ಬಿಡುಗಡೆಗೂ ಮುನ್ನ 'ಕೂಲಿ' ಕಥೆ ಹೇಳಿಬಿಟ್ಟ ಲೋಕೇಶ್ ಕನಕರಾಜ್

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ತೆರೆಗೆ ಬರಲು ಇನ್ನೊಂದು ವಾರ ಬಾಕಿಯಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್ ರೀತಿಯ ಘಟನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ.

ಸನ್ ಪಿಕ್ಚರ್ಸ್ ಸಂಸ್ಥೆ 'ಕೂಲಿ' ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದೆ. ಅನಿರುದ್ಧ್ ರವಿಚಂದರ್ ಸಂಗೀತದಲ್ಲಿ ಈಗಾಗಲೇ ಆಲ್ಬಮ್ ಹಿಟ್ ಆಗಿದೆ. 'ಮೋನಿಕಾ' ಕೊಂಚ ಜೋರಾಗಿಯೇ ಸದ್ದು ಮಾಡ್ತಿದೆ. ಚಿತ್ರದಲ್ಲಿ ಹಿಂಸಾತ್ಮಕ ಸನ್ನಿವೇಶಗಳು ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ಕೊಟ್ಟಿದೆ. ಬಹಳ ವರ್ಷಗಳ ಬಳಿಕ ರಜನಿಕಾಂತ್ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಂತಾಗಿದೆ.

Lokesh kanagaraj Revealed Rajinikanth s Coolie movie Theme

ಆಗಸ್ಟ್ 14ಕ್ಕೆ ಬಾಲಿವುಡ್ 'ವಾರ್-2' ಸಿನಿಮಾ ಎದುರು 'ಕೂಲಿ' ಆರ್ಭಟ ಶುರುವಾಗಲಿದೆ. ಸ್ವಾತಂತ್ರ ದಿನಾಚರಣೆಯ ಲಾಂಗ್ ವೀಕೆಂಡ್‌ನಲ್ಲಿ ಎರಡೂ ಸಿನಿಮಾಗಳು ಬಾಕ್ಸಾಫೀಸ್ ಪೈಪೋಟಿಗೆ ಇಳಿಯಲಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈ ಹಿಂದೆ 'ಜೈಲರ್' ಚಿತ್ರದಲ್ಲಿ ಶಿವಣ್ಣ, ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದು ಪ್ಲಸ್ ಆಗಿತ್ತು. ಅದೇ ರೀತಿ ಸೂಪರ್ ಸ್ಟಾರ್‌ಗಳ ದಂಡೇ 'ಕೂಲಿ' ಸಿನಿಮಾದಲ್ಲಿದೆ.

'ಕೂಲಿ' ರನ್‌ಟೈಮ್

ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್ ವೈರಲ್ ಆಗುತ್ತಿದ್ದು ರನ್‌ ಟೈಮ್ ರಿವೀಲ್ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಸ್ಟಾರ್‌ ನಟರ ಸಿನಿಮಾ ಅಂದ್ರೆ 3 ಗಂಟೆ ಕಲಾವಧಿ ಇರುತ್ತದೆ. ಆದರೆ ಲೋಕೇಶ್ 2 ಗಂಟೆ 49 ನಿಮಿಷಕ್ಕೆ ರನ್ ಟೈಮ್ ಇಳಿಸಿದ್ದಾರೆ. ಸ್ಟಾರ್ ನಟರು ಚಿತ್ರದಲ್ಲಿದ್ದು ಅವರ ಪಾತ್ರ ಪರಿಚಯ, ಎಲಿವೇಷನ್ಸ್ ಸನ್ನಿವೇಶಗಳಿಗೆ ಕೊಂಚ ಸಮಯ ತೆಗೆದುಕೊಂಡಿರುವಂತೆ ಕಾಣುತ್ತಿದೆ. ಆದರೂ ಎರಡು ಮುಕ್ಕಾಲು ಗಂಟೆಯಲ್ಲಿ ಕಥೆ ಹೇಳಿ ಮುಗಿಸಲಿದ್ದಾರೆ.

Lokesh kanagaraj Revealed Rajinikanth s Coolie movie Theme

'ಕೂಲಿ' ಸಿನಿಮಾ ಕಥೆ

ರಜನಿಕಾಂತ್- ಲೋಕೇಶ್ ಕಾಂಬಿನೇಷನ್ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಸಿನಿಮಾ ಘೋಷಣೆ ಶುರುವಾದ ದಿನದಿಂದಲೂ ಕಥೆ ಏನು ಎನ್ನುವ ಚರ್ಚೆ ನಡೀತಿತ್ತು. ಮೊದಲು ಬಂದಿದ್ದ ಟೀಸರ್‌ನಲ್ಲಿ ವಾಚ್‌ಗಳನ್ನು ಚೈನ್ ರೀತಿ ಮಾಡಿ ಹಿಡಿದುಕೊಂಡಿದ್ದನ್ನು ನೋಡಿ ಕಥೆಯ ಬಗ್ಗೆ ಊಹಾಪೋಹ ಶುರುವಾಗಿತ್ತು. ಇದು ಟೈಮ್ ಟ್ರಾವಲಿಂಗ್ ಕಥೆ ಎಂದು ಕೆಲವರು ಭಾವಿಸಿದ್ದರು. ವಲೈಪೆಚು ವಾಯ್ಸ್ ಯೂಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ಲೋಕೇಶ್ ಮಾತನಾಡಿದ್ದಾರೆ. "ಇದು ಟೈಮ್ ಟ್ರಾವೆಲಿಂಗ್ ಕಥೆ ಅಲ್ಲ, ವಾಚ್ ಫ್ಯಾಕ್ಟರಿಯಲ್ಲಿ ನಡೆಯುವ ಕಥೆ. ಅದಕ್ಕೆ ಆ ರೀತಿ ಪ್ರೋಮೊದಲ್ಲಿ ತೋರಿಸಿದ್ದೆವು" ಎಂದಿದ್ದಾರೆ.

'ಕೂಲಿ' ಕನ್ನಡ ಟ್ರೈಲರ್

5 ಭಾಷೆಗಳಲ್ಲಿ 'ಕೂಲಿ' ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ ಕನ್ನಡ ಟ್ರೈಲರ್ ಬಿಡುಗಡೆ ಆಗದ್ದನ್ನು ನೋಡಿ ಕೆಲವರು ಬೇಸರಗೊಂಡಿದ್ದರು. ಕನ್ನಡಕ್ಕೆ ಡಬ್ ಆಗಲ್ವಾ? ಎಂದು ಕೇಳಿದ್ದರು. ಕೊಂಚ ತಡವಾಗಿ ಆದರೂ ಕನ್ನಡದಲ್ಲಿ ಡಬ್ ಮಾಡಿ ಟ್ರೈಲರ್ ರಿಲೀಸ್ ಮಾಡಿದ್ದಾರೆ.

ಅಡ್ವಾನ್ಸ್ ಬುಕ್ಕಿಂಗ್

'ಕೂಲಿ' ಸಿನಿಮಾ ಬಿಡುಗಡೆಗೆ 7 ದಿನ ಬಾಕಿಯಿದೆ. ಭಾರತದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿಲ್ಲ. ಆದರೆ ಯೂಎಸ್ ಸೇರಿದಂತೆ ಹೊರದೇಶಗಳಲ್ಲಿ ಓಪನ್ ಆಗಿದೆ. ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. 'ವಾರ್-2' ಚಿತ್ರ ಹಿಂದಿಕ್ಕಿ ಬುಕ್ಕಿಂಗ್ ನಡೀತಿದೆ. ಇನ್ನು ಕೆಲವೇ ನಿಮಿಷಗಳಲ್ಲಿ ಭಾರತದಲ್ಲಿ ಕೂಡ ಆಯ್ದ ಕಡೆಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಲಿದೆ. ಕೇರಳ ಹಾಗೂ ಕರ್ನಾಟಕದಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಏರ್ಪಾಡುಗುತ್ತಿದ್ದು ತಮಿಳುನಾಡಿನಲ್ಲಿ ಮಾತ್ರ ಬೆಳಗ್ಗೆ 9 ಗಂಟೆಯ ನಂತರ ಮೊದಲ ಪ್ರದರ್ಶನ ನಿಗದಿಯಾಗಿದೆ.

More from Filmibeat

English summary
Lokesh kanagaraj reacts on Coolie film storyline
Read more about: rajinikanth upendra aamir khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X