twitter
    For Quick Alerts
    ALLOW NOTIFICATIONS  
    For Daily Alerts

    'ದರ್ಬಾರ್' ಸಿನಿಮಾ ವಿವಾದ: ನಿರ್ದೇಶಕ ಮುರುಗದಾಸ್ ಗೆ ಪೊಲೀಸ್ ರಕ್ಷಣೆ

    |

    ಪೊಲೀಸ್ ರಕ್ಷಣೆ ಕೋರಿ ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿದ್ದ ಖ್ಯಾತ ನಿರ್ದೇಶಕ ಮುರುಗದಾಸ್ ಗೆ ರಕ್ಷಣೆ ನೀಡುವಂತೆ ಕೋರ್ಟ್ ಆದೇಶಿಸಿದೆ. ದರ್ಬಾರ್ ಸಿನಿಮಾದ ಸೋಲಿನಿಂದ ಕಂಗೆಟ್ಟಿರುವ ವಿತರಕರು, ನಿರ್ದೇಶಕ ಮುರುಗದಾಸ್ ಬಳಿ ಪ್ರತೀದಿನ ಗಲಾಟೆ ಮಾಡುತ್ತಾರೆ, ಅಲ್ಲದೆ ದಿನ ಅವರನ್ನು ಹಿಂಬಾಲಿಸುತ್ತಿದ್ದಾರೆಬ. ಇದರಿಂದ ರಕ್ಷಣೆ ನೀಡಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದರು.

    ಮುರುಗದಾಸ್ ಮನವಿ ಸ್ವೀಕರಿಸಿದ ಕೋರ್ಟ್ ಇಂದು ಪೊಲೀಸ್ ರಕ್ಷಣೆ ನೀಡುವಂತೆ ಸೂಚಿಸಿದೆ. ಮುರುದಾಸ್ ಮೊದಲು ರಕ್ಷಣೆ ಕೋರಿ ಚೆನ್ನೈ ಪೊಲೀಸರ ಮೊರೆ ಹೋಗಿದ್ದರು. ಆದರೆ ಅವರ ಶೀಘ್ರ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯದ ಮೆಟ್ಟಿಲೇರಿದ್ದರು.

    ದರ್ಬಾರ್ ಸೋಲು, ರಜನಿ ಮನೆ ಬಾಗಿಲು ತಟ್ಟಲು ಮುಂದಾದ ವಿತರಕರುದರ್ಬಾರ್ ಸೋಲು, ರಜನಿ ಮನೆ ಬಾಗಿಲು ತಟ್ಟಲು ಮುಂದಾದ ವಿತರಕರು

    "ಪ್ರತಿದಿನ ಸುಮಾರು 30 ರಿಂದ 40 ವಿತರಕರು ನನ್ನನ್ನು ಹಿಂಬಾಲಿಸುತ್ತಿದ್ದಾರೆ. ದರ್ಬಾರ್ ಸಿನಿಮಾದ ನಷ್ಟವನ್ನು ಭರಿಸಿಕೊಡುವಂತೆ ಕೇಳುತ್ತಿದ್ದಾರೆ" ಎಂದು ಅರ್ಜಿಯಲ್ಲಿ ಬರೆದಿದ್ದಾರೆ.

    Madras HC Grants For Police Protection To Director Murugadoss

    ಇನ್ನು ಅರ್ಜಿಯಲ್ಲಿ "ಫೆಬ್ರವರಿ 3 ರಂದು ಸುಮಾರು 25 ಮಂದಿ ಅಪರಿಚಿತರು ನನ್ನ ಆಫೀಸಿಗೆ ಬಂದು ಗಲಾಟೆ ಮಾಡಿದರು. ಅಲ್ಲದೆ ಕೆಟ್ಟ ಮಾತುಗಳಿಂದ ಬೈದಿದ್ದಾರೆ. ನನ್ನ ಹೆಸರನ್ನು ಕೂಗುತ್ತ ಅನೇಕರು ಹೊರಗೆ ನಿಂತಿದ್ದರು. ನನ್ನ ಖ್ಯಾತಿಯನ್ನು ಹಾಳುಮಾಡುವ ಉದ್ದೇಶ ಅವರದ್ದು. ಅಲ್ಲದೆ ವಿವಿದ ಟಿವಿ ವಾಹಿನಿಗಳಲ್ಲಿ ನನ್ನ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ಹೇಳಿದ್ದಾರೆ.

    ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾದ ಸೋಲು ಈಗ ಇಡಿ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಕಾಡುತ್ತಿದೆ. ಸಿನಿಮಾ ರಿಲೀಸ್ ಗೂ ಮೊದಲೆ ದೊಡ್ಡ ಬ್ಯುಸಿನಸ್ ಮಾಡಿತ್ತಾದರು, ನಂತರ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಸೋತಿದೆ. ಸಿನಿಮಾ ಸೋಲಿನಿಂದ ಕಂಗೆಟ್ಟ ವಿತರಕರು ನಷ್ಟ ಭರಿಸುವಂತೆ ಸೂಪರ್ ಸ್ಟಾರ್ ರಜನಿಕಾಂತ್ ಮನೆ ಬಾಗಿಲು ತಟ್ಟುತ್ತಿದ್ದಾರೆ.

    ಲೈಕಾ ಪ್ರೊಡಕ್ಷನ್ ಈ ಚಿತ್ರ ನಿರ್ಮಿಸಿತ್ತು. ಎ ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದರು. ನಿವೇತಾ ಥಾಮಸ್, ನಯನತಾರಾ, ಯೋಗಿಬಾಬು, ಸುನೀಲ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

    English summary
    Madras HC grants for police protection to Director Murugadoss. Murugadoss approached the Madras High Court for police protection.
    Thursday, February 6, 2020, 17:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X