For Quick Alerts
  ALLOW NOTIFICATIONS  
  For Daily Alerts

  ಆರ್‌ಆರ್‌ಆರ್‌ ಚಿತ್ರದ ವಿತರಣೆ ಹಕ್ಕು ಖರೀದಿಸಿದ ಲೈಕಾ ಪ್ರೊಡಕ್ಷನ್

  |

  ಎಸ್‌ಎಸ್‌ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಮೆಗಾ ಸಿನಿಮಾ ಆರ್‌ಆರ್‌ಆರ್ ಅಕ್ಟೋಬರ್ 13 ರಂದು ವರ್ಲ್ಡ್ ವೈಡ್ ಬಿಡುಗಡೆಯಾಲಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಭಾಷೆಯಲ್ಲಿ ಆರ್‌ಆರ್‌ಆರ್ ಸಿನಿಮಾ ರಿಲೀಸ್ ಆಗಲಿದೆ.

  ಬಿಡುಗಡೆಗೂ ಮುಂಚೆ ಆರ್‌ಆರ್‌ಆರ್ ಚಿತ್ರದ ಕಲೆಕ್ಷನ್ ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಕೇವಲ ವಿತರಣೆ ಹಕ್ಕಿನಿಂದಲೆ 300 ಕೋಟಿ ಗಳಿಸಿದೆ ಎನ್ನಲಾಗಿದೆ. ಇದೀಗ, ತಮಿಳುನಾಡು ವಿತರಣೆ ಹಕ್ಕನ್ನು ಲೈಕಾ ಪ್ರೊಡಕ್ಷನ್ ಖರೀದಿಸಿರುವುದು ಅಧಿಕೃತವಾಗಿದೆ.

  RRR ಚಿತ್ರಕ್ಕೆ ಕರ್ನಾಟಕದಿಂದ ಮೆಗಾ ಆಫರ್: ರಿಲೀಸ್ ಮುನ್ನವೇ ಭಾರಿ ಬಿಸಿನೆಸ್?RRR ಚಿತ್ರಕ್ಕೆ ಕರ್ನಾಟಕದಿಂದ ಮೆಗಾ ಆಫರ್: ರಿಲೀಸ್ ಮುನ್ನವೇ ಭಾರಿ ಬಿಸಿನೆಸ್?

  ಭಾರತೀಯ ಸಿನಿಮಾ ಜಗತ್ತಿನಲ್ಲಿ ಭಾರಿ ಬಜೆಟ್ ಚಿತ್ರಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ಈಗ ರಾಜಮೌಳಿ ಚಿತ್ರವನ್ನು ತಮಿಳುನಾಡಿನಲ್ಲಿ ರಿಲೀಸ್ ಮಾಡಲು ನಿರ್ಧರಿಸಿದೆ. ಈ ಕುರಿತು ಸ್ವತಃ ಲೈಕಾ ಸಂಸ್ಥೆ ಪ್ರಕಟಣೆ ನೀಡಿದೆ.

  ಸದ್ಯದ ವರದಿ ಪ್ರಕಾರ, ಸುಮಾರು 45 ಕೋಟಿ ರೂಪಾಯಿಗೆ ತಮಿಳುನಾಡು ವಿತರಣೆ ಹಕ್ಕು ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಹಣದ ವಿವರ ನೀಡಿಲ್ಲ.

  ತೆಲುಗಿನ ಇಬ್ಬರು ಸ್ವಾತಂತ್ರ್ಯವೀರರ ಕುರಿತಾದ ಐತಿಹಾಸಿಕ ಚಿತ್ರ ಇದಾಗಿದ್ದು, ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟಿ ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ಕೆಲವು ಹಾಲಿವುಡ್ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಅಂದ್ಹಾಗೆ, ಬಾಹುಬಲಿ ಸಿನಿಮಾ ಬಳಿಕ ಆರ್‌ಆರ್‌ಆರ್ ಚಿತ್ರ ತಯಾರಾಗುತ್ತಿದ್ದು, ಸುಮಾರು 450 ಕೋಟಿ ಬಜೆಟ್ ಆಗಿದೆಯಂತೆ. ಡಿವಿವಿ ದಾನಯ್ಯ ಈ ಚಿತ್ರ ನಿರ್ಮಾಣ ಮಾಡಿದ್ದು, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಮಾಡಿದ್ದಾರೆ.

  ಲೈಕಾ ಪ್ರೊಡಕ್ಷನ್ ಕುರಿತು ಹೇಳುವುದಾದರೇ, ಕತ್ತಿ, ಖೈದಿ 150, ಕೋಲಮಾವು ಕೋಕಿಲಾ, ವಡಾ ಚೆನ್ನೈ, 2.0, ದರ್ಬಾರ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದೆ. ಪೊನ್ನಿಯನ್ ಸೆಲ್ವನ್, ಇಂಡಿಯನ್ 2 ಚಿತ್ರಗಳಿಗೂ ಲೈಕಾ ಬಂಡವಾಳ ಹಾಕಿದೆ.

  ಈ ವರ್ಷ ಕೀರ್ತಿ ಸುರೇಶ್ ಮದುವೆ, ಹುಡುಗ ಯಾರು ಗೊತ್ತಾ | Filmibeat Kannada
  English summary
  Lyca Productions Bagged RRR Movie theatrical rights in Tamil Nadu. Tamil Version Rights For a Whopping 45 Crores says report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X