿಳಿನ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ನಟನೆಯ ತುನಿವು ಚಿತ್ರಗಳ ಟ್ರೈಲರ್‌ಗಳ ನಡುವೆ ಸಹ ಜಿದ್ದಾಜಿದ್ದಿ ಉಂಟಾಗಿತ್ತು. ಈ ಎರಡೂ ಚಿತ್ರಗಳ ಟ್ರೈಲರ್ ರೇಸ್‌ನಲ್ಲಿ ತುನಿವು ಟ್ರೈಲರ್ ಗೆದ್ದಿದ್ದು, ಅತಿಹೆಚ್ಚು ಲೈಕ್ಸ್ ಪಡೆದುಕೊಂಡ ಲೆಕ್ಕಾಚಾರದಲ್ಲಿ ವಾರಿಸು ಟ್ರೈಲರ್ ಗೆದ್ದಿದೆ. ಹಾಗಿದ್ದರೆ ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಹಾಗೂ ವೀಕ್ಷಣೆ ಪಡೆದುಕೊಂಡ ಸೌತ್ ಇಂಡಿಯಾದ ಹತ್ತು ಟ್ರೈಲರ್‌ಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡತಿದೆ ನೋಡಿ..

ಅತಿಹೆಚ್ಚು ಲೈಕ್ಸ್ ಪಡೆದ ಟ್ರೈಲರ್‌ಗಳು
24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದ ಸೌತ್ ಇಂಡಿಯನ್ ಟ್ರೈಲರ್‌ಗಳ ಟಾಪ್ 9 ಪಟ್ಟಿ
1. ಬೀಸ್ಟ್ - 2.22 ಮಿಲಿಯನ್ ಲೈಕ್ಸ್
2. ವಾರಿಸು - 1.83 ಮಿಲಿಯನ್ ಲೈಕ್ಸ್
3. ಬಿಗಿಲ್ - 1.66 ಮಿಲಿಯನ್ ಲೈಕ್ಸ್
4. ವಾಲಿಮೈ - 1.32 ಮಿಲಿಯನ್ ಲೈಕ್ಸ್
5. ಆರ್ ಆರ್ ಆರ್ - 1.24 ಮಿಲಿಯನ್ ಲೈಕ್ಸ್
6. ಸರ್ಕಾರು ವಾರಿ ಪಾಟ - 1.22 ಮಿಲಿಯನ್ ಲೈಕ್ಸ್
7. ವಿಶ್ವಾಸಂ - 1.16 ಮಿಲಿಯನ್ ಲೈಕ್ಸ್
8. ತುನಿವು - 1.14 ಮಿಲಿಯನ್ ಲೈಕ್ಸ್
9. ಭೀಮ್ಲಾ ನಾಯಕ್ - 1.11 ಮಿಲಿಯನ್ ಲೈಕ್ಸ್

ಅತಿಹೆಚ್ಚು ವೀಕ್ಷಣೆ ಪಡೆದ ಟ್ರೈಲರ್‌ಗಳು
24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಸೌತ್ ಇಂಡಿಯನ್ ಟ್ರೈಲರ್‌ಗಳ ಟಾಪ್ 9 ಪಟ್ಟಿ
1. ಬೀಸ್ಟ್ - 29.08 ಮಿಲಿಯನ್ ವೀಕ್ಷಣೆ
2. ಸರ್ಕಾರು ವಾರಿ ಪಾಟ - 26.77 ಮಿಲಿಯನ್ ವೀಕ್ಷಣೆ
3. ತುನಿವು - 24.96 ಮಿಲಿಯನ್ ವೀಕ್ಷಣೆ
4. ರಾಧೆ ಶ್ಯಾಮ್ - 23.20 ಮಿಲಿಯನ್ ವೀಕ್ಷಣೆ
5. ವಾರಿಸು - 23.05 ಮಿಲಿಯನ್ ವೀಕ್ಷಣೆ
6. ಆಚಾರ್ಯ - 21.86 ಮಿಲಿಯನ್ ವೀಕ್ಷಣೆ
7. ಬಾಹುಬಲಿ 2 - 21.81 ಮಿಲಿಯನ್ ವೀಕ್ಷಣೆ
8. ಆರ್ ಆರ್ ಆರ್ - 20.45 ಮಿಲಿಯನ್ ವೀಕ್ಷಣೆ
9. ಕೆಜಿಎಫ್ ಚಾಪ್ಟರ್ 2 ( ತೆಲುಗು ಡಬ್ ) - 19.38 ಮಿಲಿಯನ್ ವೀಕ್ಷಣೆ

ವಿಜಯ್ ಪಾರುಪತ್ಯ
ಇನ್ನು ವಿಜಯ್ ನಟನೆಯ ಚಿತ್ರಗಳ ಟ್ರೈಲರ್‌ಗಳು ಬಿಗ್ ಬಜೆಟ್ ಸಿನಿಮಾಗಳು ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳಿಗಿಂತ ಹೆಚ್ಚಿನ ಲೈಕ್ಸ್ ಹಾಗೂ ವೀಕ್ಷಣೆಗಳನ್ನು ಪಡೆದುಕೊಳ್ಳುವುದರ ಮೂಲಕ ಅಬ್ಬರಿಸಿವೆ. ಈ ಮೇಲ್ಕಂಡ ಪಟ್ಟಿಗಳನ್ನು ಗಮನಿಸಿದರೆ ವಿಜಯ್ ಚಿತ್ರಗಳಷ್ಟು ಬೇರೆ ಯಾವ ನಟರ ಚಿತ್ರಗಳೂ ಸಹ ಸ್ಥಾನ ಪಡೆದುಕೊಂಡಿಲ್ಲ. ಈ ಮೂಲಕ ವಿಜಯ್ ಚಿತ್ರಗಳ ಟ್ರೈಲರ್ಸ್ ಉಳಿದ ಚಿತ್ರಗಳ ಟ್ರೈಲರ್‌ಗಳ ಮೇಲೆ ಹಿಡಿತ ಸಾಧಿಸಿವೆ.


Click it and Unblock the Notifications











