For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಿರ್ದೇಶಕ ಶಂಕರ್ ವಿರುದ್ಧ ದೂರು ನೀಡಿದ ನಿರ್ಮಾಣ ಸಂಸ್ಥೆ

  |

  ರೋಬೊ, ಇಂಡಿಯನ್, ಅನ್ನಿಯನ್, ರೋಬೊ 2, ಬಾಯ್ಸ್ ಇನ್ನೂ ಹಲವರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ವಿರುದ್ಧ ನಿರ್ಮಾಣ ಸಂಸ್ಥೆಯೊಂದು ದೂರು ನೀಡಿದೆ.

  ಕಮಲ್ ಹಾಸನ್ ನಟನೆಯ 'ಇಂಡಿಯನ್ 2' ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡುತ್ತಿದ್ದರು. ಇದೇ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದ ಲೈಕಾ ಸಿನಿಮಾ ಸಂಸ್ಥೆಯೇ ಈಗ ಶಂಕರ್ ವಿರುದ್ಧ ಮದ್ರಾಸ್‌ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದೆ.

  ಸಾಕಷ್ಟು ಹಣ ಖರ್ಚು ಮಾಡಿದ್ದರೂ ಸಹ ನಿಗದಿಗಿಂತಲೂ ಹೆಚ್ಚು ಸಮಯ ಆಗಿದ್ದರೂ ಸಹ ಶಂಕರ್ 'ಇಂಡಿಯನ್ 2' ಸಿನಿಮಾವನ್ನು ಪೂರ್ಣಗೊಳಿಸಿಲ್ಲ ಎಂದು ಲೈಕಾ ಪ್ರೊಡಕ್ಷನ್ಸ್ ಆರೋಪ ಮಾಡಿದೆ.

  'ಇಂಡಿಯನ್ 2' ಸಿನಿಮಾ ನಿರ್ದೇಶನ ಮಾಡಲು 40 ಕೋಟಿ ರು ಸಂಭಾವನೆಗೆ ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ 14 ಕೋಟಿ ಪಾವತಿಸಲಾಗಿದೆ. ಇನ್ನುಳಿದ ಬಾಕಿ ಹಣವನ್ನೂ ಪಾವತಿಸಲು ತಾವು ತಯಾರಿರುವುದಾಗಿ ಲೈಕಾ ಹೇಳಿದೆ.

  ಈವರೆಗೆ 180 ಕೋಟಿ ರೂಪಾಯಿ ಹಣವನ್ನು ಸಿನಿಮಾಕ್ಕಾಗಿ ಖರ್ಚು ಮಾಡಲಾಗಿದೆ. ಸಿನಿಮಾದ ಒಟ್ಟು ಬಜೆಟ್ 236 ಕೋಟಿ. ಆದರೆ ಈ ನಡುವೆ ಶಂಕರ್ ಅವರು ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಿ ಆ ಸಿನಿಮಾದ ಬಗ್ಗೆ ಕೆಲಸ ಮಾಡಲು ಆರಂಭಿಸಿದ್ದಾರೆ ಎಂದು ಆರೋಪಿಸಿದೆ ಲೈಕಾ ಪ್ರೊಡಕ್ಷನ್ಸ್.

  'ಇಂಡಿಯನ್ 2' ಸಿನಿಮಾ ಮುಗಿಯುವವರೆಗೆ ಶಂಕರ್ ಅವರು ಬೇರೆ ಸಿನಿಮಾಕ್ಕೆ ಕೆಲಸ ಮಾಡಬಾರದು ಎಂದು ಆದೇಶ ನೀಡಬೇಕೆಂದು ಲೈಕಾ ಪ್ರೊಡಕ್ಷನ್ಸ್ ಮದ್ರಾಸ್ ಹೈಕೋರ್ಟ್ ಅನ್ನು ಕೇಳಿಕೊಂಡಿದೆ.

  ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಬಸ್ ಡ್ರೈವರ್‌ಗೆ ಅರ್ಪಿಸಿದ ರಜನೀಕಾಂತ್ | Filmibeat Kannada

  ಶಂಕರ್ ಅವರೇ ನಿರ್ದೇಶಿಸಿ ಕಮಲ್ ಹಾಸನ್ ನಟಿಸಿದ್ದ 1996 ರ ಸಿನಿಮಾ 'ಇಂಡಿಯನ್' ಸಿನಿಮಾದ ಮುಂದುವರೆದ ಭಾಗ 'ಇಂಡಿಯನ್ 2' ಆಗಿದೆ. ಸಿನಿಮಾದ ಚಿತ್ರೀಕರಣ ಅರ್ಧದಲ್ಲಿ ನಿಂತಿದೆ. ಕಮಲ್ ಹಾಸನ್ ಅವರು ಚುನಾವಣೆಗಳಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್ ಸಹ ತಮ್ಮ ಮುಂದಿನ ಸಿನಿಮಾ ರಾಮ್ ಚರಣ್ ತೇಜ ಜೊತೆ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ.

  English summary
  Lyca productions complaint against director S Shankar for delaying shooting of Indian 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X