Don't Miss!
- Sports
ಹೈದರಾಬಾದ್ಗೆ ಶೀಘ್ರ ಮರಳುವ ಮುನ್ಸೂಚನೆ ನೀಡಿದ ವಿಲಿಯಮ್ಸನ್
- News
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ಗೆ ಕೊರೊನಾ ಸೋಂಕು
- Automobiles
ಇ ಕಾಮರ್ಸ್ ಸೇವಾ ಕಂಪನಿಗೆ ಎಲೆಕ್ಟ್ರಿಕ್ ಸ್ಕೂಟರ್ ಒದಗಿಸಲಿದೆ ಒಕಿನಾವ
- Finance
Alert: ವಾಹನಗಳ ಖರೀದಿ ಮತ್ತಷ್ಟು ದುಬಾರಿ, 2ನೇ ತ್ರೈಮಾಸಿಕದಲ್ಲಿ ಬೆಲೆ ಹೆಚ್ಚಳ ಸಾಧ್ಯತೆ
- Education
Bangalore University Exams 2021: ಸ್ನಾತಕ, ಸ್ನಾತಕೋತ್ತರ ಮತ್ತು ಇಂಜಿನಿಯರಿಂಗ್ ಪದವಿ ಪರೀಕ್ಷೆಗಳು ಮುಂದೂಡಿಕೆ
- Lifestyle
ರಾಮನವಮಿ 2021: ರಾಮನ ಕುರಿತಾದ ಅಚ್ಚರಿಯ ಸಂಗತಿಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಖ್ಯಾತ ಹಾಸ್ಯ ನಟ ವಡಿವೇಲು ಬಳಿ ಇರುವ ಕಾರ್ ಕಲೆಕ್ಷನ್ ನೋಡಿದ್ರೆ ಅಚ್ಚರಿ ಪಡುತ್ತೀರಿ
ಸ್ಟಾರ್ ಕಲಾವಿದರ ಬಳಿ ಇರುವ ಕಾರ್ ಕಲೆಕ್ಷನ್ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಇರುತ್ತೆ. ಯಾವ ಸ್ಟಾರ್ ಯಾವ್ಯಾವ ಕಾರುಗಳನ್ನು ಬಳಸುತ್ತಾರೆ, ಎಷ್ಟು ಕಾರುಗಳನ್ನು ಹೊಂದಿದ್ದಾರೆ ಎಂದು ಅಭಿಮಾನಿಗಳು ಗೂಗಲ್ ಮಾಡುತ್ತಿರುತ್ತಾರೆ. ಸ್ಯಾಂಡಲ್ ವುಡ್ ನಿಂದ ಬಾಲಿವುಡ್‌ವರೆಗೂ ದುಬಾರಿ ಕಾರುಗಳನ್ನು ಹೊಂದಿರುವ ಕಲಾವಿದರೇ ಹೆಚ್ಚು ಸಿಗುತ್ತಾರೆ.
ತಮಿಳಿನ ಖ್ಯಾತ ಹಾಸ್ಯ ನಟ ವಡಿವೇಲು ಅವರ ಕಾರ್ ಕಲೆಕ್ಷನ್ ನೋಡಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಮನೆಸುತ್ತ ದುಬಾರಿ ಕಾರುಗಳನ್ನೇ ನಿಲ್ಲಿಸಿಕೊಂಡಿದ್ದಾರೆ. ಸುಮಾರು 30ಕ್ಕು ಹೆಚ್ಚು ವರ್ಷಗಳಿಂದ ತಮಿಳು ಸಿನಿಮಾರಂಗದಲ್ಲಿ ಹಾಸ್ಯಕಲಾವಿದನಾಗಿ ಆಳ್ವಿಕೆ ಮಾಡುತ್ತಿರುವ ವಡಿವೇಲು ಇತ್ತೀಚಿಗೆ ಸಿನಿಮಾಗಳಲ್ಲಿ ನಟಿಸುವುದು ತೀರ ವಿರಳ.
ಹೊಲದಲ್ಲಿ ಉಳುಮೆ ಮಾಡುತ್ತಿರುವ ನಟಿ ರಶ್ಮಿಕಾ: ವಿಡಿಯೋ ವೈರಲ್

ಆಡಿ ಕ್ಯೂ7
ವಡಿವೇಲು ಅವರ ಬಳಿ ಇರುವ ಕಾರಿಗಳಲ್ಲಿ ಮೊದಲನೆಯದ್ದು ದುಬಾರಿ ಆಡಿ(Audi) ಕ್ಯೂ 7 ಕಾರು. ಇದು ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ.

ಜಾಗ್ವಾರ್ ಎಕ್ಸ್ ಜೆ
ಜಾಗ್ವಾರ್ ಎಕ್ಸ್ ಜೆ ವಡಿವೇಲು ಬಳಿ ಇರುವ ಮತ್ತೊಂದು ದುಬಾರಿ ಕಾರು. ಜಾಗ್ವಾರ್ ಸೀರಿಸ್‌ನ ಅತ್ಯಂತ ಐಷಾರಾಮಿ ಕಾರು ಇದಾಗಿದೆ. ಹೆಚ್ಚುವರಿ ಆಂತರಿಕ ಸ್ಪೇಸ್ ಮತ್ತು ಲಾಂಗ್ ವೀಲ್ ಬೇಸ್ ಇರುವ ಕಾರು ಇದಾಗಿದೆ.

ಬಿಎಂಡಬ್ಲ್ಯೂ7
ವಡಿವೇಲು ಅವರ ಖಾಸಗಿ ಕಾರ್ ಪಾರ್ಕಿಂಗ್‌ನಲ್ಲಿ ಬಿಎಂಡಬ್ಲ್ಯೂ 7 ಐಷಾರಾಮಿ ಕಾರು ಕೂಡ ಇದೆ. ದುಬಾರಿ ಕಾರುಗಳಲ್ಲಿ ಇದು ಕೂಡ ಒಂದಾಗಿದೆ.

ಬೆಂಟ್ಲಿ ಕಾಂಟಿನೆಂಟಲ್ ಜಿಟಿ
ವಿಶ್ವದ ಅತ್ಯಂತ ಐಷಾರಾಮಿ ಮತ್ತು ಶಕ್ತಿಯುತವಾದ ಕಾರುಗಳಲ್ಲಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರು ಒಂದಾಗಿದೆ. ಈ ದುಬಾರಿ ಕೂರು ಕೂಡ ವಡಿವೇಲು ಅವರ ಮನೆಯಲ್ಲಿದೆ. ಬೆಂಟ್ಲಿ ಕಾರನ್ನು ಖರೀದಿರುವ ಬಗ್ಗೆ ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಮಾತನಾಡಿದ್ದರು.
ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅತೀ ಹೆಚ್ಚು ಚಿನ್ನದ ಪದಕ ಗೆದ್ದ ಸ್ಟಾರ್ ನಟ ಅಜಿತ್

ರೋಲ್ಸ್ ರಾಯ್ಸ್ ಘೋಸ್ಟ್
ಇದು ಕೂಡ ಜಗತ್ತಿನ ಅತೀ ದುಬಾರಿ ಕಾರುಗಳಲ್ಲಿ ಒಂದಾಗಿದೆ. ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಸಹ ವಡಿವೇಲು ಬಳಿ ಇದೆ. ಈ ಕಾರಿನ ಬೆಲೆ 6.21 ಕೋಟಿ ರೂ. ಯಿಂದ 7 ಕೋಟಿ ರೂ. ಪ್ರಾರಂಭವಾಗುತ್ತೆ.

ಪೋರ್ಷೆ 911 ಕೂಪ್
ಪೋರ್ಷೆ ವಿಶ್ವದ ಅತ್ಯಂತ ಆಕರ್ಷಣೀಯ ಸ್ಪೋರ್ಟ್ಸ್ ಕಾರ್ ಬ್ರಾಂಡ್ ಆಗಿದೆ. ವಡಿವೇಲು ಅವರ ಕಾರುಗಳ ಸಂಗ್ರಹದಲ್ಲಿ ಈ ಕಾರನ್ನು ನೋಡಬಹುದು. ಈ ಕಾರಿನ ಬೆಲೆ ಸುಮಾರು 2 ಕೋಟಿ ರೂ.

ಲ್ಯಾಂಡ್ ರೋವರ್ ರೇಂಜ್ ರೋವರ್ ಇವೋಕ್
ವಡುವೇಲು ಅವರ ದುಬಾರಿ ಕಾರುಗಳ ಪಟ್ಟಿಗಳಲ್ಲಿ ಕೊನೆಯದ್ದು ಲ್ಯಾಂಡ್ ರೋವರ್ ರೇಂಜ್ ರೋವರ್ ಇವೋಕ್ ಕೂಡ ಒಂದು. ಬ್ರಿಟಿಷ್ ಐಷಾರಾಮಿ ಉತ್ಪಾದಕರಿಂದ ಸುಂದರವಾಗಿ ರಚಿಸಲಾದ ಈ ಕಾರು ವಡಿವೇಲು ಮನೆಯಲ್ಲಿದೆ. ವಿಶ್ವದ ಅತ್ಯಂತ ದುಬಾರಿ ಕಾರುಗಳು ತಮಿಳಿನ ಖ್ಯಾತ ಹಾಸ್ಯ ನಟನ ಮನೆಯಲ್ಲಿದೆ.