For Quick Alerts
  ALLOW NOTIFICATIONS  
  For Daily Alerts

  ಶಂಕರ್ ವಿರುದ್ಧ ಹೈದರಾಬಾದ್‌ ಕೋರ್ಟ್‌ ಮೊರೆ ಹೋದ ಲೈಕಾ ಪ್ರೊಡಕ್ಷನ್

  |

  ನಿರ್ದೇಶಕ ಶಂಕರ್ ಮತ್ತು ಲೈಕಾ ಪ್ರೊಡಕ್ಷನ್ ಸಂಸ್ಥೆಯ ನಡುವಿನ ವಿವಾದ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಇಂಡಿಯನ್ 2 ಸಿನಿಮಾ ನಿರ್ದೇಶನ ಮಾಡಬೇಕಿದ್ದ ಶಂಕರ್ ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದಾರೆ. ಶಂಕರ್ ಈ ಚಿತ್ರ ಮುಗಿಸಿಕೊಡಬೇಕು ಎಂದು ನಿರ್ಮಾಪಕರು ಮದ್ರಾಸ್‌ ಕೋರ್ಟ್‌ನಲ್ಲಿ ದೂರು ನೀಡಿದ್ದರು.

  ಮದ್ರಾಸ್‌ ನ್ಯಾಯಾಲಯದಲ್ಲಿ ಈ ಕೇಸ್‌ ಇನ್ನು ಇತ್ಯರ್ಥವಾಗಿಲ್ಲ. ಈ ನಡುವೆ ಹೈದರಾಬಾದ್‌ ಕೋರ್ಟ್‌ನಲ್ಲಿ ಶಂಕರ್ ವಿರುದ್ದ ಲೈಕಾ ಪ್ರೊಡಕ್ಷನ್ ಪ್ರಕರಣ ದಾಖಲಿಸಿದೆ. ಶಂಕರ್‌ರನ್ನು ಚಿತ್ರರಂಗದಿಂದ ನಿಷೇದ ಮಾಡಬೇಕೆಂದು ಆಗ್ರಹಿಸಿ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ.

  ಈ ಸಂಬಂಧ ಪ್ರತಿಕ್ರಿಯಿಸಿರುವ ಶಂಕರ್ ಪರ ವಕೀಲರು, ''ಮದ್ರಾಸ್‌ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿರುವಾಗಲೇ ಹೈದರಾಬಾದ್‌ ನ್ಯಾಯಾಲಯದಲ್ಲೂ ಪ್ರಕರಣ ದಾಖಲಿಸಿರುವುದು ಖಂಡನೀಯ'' ಎಂದಿದ್ದರು. ಅದಕ್ಕೆ ಉತ್ತರಿಸಿರುವ ಲೈಕಾ ಸಂಸ್ಥೆ ''ಮದ್ರಾಸ್ ಕೋರ್ಟ್‌ನಲ್ಲಿರುವ ಪ್ರಕರಣ ಬೇರೆ, ಹೈದರಾಬಾದ್‌ ಪ್ರಕರಣ ಬೇರೆ, ಒಂದಕ್ಕೊಂದು ಸಂಬಂಧವಿಲ್ಲ'' ಎಂದಿದ್ದಾರೆ. ಮುಂದೆ ಓದಿ...

  ಮದ್ರಾಸ್ ಕೋರ್ಟ್ ಏನು ಹೇಳಿತ್ತು?

  ಮದ್ರಾಸ್ ಕೋರ್ಟ್ ಏನು ಹೇಳಿತ್ತು?

  ಶಂಕರ್ ಮತ್ತು ಲೈಕಾ ಸಂಸ್ಥೆಯ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ಮಾಡಿದ್ದ ಮದ್ರಾಸ್ ಹೈ ಕೊರ್ಟ್, ಎರಡು ಪಕ್ಷದವರು ಚರ್ಚಿಸಿ, ಒಮ್ಮತ ನಿರ್ಧಾರಕ್ಕೆ ಬನ್ನಿ ಎಂದು ಸೂಚಿಸಿತ್ತು. ಆದರೆ ಇಬ್ಬರು ಇದುವರೆಗೂ ಒಮ್ಮತಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ. ಅಷ್ಟರೊಳಗೆ ಕೋವಿಡ್ ಪರಿಸ್ಥಿತಿ ಗಂಭೀರವಾದ ಹಿನ್ನೆಲೆ ಪ್ರಕರಣಕ್ಕೆ ಅಲ್ಲಿಗೆ ನಿಂತಿದೆ.

  ಇಂಡಿಯನ್ 2 ಸಮಸ್ಯೆ ಬಗೆಹರಿಯಿತಾ? ಮದ್ರಾಸ್ ಕೋರ್ಟ್ ಹೇಳಿದ್ದೇನು?ಇಂಡಿಯನ್ 2 ಸಮಸ್ಯೆ ಬಗೆಹರಿಯಿತಾ? ಮದ್ರಾಸ್ ಕೋರ್ಟ್ ಹೇಳಿದ್ದೇನು?

  ಬೇರೆ ಸಿನಿಮಾ ಮಾಡಬಾರದು

  ಬೇರೆ ಸಿನಿಮಾ ಮಾಡಬಾರದು

  ಇಂಡಿಯನ್ 2 ಚಿತ್ರೀಕರಣ ಮುಗಿಸಿಕೊಡುವುದಕ್ಕು ಮುಂಚಿತವಾಗಿ ಶಂಕರ್ ಬೇರೆ ಯಾವ ಚಿತ್ರವನ್ನು ಮಾಡಲು ಅವಕಾಶ ಕೊಡಬಾರದು ಎಂದು ವಾಣಿಜ್ಯ ಮಂಡಳಿಗಳಿಗೆ ನಿರ್ಮಾಪಕರು ಪತ್ರದ ಮೂಲಕ ವಿನಂತಿಸಿರುವುದು ಹಳೇ ಸಂಗತಿ.

  40 ಕೋಟಿ ಸಂಭಾವನೆಗೆ ನಿರ್ಮಾಪಕರು ಒಪ್ಪಂದ

  40 ಕೋಟಿ ಸಂಭಾವನೆಗೆ ನಿರ್ಮಾಪಕರು ಒಪ್ಪಂದ

  'ಇಂಡಿಯನ್ 2' ಸಿನಿಮಾ ನಿರ್ದೇಶನ ಮಾಡಲು 40 ಕೋಟಿ ರು ಸಂಭಾವನೆಗೆ ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ 14 ಕೋಟಿ ಪಾವತಿಸಲಾಗಿದೆ. ಇನ್ನುಳಿದ ಬಾಕಿ ಹಣವನ್ನೂ ಪಾವತಿಸಲು ತಾವು ತಯಾರಿರುವುದಾಗಿ ಲೈಕಾ ತಿಳಿಸಿತ್ತು. ಈವರೆಗೆ 180 ಕೋಟಿ ರೂಪಾಯಿ ಹಣವನ್ನು ಸಿನಿಮಾಕ್ಕಾಗಿ ಖರ್ಚು ಮಾಡಲಾಗಿದೆ. ಸಿನಿಮಾದ ಒಟ್ಟು ಬಜೆಟ್ 236 ಕೋಟಿ ಎಂದು ಲೈಕಾ ಆರೋಪ ಮಾಡಿದೆ.

  ಬಾಲಿವುಡ್ ಸ್ಟಾರ್ ಜೊತೆ ಸಿನಿಮಾ ಘೋಷಿಸಿದ ಶಂಕರ್: ಚಿರು ಪುತ್ರನ ಚಿತ್ರ ಏನಾಯ್ತು?ಬಾಲಿವುಡ್ ಸ್ಟಾರ್ ಜೊತೆ ಸಿನಿಮಾ ಘೋಷಿಸಿದ ಶಂಕರ್: ಚಿರು ಪುತ್ರನ ಚಿತ್ರ ಏನಾಯ್ತು?

  Recommended Video

  33M ಫಾಲೋವರ್ಸ್ ಹೊಂದಿರೋ ಮಾಹಿ ಫಾಲೋ ಮಾಡೋದು ಇವ್ರನ್ನು‌ ಮಾತ್ರ!! | Filmibeat Kannada
  ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಶಂಕರ್

  ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಶಂಕರ್

  ಈ ಕಡೆ ಇಂಡಿಯನ್ 2 ಸಿನಿಮಾ ಅರ್ಧಕ್ಕೆ ನಿಂತಿದೆ. ನಾಯಕ ನಟ ಕಮಲ್ ಹಾಸನ್ ಈ ಚಿತ್ರ ಬಿಟ್ಟು ಅದಾಗಲೇ ತಮ್ಮದೇ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ವಿಕ್ರಂ ಸಿನಿಮಾ ಶುರು ಮಾಡಿದ್ದಾರೆ. ಮತ್ತೊಂದೆಡೆ ನಿರ್ದೇಶಕ ಶಂಕರ್, ತೆಲುಗಿನಲ್ಲಿ ರಾಮ್ ಚರಣ್ ಜೊತೆ ಒಂದು ಸಿನಿಮಾ, ಹಿಂದಿ ನಟ ರಣ್ವೀರ್ ಸಿಂಗ್ ಜೊತೆ ಒಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ.

  English summary
  Lyca production moves hyderabad court against Director Shankar seeking ban from film industry.
  Thursday, June 17, 2021, 16:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X