Leo: ಚೆನ್ನೈನಲ್ಲಿ ವಿಜಯ್ ಅಭಿನಯದ 'ಲಿಯೋ' ಸಿನಿಮಾ ಸಕ್ಸಸ್ ಮೀಟ್

ದಳಪತಿ ವಿಜಯ್ ಅಭಿನಯದ 'ಲಿಯೋ' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಈಗಾಗಲೇ 11 ದಿನಕ್ಕೆ 540 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ. ಇದು ಸುಳ್ಳು ಎಂದು ಹಲವರು ಕೊಂಕು ಮಾತಾಡುತ್ತಿದ್ದಾರೆ. ಈವೇನೇ ಇರಲಿ ಸಿನಿಮಾ ಗೆದ್ದಿದೆ ಎಂದು ಚಿತ್ರತಂಡ ಸಕ್ಸಸ್ ಮೀಟ್ ಮಾಡುತ್ತಿದೆ.

ಹೌದು, ಈ ವರ್ಷದ ಬಹುನಿರೀಕ್ಷಿತ ಚಿತ್ರವಾಗಿದ್ದು ಲಿಯೋ. ಕೆಲವು ಕಾರಣಗಳಿಂದ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಕೂಡ ಮಾಡಿರಲಿಲ್ಲ. ಹೀಗಾಗಿ ಈಗ ಚಿತ್ರತಂಡ ವಿಜಯ್ ಅಭಿಮಾನಿಗ ಜೊತೆಗೆ ಸಕ್ಸಸ್ ಮೀಟ್ ಆಯೋಜಿಸಿದೆ. ಈ ಬಗ್ಗೆ ಲಿಯೋ ತಂಡ ವೀಡಿಯೊದೊಂದಿಗೆ ಅಧಿಕೃತ ಘೋಷಣೆ ಮಾಡಿದೆ.

lokesh-kanagaraj-thalapathy-vijay-s-leo-success

ಲಿಯೋ ಸಕ್ಸಸ್ ಮೀಟ್

ಲೋಕೇಶ್ ಕನಗರಾಜ್ ನಿರ್ದೇಶನದ ದಳಪತಿ ವಿಜಯ್ ಅವರ ಲಿಯೋ ಚಿತ್ರವು ಭಾರೀ ಯಶಸ್ಸನ್ನು ಕಂಡಿದೆ. ಚಿತ್ರವು ಅಕ್ಟೋಬರ್ 19 ರಂದು ಬೆಳ್ಳಿತೆರೆಗೆ ಅಪ್ಪಳಿಸಿತ್ತು. ನಟರ ಅಭಿನಯ ಮತ್ತು ಚಿತ್ರದಲ್ಲಿನ ಸಂಗೀತದಿಂದ ವಿಮರ್ಶಕರು ಮತ್ತು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಗಳಿಸಿತ್ತು. ಆದರೆ, ಹಲವರು ಸಿನಿಮಾವನ್ನು ಮೆಚ್ಚಿಕೊಂಡಿರಲಿಲ್ಲ.

ಸದ್ಯ ಸಿನಿಮಾ ತಂಡವೇ ತಮ್ಮ ಚಿತ್ರ 540 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಿಕೊಳ್ಳುತ್ತಿರುವ ಕಾರಣ ಇದಿ ಯಶಸ್ವಿ ಸಿನಿಮಾ ಎಂದು ಭಾವಿಸಬೇಕಾಗುತ್ತದೆ. ಜೊತೆಗೆ ಸಿನಿಮಾದ ಭರ್ಜರಿ ಗೆಲುವನ್ನು ಸಂಭ್ರಮಿಸಲು ಲಿಯೋ ತಂಡ ಸಕ್ಸಸ್ ಮೀಟ್ ಆಯೋಜಿಸುತ್ತಿದೆ. ಕಾರ್ಯಕ್ರಮವು ನವೆಂಬರ್ 1 ರ ಬುಧವಾರದಂದು ಚೆನ್ನೈನಲ್ಲಿ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇಂದು ಚೆನ್ನೈನಲ್ಲಿ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಸಣ್ಣ ಪ್ರೋಮೋ ವೀಡಿಯೊವನ್ನು ಸಹ ಸಿನಿಮಾ ನಿರ್ಮಾಪಕರು ಹಂಚಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ಚಿತ್ರದ ಸಂಪೂರ್ಣ ಚಿತ್ರತಂಡ ಮತ್ತು ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ. ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮ ರದ್ದಾಗಿದ್ದ ಕಾರಣ ಈ ಸಕ್ಸಸ್ ಮೀಟ್ ಅದ್ದೂರಿಯಾಗಿರಲಿದೆ.

ವಿಶ್ವದಾದ್ಯಂತ 600 ಕೋಟಿ ಮೇಲೆ 'ಲಿಯೋ' ಕಣ್ಣು

ಚಿತ್ರವು ಕೇವಲ 12 ದಿನಗಳಲ್ಲಿ 540 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಸೆವೆನ್ ಸ್ಕ್ರೀನ್ ಸ್ಟುಡಿಯೋ ಅಕ್ಟೋಬರ್ 31 ರಂದು ಘೋಷಿಸಿತು. 13ನೇ ದಿನವೂ 'ಲಿಯೋ' ಭಾರತ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲಿದೆ. 'ಜೈಲರ್' ನಂತರ, 'ಲಿಯೋ' ತಮಿಳು ಚಿತ್ರರಂಗದ ದೊಡ್ಡ ಹಿಟ್.

lokesh-kanagaraj-thalapathy-vijay-s-leo-success

ಅಕ್ಟೋಬರ್ 31 ರ ಮಂಗಳವಾರದಂದು ಭಾರತದಲ್ಲಿ ಸುಮಾರು 4.10 ಕೋಟಿ ರೂಪಾಯಿ ಗಳಿಸಿದೆ ಎಂದು ಅಂದಾಜಿಸಲಾಗಿದೆ. ವಾರಾಂತ್ಯದಲ್ಲಿ ಮತ್ತೆ ಕಲೆಕ್ಷನ್ ಹೆಚ್ಚುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಇದು ಭಾರತದಲ್ಲಿ 13 ದಿನಗಳ ಒಟ್ಟು ಕಲೆಕ್ಷನ್ 312 ಕೋಟಿ ರೂಪಾಯಿ ಅಕ್ಟೋಬರ್ 31 ರಂದು, ಚಲನಚಿತ್ರವು ಒಟ್ಟಾರೆ ಶೇಕಡಾ 19.14 ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದೆ.

ಲಿಯೋ

ಲಿಯೋ ಲೋಕೇಶ್ ಕನಗರಾಜ್ ಅವರ ಐದನೇ ನಿರ್ದೇಶನದ ಸಿನಿಮಾ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ವಿಜಯ್ ಮತ್ತು ತ್ರಿಷಾ ಕಾಣಿಸಿಕೊಂಡಿದ್ದು, ಸಂಜಯ್ ದತ್, ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ಮ್ಯಾಥ್ಯೂ ಥಾಮಸ್, ಪ್ರಿಯಾ ಆನಂದ್, ಜಾರ್ಜ್ ಮೇರಿಯನ್ ಸೇರಿ ದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.

More from Filmibeat

English summary
Leo success event to take place on November 1st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X