twitter
    For Quick Alerts
    ALLOW NOTIFICATIONS  
    For Daily Alerts

    'ಮಾಸ್ಟರ್' ನಿರ್ಮಾಪಕನ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಸೂಚನೆ

    |

    ತಮಿಳು ನಟ ವಿಜಯ್ ಅಭಿನಯದ 'ಮಾಸ್ಟರ್' ಚಿತ್ರಕ್ಕೆ ತೊಂದರೆ ಮೇಲೆ ತೊಂದರೆ ಎದುರಾಗುತ್ತಲೇ ಇದೆ. ಅನೇಕ ಅಡತಡೆಗಳನ್ನು ಭೇದಿಸಿ ಚಿತ್ರಮಂದಿರಕ್ಕೆ ಬಂದಿರುವ ಮಾಸ್ಟರ್ ಸಿನಿಮಾ ಅದ್ಧೂರ ಓಪನಿಂಗ್ ಪಡೆದುಕೊಂಡಿದೆ.

    ಚಿತ್ರಪ್ರೇಮಿಗಳು ಹಾಗೂ ಚಿತ್ರೋಧ್ಯಮದ ಅನೇಕ ಸೆಲೆಬ್ರಿಟಿಗಳು ಮೊದಲ ದಿನ, ಮೊದಲ ಶೋ ಸಿನಿಮಾ ನೋಡಿ ಸಂತಸ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ ಎಂಬ ಖುಷಿಯಲ್ಲಿರುವ ನಿರ್ಮಾಪಕರಿಗೆ ಈಗ ಅಘಾತ ಎದುರಾಗಿದೆ. ಮದ್ರಾಸ್ ಹೈ ಕೋರ್ಟ್ ನಿರ್ಮಾಪಕ ಜೇವಿಯರ್ ಬ್ರಿಟ್ಟೊ ವಿರುದ್ಧ ಎಫ್ ಐ ಆರ್ ದಾಖಲಿಸಲು ಸೂಚಿಸಿದೆ. ಮುಂದೆ ಓದಿ...

    ಕಾಪಿರೈಟ್ ಕಾನೂನು ಉಲ್ಲಂಘನೆ

    ಕಾಪಿರೈಟ್ ಕಾನೂನು ಉಲ್ಲಂಘನೆ

    'ಮಾಸ್ಟರ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಾಪಿರೈಟ್ ಕಾನೂನು ಉಲ್ಲಂಘನೆ ಮಾಡಿರುವ ಆರೋಪದಲ್ಲಿ ನಿರ್ಮಾಪಕ ಜೇವಿಯರ್ ಬ್ರಿಟ್ಟೊ ವಿರುದ್ಧ ಕೇಸ್ ದಾಖಲಿಸಲು ನ್ಯಾಯಾಲಯ ಸೂಚಿಸಿದೆ. ಚಿತ್ರದ ಬಿಡುಗಡೆಯ ಖುಷಿಯಲ್ಲಿರುವ ನಿರ್ಮಾಪಕರಿಗೆ ಈ ಸುದ್ದಿ ಆಘಾತ ತಂದಿದೆ.

    'ಮಾಸ್ಟರ್' ಟ್ವಿಟ್ಟರ್ ವಿಮರ್ಶೆ; ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೇಕ್ಷಕರು ಹೇಳಿದ್ದೇನು?'ಮಾಸ್ಟರ್' ಟ್ವಿಟ್ಟರ್ ವಿಮರ್ಶೆ; ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೇಕ್ಷಕರು ಹೇಳಿದ್ದೇನು?

    ಮಾಸ್ಟರ್ ಆಡಿಯೋ ರಿಲೀಸ್ ವೇಳೆ ಏನಾಗಿತ್ತು?

    ಮಾಸ್ಟರ್ ಆಡಿಯೋ ರಿಲೀಸ್ ವೇಳೆ ಏನಾಗಿತ್ತು?

    2020ರ ಮಾರ್ಚ್ ತಿಂಗಳಲ್ಲಿ ಮಾಸ್ಟರ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ವಿಜಯ್ ಅವರ ನಟಿಸಿದ್ದ ಬೇರೆ ಸಿನಿಮಾದ ಹಾಡುಗಳನ್ನು ಬಳಕೆ ಮಾಡಲಾಗಿತ್ತು. ಅನುಮತಿ ಇಲ್ಲದೇ ಬೇರೆ ಸಿನಿಮಾಗಳ ಹಾಡು ಬಳಕೆ ಮಾಡಲಾಗಿದೆ ಎಂದು ಆರೋಪಿ ಖಾಸಗಿ ಸಂಸ್ಥೆಯೊಂದು ಕೇಸ್ ದಾಖಲಿಸಲಾಗಿತ್ತು. ಈ ಕೇಸ್‌ ಅನ್ವಯ ಎಫ್ ಐ ಆರ್ ಮಾಸ್ಟರ್ ನಿರ್ಮಾಪಕರ ವಿರುದ್ಧ ಎಫ್ ಐ ಆರ್ ದಾಖಲಿಸಲು ಕೋರ್ಟ್ ಸೂಚಿಸಿದೆ.

    ಥಿಯೇಟರ್‌ನಲ್ಲಿ 100 ಪರ್ಸೆಂಟ್ ಅವಕಾಶ?

    ಥಿಯೇಟರ್‌ನಲ್ಲಿ 100 ಪರ್ಸೆಂಟ್ ಅವಕಾಶ?

    'ಮಾಸ್ಟರ್' ಬಿಡುಗಡೆ ಹಿನ್ನೆಲೆ ತಮಿಳುನಾಡು ಸರ್ಕಾರ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಆಸನ ಭರ್ತಿಗೆ ಅವಕಾಶ ಮಾಡಿಕೊಟ್ಟಿತ್ತು. ಆದ್ರೆ, ರಾಜ್ಯ ಸರ್ಕಾರದ ಆದೇಶಕ್ಕೆ ಕೇಂದ್ರ ಗೃಹ ಇಲಾಖೆ ಆಕ್ಷೇಪಣೆ ಎತ್ತಿತ್ತು. ಬಳಿಕ, 100 ಪರ್ಸೆಂಟ್ ಆದೇಶ ವಾಪಸ್ ಪಡೆದುಕೊಂಡು 50 ಪರ್ಸೆಂಟ್ ನಿಯಮ ಜಾರಿ ಮಾಡಿತ್ತು.

    'ಮಾಸ್ಟರ್' ಕ್ರೇಜ್: ಕೊರೊನಾ ಭಯವಿಲ್ಲದೆ ಮಲ್ಟಿಫ್ಲೆಕ್ಸ್ ಎದುರು ಕ್ಯೂ ನಿಂತ ಜನರು'ಮಾಸ್ಟರ್' ಕ್ರೇಜ್: ಕೊರೊನಾ ಭಯವಿಲ್ಲದೆ ಮಲ್ಟಿಫ್ಲೆಕ್ಸ್ ಎದುರು ಕ್ಯೂ ನಿಂತ ಜನರು

    ಲೋಕೇಶ್ ಕನಕರಾಜ್ ಸಿನಿಮಾ

    ಲೋಕೇಶ್ ಕನಕರಾಜ್ ಸಿನಿಮಾ

    ಲೋಕೇಶ್ ಕನಕರಾಜ್ ನಿರ್ದೇಶನದ ಮಾಸ್ಟರ್ ಚಿತ್ರದಲ್ಲಿ ವಿಜಯ್ ಎದುರು ವಿಜಯ್ ಸೇತುಪತಿ ಖಳನಾಯಕನಾಗಿ ನಟಿಸಿದ್ದಾರೆ. ಮಾಳವಿಕಾ ಮೋಹನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆಂಡ್ರಿಯಾ, ಗೌರಿ ಕಿಶನ್, ಅರ್ಜುನ್ ದಾಸ್, ಶಾಂತನು ಭಾಗ್ಯರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

    Recommended Video

    ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada

    English summary
    Madras High Court has ordered the FIR filed against Master producer Xavier Britto for for violating copyright laws.
    Wednesday, January 13, 2021, 13:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X