ಮದ್ರಾಸ್ ಹೈಕೋರ್ಟ್‌ನಿಂದ ತಮಿಳು ನಟ ವಿಶಾಲ್‌ಗೆ ಬಿಗ್ ರಿಲೀಫ್

ವಿವಾದಗಳು ಮತ್ತು ಅವಘಡಗಳಿಂದ ದೂರ ಇರಬೇಕು ಎಂದು ತಮಿಳು ನಟ ವಿಶಾಲ್ ಪ್ರಯತ್ನಿಸಿದರೂ ಸಾಧ್ಯವಾಗ್ತಿಲ್ಲ. ಪದೇ ಪದೇ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತಾರೆ. ಇನ್ನು ಶೂಟಿಂಗ್ ವೇಳೆ ಹಲವು ಬಾರಿ ಗಾಯಗೊಂಡಿದ್ದರು. ಇತ್ತೀಚಿಗೆ ನಟ ವಿಶಾಲ್‌ಗೆ ಒಂದು ಹಳೇ ಪ್ರಕರಣದಿಂದ ರಿಲೀಫ್ ಸಿಕ್ಕಿದೆ. ಕಳೆದ ವರ್ಷ ವಿಶಾಲ್ ವಿರುದ್ಧ ಲೈಕಾ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು.

ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಜೊತೆಗಿನ ಒಪ್ಪಂದ ಉಲ್ಲಂಘಿಸಿದ್ದಕ್ಕೆ ನಟ ವಿಶಾಲ್‌ಗೆ ಇತ್ತೀಚೆಗೆ ಮದ್ರಾಸ್ ಹೈ ಕೋರ್ಟ್ ಶಾಕ್ ಕೊಟ್ಟಿತ್ತು. 15 ಕೋಟಿ ರೂ. ಹಣವನ್ನು ಶಾಶ್ವತ ಡಿಪಾಸಿಟ್ ಆಗಿ 3 ವಾರಗಳಲ್ಲಿ ಪಾವತಿಸಬೇಕೆಂದು ಆದೇಶ ನೀಡಿತ್ತು. ತಪ್ಪಿದ್ದಲ್ಲಿ ವಿಶಾಲ್ ಒಡೆತನದ ಸಿನಿಮಾ ನಿರ್ಮಾಣ ಸಂಸ್ಥೆಯ ಸಿನಿಮಾಗಳನ್ನು ಥಿಯೇಟರ್‌, ಓಟಿಟಿಯಲ್ಲಿ ಪ್ರದರ್ಶಿಸದಂತೆ ನಿಷೇಧ ಹೇರಲಾಗಿದೆ. ಆದರೂ ಕೂಡ 'ವೀರಮೇ ವಾಗೈ ಸೂಡು' ಸಿನಿಮಾ ರಿಲೀಸ್ ಆಗಿತ್ತು. ಇದರಿಂದ ಲೈಕಾ ಸಂಸ್ಥೆ ಕೋರ್ಟ್‌ ಮೆಟ್ಟಿಲೇರುವಂತಾಗಿತ್ತು.

Loan Default Case: Madras High Court dismisses contempt plea against tamil actor Vishal

ಪ್ರಕರಣ ಸಂಬಂಧ ಇದೀಗ ವಿಶಾಲ್ ಸೂಕ್ತ ಸಾಕ್ಷ್ಯಾಧಾರಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದರು. ಒಪ್ಪಂದದ ಬಳಿಕ ತಮ್ಮ ನಿರ್ಮಾಣ ಸಂಸ್ಥೆಯು ಇಂದಿನವರೆಗೆ ಯಾವುದೇ ಚಿತ್ರಗಳನ್ನು ನಿರ್ಮಿಸಿಲ್ಲ ಎಂದು ವಿಶಾಲ್ ಪರವಾಗಿ ವಕೀಲರು ವಾದಿಸಿದ್ದರು. ಹಾಗಾಗಿ 15 ಕೋಟಿ ರೂ. ಡೆಪಾಸಿಟ್ ದೊಣ್ಣೆ ಏಟಿನಿಂದ ವಿಶಾಲ್ ತಪ್ಪಿಸಿಕೊಂಡಿದ್ದಾರೆ.

ಪ್ರಕರಣ ಹಿನ್ನೆಲೆ ಏನು ಎನ್ನುವುದನ್ನು ನೋಡುವುದಾದರೆ ಕಾಲಿವುಡ್ ಫೈನಾನ್ಷಿಯರ್ ಅನ್ಬು ಚೆಳಿಯನ್ ಬಳಿ ವಿಶಾಲ್ ತನ್ನ ವಿಶಾಲ್‌ ಫ್ಯಾಕ್ಟರಿ ಸಿನಿಮಾ ನಿರ್ಮಾಣ ಸಂಸ್ಥೆಗಾಗಿ 21.29 ಕೋಟಿ ಸಾಲ ಪಡೆದಿದ್ದರು. ಈ ಸಾಲವನ್ನು ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಫೈನಾನ್ಷಿಯರ್‌ಗೆ ವಾಪಸ್ ನೀಡಿತ್ತು. ವಿಶಾಲ್ ಹಣ ವಾಪಸ್ ನೀಡುವವರೆಗೂ ಅವರ ಸಂಸ್ಥೆಯ ಸಿನಿಮಾಗಳ ಹಕ್ಕುಗಳನ್ನು ತಮಗೆ ಕೊಡುವಂತೆ ಲೈಕಾ ಸಂಸ್ಥೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ ಮೀರಿದ್ದಕ್ಕೆ ಅದು ವಿವಾದವಾಗಿ ಮಾರ್ಪಟ್ಟಿತ್ತು.

ಮದ್ರಾಸ್ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಎಸ್. ಸೌಂದರ್ ಸೋಮವಾರ(ಜೂನ್ 12) ಪ್ರಕರಣದ ವಿಚಾರಣೆ ನಡೆಸಿದರು. ಈ ವೇಳೆ ನಮ್ಮ ಸಂಸ್ಥೆ ಈವರೆಗೆ ಯಾವುದೇ ಸಿನಿಮಾ ನಿರ್ಮಾಣ ಮಾಡಿಲ್ಲ ಎಂದು ಸಾಕ್ಷಿ ಸಮೇತ ನಿರೂಪಿಸಿದರು. ಆದರೆ ವಿಶಾಲ್ ಸಿನಿಮಾ ನಿರ್ಮಾಣ ಮಾಡಿದ್ದಾಗಿ ಲೈಕಾ ಸಂಸ್ಥೆ ಸಾಕ್ಷ್ಯಾಧಾರ ಒದಗಿಸುವಲ್ಲಿ ವಿಫಲವಾಗಿದೆ. ಹಾಗಾಗಿ ಪ್ರಕರಣವನ್ನು ಕೋರ್ಟ್ ಕೈಬಿಟ್ಟಿದೆ. ಇನ್ನು ಮೂಲ ಪ್ರಕರಣದ ವಿಚಾರಣೆಯನ್ನು ಜೂನ್ 26ಕ್ಕೆ ಮುಂದೂಡಿದೆ.

Loan Default Case: Madras High Court dismisses contempt plea against tamil actor Vishal

ಸದ್ಯ 'ಮಾರ್ಕ್ ಆಂಟನಿ' ಹಾಗೂ 'ತುಪ್ಪರಿವಾಲನ್'- 2 ಸಿನಿಮಾಗಳಲ್ಲಿ ವಿಶಾಲ್ ಬಣ್ಣ ಹಚ್ಚಿದ್ದಾರೆ. ಇಳಯ ದಳಪತಿ ವಿಜಯ್ ನಟನೆಯ 'ಲಿಯೋ' ವಿಶಾಲ್ ನಟಿಸಬೇಕಿತ್ತು. ಲೋಕೇಶ್ ಕನಕರಾಜ್ ಕತೆಯನ್ನು ಕೂಡ ಹೇಳಿದ್ದರಂತೆ. ಆದರೆ ಕಾರಣಾಂತರಳಿಂದ ಆ ಸಿನಿಮಾದಲ್ಲಿ ನಟಿಸೋ ಒಲ್ಲೆ ಎಂದಿದ್ದಾಗಿ ಇತ್ತೀಚೆಗೆ ವಿಶಾಲ್ ಒಪ್ಪಿಕೊಂಡಿದ್ದರು. ಇನ್ನು ರಶ್ಮಿಕಾ ಮಂದಣ್ಣ ಅಂದರೆ ಇಷ್ಟ. ಸದ್ಯ ಆಕೆಯ ಜೊತೆ ಸೆಲೆಬ್ರೆಟಿ ಡೇಟ್‌ ಹೋಗುವ ಬಗ್ಗೆಯೂ ಹೇಳಿಕೊಂಡಿದ್ದರು.

More from Filmibeat

English summary
Loan Default Case: Madras High Court dismisses contempt plea against tamil actor Vishal. Lyca Productions filed case against Tamil film actor. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X