Leo box office: 300 ಕೋಟಿ ಬಾಚಿಕೊಂಡು, 450 ಕೋಟಿ ಗಡಿಯತ್ತ ದಳಪತಿ ವಿಜಯ್ ಅಭಿನಯದ ಲಿಯೋ
ಲೋಕೇಶ್ ಕನಕರಾಜ್ ನಿರ್ದೇಶನದ, ದಳಪತಿ ವಿಜಯ್ ಅಭಿನಯದ ಲಿಯೋ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಸಾಕ್ನಿಕ್.ಕಾಮ್ ವರದಿಯ ಪ್ರಕಾರ, ಸಿನಿಮಾ ಬಿಡುಗಡೆಯಾದ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿಯೇ ಭಾರತದಲ್ಲಿ 300 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದ್ದು, 450 ಕೋಟಿ ಗಡಿಯತ್ತ ಹೋಗುತ್ತಿದೆ.
ದಳಪತಿ ವಿಜಯ್, ತ್ರಿಶಾ ಕೃಷ್ಣನ್, ಅರ್ಜುನ್ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಲಿಯೋ ಅಕ್ಟೋಬರ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಲಿಯೋ ಚಿತ್ರವು ವಿಜಯ್ ಮತ್ತು ಲೋಕೇಶ್ ಕನಕರಾಜ್ ಜೋಡಿ 2021 ರ ಚಲನಚಿತ್ರ ಮಾಸ್ಟರ್ ನಂತರ ಮತ್ತೊಮ್ಮೆ ಒಂದಾಗಿದ್ದ ಕಾರಣ ಭಾರಿ ನಿರೀಕ್ಷೆ ಮೂಡಿಸಿತ್ತು.

ಲಿಯೋ ಬಾಕ್ಸ್ ಆಫೀಸ್ ವರದಿ ಹೀಗಿದೆ
ವರದಿಗಳ ಪ್ರಕಾರ, ಚಿತ್ರದ ವಾರದ ಒಂದು ಕಲೆಕ್ಷನ್ 264.25 ಕೋಟಿ ರೂಪಾಯಿಗಳು. ತಮಿಳು ಭಾಷೆಯಲ್ಲಿ ಸಿನಿಮಾ 212.2 ಕೋಟಿ ರೂಪಾಯಿ ಗಳಿಸಿದೆ. ತೆಲುಗು ಭಾಷೆಯಲ್ಲಿ 34.2 ಕೋಟಿ ರೂಪಾಯಿ, ಹಿಂದಿ ಭಾಷೆಯಲ್ಲಿ 16.65 ಕೋಟಿ ಮತ್ತು ಕನ್ನಡದಲ್ಲಿ 1.2 ಕೋಟಿ ಗಳಿಸಿತ್ತು.
ಲಿಯೋ ಬಿಡುಗಡೆಯಾಗಿ ಒಂಬತ್ತನೇ ದಿನದಂದು 7.65 ಕೋಟಿ ದಾಖಲಿಸಿತ್ತು. ಅದರಲ್ಲಿ ತಮಿಳು ಭಾಷೆಯಲ್ಲಿ 5.9 ಕೋಟಿ ರೂ., ತೆಲುಗು ಭಾಷೆಯಲ್ಲಿ 70 ಲಕ್ಷ, ಹಿಂದಿಯಲ್ಲಿ 1 ಕೋಟಿ ಮತ್ತು ಕನ್ನಡ ಅವತರಿಣಿಕೆಯಲ್ಲಿ 5 ಲಕ್ಷ ಗಳಿಸಿತ್ತು. 10ನೇ ದಿನ 15 ಕೋಟಿ ಬಾಚಿಕೊಂಡಿತ್ತು. ಇದರಲ್ಲಿಯೋ ತಮಿಳು ಭಾಷೆ ಅಗ್ರ ಸ್ಥಾನದಲ್ಲಿದೆ. ತಮಿಳಿನಲ್ಲಿ 11.95 ಕೋಟಿ, ತೆಲುಗಿನಲ್ಲಿ 1.45 ಕೋಟಿ, ಹಿಂದಿಯಲ್ಲಿ 1.55 ಕೋಟಿ ಮತ್ತು ಕನ್ನಡದಲ್ಲಿ 5 ಲಕ್ಷ ಗಳಿಸಿದೆ.

ಲಿಯೋ ಸಿನಿಮಾ 11ನೇ ದಿನ 16.55 ಕೋಟಿ ಗಳಿಸಿದೆ. ತಮಿಳಿನಲ್ಲಿ 13.35 ಕೋಟಿ, ತೆಲುಗು ಭಾಷೆಯಲ್ಲಿ 1.5 ಕೋಟಿ, ಹಿಂದಿ ಭಾಷೆಯಲ್ಲಿ 1.65 ಕೋಟಿ ಮತ್ತು ಕನ್ನಡದಲ್ಲಿ 5 ಲಕ್ಷ ಹಾಗೆ ಮುಂದುವರೆದಿದೆ. ಈ ಚಿತ್ರವು 12ನೇ ದಿನಕ್ಕೆ ಭಾರತದಲ್ಲಿ ಐದು ಕೋಟಿ ಗಳಿಸಬಹುದು. ಇದುವರೆಗೆ ಭಾರತದ ಎಲ್ಲಾ ಭಾಷೆಗಳಲ್ಲಿ ಲಿಯೋ 308.45 ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ.
ಕರ್ನಾಟಕದಲ್ಲಿ 'ಲಿಯೋ' ಸಿನಿಮಾ 11 ದಿನಕ್ಕೆ 35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಅಂದಾಜಿಸಿದ್ದಾರೆ. ಸಿನಿಮಾಗೆ ಬಂದ ಮಿಶ್ರ ಪ್ರತಿಕ್ರಿಯೆ ನಡುವೆಯೂ ಪ್ರೇಕ್ಷಕರು ಲಿಯೋವನ್ನು ಒಪ್ಪಿಕೊಂಡು ನೋಡುತ್ತಿದ್ದಾರೆ. ಶಿವಣ್ಣ ನಟನೆಯ 'ಘೋಸ್ಟ್' ಸಿನಿಮಾ ಪೈಪೋಟಿ ಮಧ್ಯೆಯೂ 'ಲಿಯೋ' ಆರ್ಭಟ ರಾಜ್ಯದಲ್ಲಿ ಮುಂದುವರೆದಿದೆ. ಬೆಂಗಳೂರಿನಲ್ಲಿ ಸಿನಿಮಾ 11 ದಿನಕ್ಕೆ ಬರೋಬ್ಬರಿ 7092 ಶೋಗಳಲ್ಲಿ ಪ್ರದರ್ಶನ ಕಂಡು ದಾಖಲೆ ಬರೆದಿದೆ.
ಲಿಯೋ ಸಿನಿಮಾ
ದಳಪತಿ ವಿಜಯ್ ಜೊತೆಗೆ ತ್ರಿಶಾ ಕೃಷ್ಣನ್, ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್, ಮಡೋನಾ ಸೆಬಾಸ್ಟಿಯನ್, ಜಾರ್ಜ್ ಮೇರಿಯನ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಮತ್ತು ಮ್ಯಾಥ್ಯೂ ಥಾಮಸ್ ನಟಿಸಿದ್ದಾರೆ. ಗಿಲ್ಲಿ, ಕುರುವಿ ಮತ್ತು ತಿರುಪಾಚಿಯಂತಹ ತಮಿಳು ಹಿಟ್ ಚಿತ್ರಗಳನ್ನು ನೀಡಿದ್ದ ವಿಜಯ್ - ತ್ರಿಷಾ ಜೋಡಿಯ ಮತ್ತೊಂದು ಸಿನಿಮಾ. ಜೊತೆಗೆ ಬಾಲಿವುಡ್ ನಟ ಸಂಜಯ್ ದತ್ ಅವರ ಚೊಚ್ಚಲ ತಮಿಳು ಚಿತ್ರವಾಗಿದೆ.


Click it and Unblock the Notifications











