ಖಾಸಗಿ ವಿಡಿಯೋ ವೈರಲ್ ವಿವಾದ: ಪ್ರತಿಕ್ರಿಯೆ ನೀಡಿದ ನಟಿ ಲೋಸ್ಲಿಯಾ

ತಮಿಳು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ಶ್ರೀಲಂಕಾ ಮೂಲದ ನಟಿ ಲೋಸ್ಲಿಯಾ ಮರಿಯನೇಸನ್ ಖಾಸಗಿ ವಿಡಿಯೋ ಲೀಕ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತಮಿಳು ಬಿಗ್ ಬಾಸ್ ಮೂಲಕ ತಮಿಳಿಗರ ಮನೆ ಮಾತಾಗಿರುವ ಲೋಸ್ಲಿಯಾ ಬಿಗ್ ಮನೆಯಿಂದ ಹೊರ ಬರುತ್ತಿದ್ದಂತೆ ದೊಡ್ಡ ವಿವಾದವನ್ನೆ ಸೃಷ್ಟಿಸಿಕೊಂಡಿದ್ದರು.

ದೊಡ್ಡ ಮಟ್ಟಕ್ಕೆ ಸುದ್ದಿಯಾದರು ಈ ಬಗ್ಗೆ ಶ್ರೀಲಂಕಾ ಸುಂದರಿ ಎಲ್ಲಿಯೂ ಪ್ರತಿಕ್ರಿಯೆ ನೀಡಿರಲಿಲ್ಲ. ತಿಂಗಳುಗಳಿಂದ ಮೌನಕ್ಕೆ ಶರಣಾಗಿದ್ದ ನಟಿ ಈಗ ಲೀಕ್ ಆದ ವಿಡಿಯೋ ಬಗ್ಗೆ, ಹಬ್ಬಿದ್ದ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಸುಳ್ಳುಗಳೆ ತುಂಬಿರುವ ಈ ಜಗತ್ತಿನಲ್ಲಿ ಇದ್ದೇವೆ. ಇಲ್ಲಿ ಭಯ ತುಂಬಿದೆ. ನಕರಾತ್ಮಕಥೆಯೆ ಹೆಚ್ಚಿದೆ" ಎಂದು ಹೇಳಿದ್ದಾರೆ.ಮುಂದೆ ಓದಿ...

ಬಿಗ್ ಬಾಸ್-3ನಲ್ಲಿ ಇದ್ದರು ಲೋಸ್ಲಿಯಾ

ಬಿಗ್ ಬಾಸ್-3ನಲ್ಲಿ ಇದ್ದರು ಲೋಸ್ಲಿಯಾ

ಶ್ರೀಲಂಕಾ ಮೂಲಕ ನಟಿ ಲೋಸ್ಲಿಯಾ ತಮಿಳು ಬಿಗ್ ಬಾಸ್ ಮೂಲಕ ಹೆಚ್ಚು ಜನಪ್ರಿಯತೆ ಪಡೆಸಿದ್ದಾರೆ. ಶ್ರೀಲಂಕಾದಲ್ಲಿ ಸುದ್ದಿ ವಾರದಿಗಾರ್ತಿಯಾಗಿದ್ದ ಲೋಸ್ಲಿಯಾ ಮರಿಯನೇಸನ್, ನಂತರ ಕಮಲ್ ಹಾಸನ್ ನಡೆಸಿಕೊಡುತ್ತಿದ್ದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಗ್ ಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಬಳಿಕ ಲೋಸ್ಲಿಯಾ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಚರ್ಚೆಗೆ ಕಾರಣವಾಗಿತ್ತು ವೈಯಕ್ತಿಕ ಜೀವನ

ಚರ್ಚೆಗೆ ಕಾರಣವಾಗಿತ್ತು ವೈಯಕ್ತಿಕ ಜೀವನ

ತಮಿಳು ಬಿಗ್ ಬಾಸ್-3ಯಿಂದ ಹೊರಬಂದ ಬಳಿಕ ಲೋಸ್ಲಿಯಾ ಖಾಸಗಿ ಬದುಕಿನ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡಿತ್ತು. ಲೋಸ್ಲಿಯಾಗೆ ಈಗಾಗಲೆ ಮದುವೆ ಆಗಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅಲ್ಲದೆ ಫೋಟೋಗಳು ಸಹ ಲೀಕ್ ಆಗಿತ್ತು. ಆದರೆ ಇದ್ಯಾವುದರ ಬಗ್ಗೆಯು ನಟಿ ಲೋಸ್ಲಿಯಾ ಪ್ರತಿಕ್ರಿಯೆ ನೀಡಿರಲಿಲ್ಲ.

ವೈರಲ್ ಆಗಿತ್ತು ಖಾಸಗಿ ವಿಡಿಯೋ

ವೈರಲ್ ಆಗಿತ್ತು ಖಾಸಗಿ ವಿಡಿಯೋ

ಲೋಸ್ಲಿಯಾ ಬಿಗ್ ಬಾಸ್ ಮನೆಯಲ್ಲಿ ಮುಗ್ಧತೆ ಮೂಲಕವೆ ಎಲ್ಲರ ಮನಗೆದ್ದಿದ್ದರು. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ಲೋಸ್ಲಿಯಾ ಬಿಗ್ ಮನೆಯಿಂದ ಹೊರಬಂದ ನಂತರ ವಿವಾದಗಳ ಮೂಲಕವೆ ಹೆಚ್ಚು ಸದ್ದು ಮಾಡಿದ್ದಾರೆ. ಮದುವೆ ವದಂತಿ ಜೊತೆಗೆ ಲೋಸ್ಲಿಯಾ ಖಾಸಗಿ ವಿಡಿಯೋ ಲೀಕ್ ಆಗಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹಲ್-ಚಲ್ ಎಬ್ಬಿಸಿದ್ದ ವಿಡಿಯೋ ಬಗ್ಗೆ ಲೋಸ್ಲಿಯಾ ಯಾವುದೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಆಕೆಯ ಸ್ನೇಹಿತೆ ಈ ಇದೆಲ್ಲ ಸುಳ್ಳು ಆಕೆಗೆ ಮದುವೆ ಆಗಿಲ್ಲ ಎಂದು ಹೇಳಿದ್ದರು.

ಬಹು ದಿನಗಳ ನಂತರ ಪ್ರತಿಕ್ರಿಯೆ ನೀಡಿದ ಲೋಸ್ಲಿಯಾ

ಬಿಗ್ ಬಾಸ್ ಮುಗಿದು ತಿಂಗಳುಗಳೆ ಆಗಿವೆ. ಆದ್ರೀಗ ಈ ಬಗ್ಗೆ ನಟಿ ಲೋಸ್ಲಿಯಾ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಲೋಸ್ಲಿಯಾ "ಈ ಜಗತ್ತಿನ ತುಂಬ ಸುಳ್ಳುಗಳೆ ತುಂಬಿದೆ. ನಾವೆಲ್ಲರು ನಮ್ಮ ಜೀವನದಲ್ಲಿ ಒಂದು ಬೆಳಕನ್ನ ಹೊಂದಿದ್ದೇವೆ. ಕೊನೆಗೆ ಒಂದು ಹಂತದಲ್ಲಿ ನಾವು ನಮ್ಮ ಆಂತರಿಕ ವ್ಯಕ್ತಿತ್ವದೊಂದಿಗೆ ಮಾತ್ರ ಉಳಿದಿರುತ್ತೇವೆ. ಈ ಜಗತ್ತು ಭಯದಿಂದ ತುಂಬಿದೆ. ಸಾಕಷ್ಟು ನಕರಾತ್ಮಕತೆ ಮತ್ತು ಜಡ್ಜ್ ಮೆಂಟ್ ಗಳೆ ತುಂಬಿದೆ. ಇದೆಲ್ಲದರ ನಡುವೆ ಜನರು ಸಂತೋಷವಾಗಿರಲು ಬದಲಾಗಬೇಕೆಂದು ನಾನು ಭಾವಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಫ್ರೆಂಡ್ಸ್ ಸಿನಿಮಾದಲ್ಲಿ ಲೋಸ್ಲಿಯಾ

ಫ್ರೆಂಡ್ಸ್ ಸಿನಿಮಾದಲ್ಲಿ ಲೋಸ್ಲಿಯಾ

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಲೋಸ್ಲಿಯಾ ಫ್ರೆಂಡ್ಸ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕ್ರಿಕೆಟಿಗ ಹರ್ಭನ್ ಸಿಂಗ್ ಮತ್ತು ಅರ್ಜುನ್ ಸರ್ಜಾ ಅಭಿನಯದ ಫ್ರೆಂಡ್ಸ್ ಸಿನಿಮಾದಲ್ಲಿ ನಾಯಕಿಯಾಗಿ ಲೋಸ್ಲಿಯಾ ಬಣ್ಣಹಚ್ಚಿದ್ದಾರೆ.

More from Filmibeat

English summary
Tamil actress Losliya Mariyanesan private video leaked controversy. Losliya Mariyanesan reaction about her rumors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X