ತ್ರಿಶಾ ವಿರುದ್ಧ ಮೊಕದ್ದಮೆ ಹೂಡಲು ಹೊರಟಿದ್ದ ಮನ್ಸೂರ್ ಅಲಿಖಾನ್, ದಂಡ ವಿಧಿಸಿದ ಮದ್ರಾಸ್ ಹೈಕೋರ್ಟ್!
ಇತ್ತೀಚೆಗೆ ತಮ್ಮ ಸಿನಿಮಾಗಳಿಂದ ಸುದ್ದಿಯಾದ ನಟ ಮನ್ಸೂರ್ ಅಲಿ ಖಾನ್, ಇತ್ತೀಚೆಗೆ ನಟಿ ತ್ರಿಶಾ, ರೋಜಾ ಖುಷ್ಬೂ ವಿರುದ್ಧ ನಾಲಿಗೆ ಹರಿಬಿಟ್ಟು ಸಕತ್ ಸುದ್ದಿಯಲ್ಲಿದ್ದಾರೆ. ಕ್ಷಮೆ ಕೇಳಿವ ನಾಟಕವಾಡಿ ಬಳಿಕ ಅದೆಲ್ಲಾ ಸುಳ್ಳು ಎಂದು ಕಾನೂನು ಸಮರಕ್ಕೆ ಮುಂದಾಗಿದ್ದರು. ಈಗ ಮದ್ರಾಸ್ ಹೈಕೋರ್ಟ್ ಅವರ ಬಾಲ ಕತ್ತರಿಸಿದೆ.
ಕಲಾವಿದರಾ ತ್ರಿಶಾ ಕೃಷ್ಣನ್, ಚಿರಂಜೀವಿ ಮತ್ತು ಖುಷ್ಬೂ ಸುಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಮಿಳು ನಟ ಮನ್ಸೂರ್ ಅಲಿಖಾನ್ ಹಲವು ದಿನಗಳ ಹಿಂದೆ ಹೇಳಿದ್ದರು. ಇದಕ್ಕೆ ಮದ್ರಾಸ್ ಹೈಕೋರ್ಟ್ ಡಿಸೆಂಬರ್ 22 ರಂದು ಮೊಕದ್ದಮೆಯನ್ನು ಮುಂದುವರಿಸಲು ಅನುಮತಿ ನೀಡಲು ನಿರಾಕರಿಸಿದೆ.

ಮನ್ಸೂರ್ ಅಲಿ ಖಾನ್ ಗೆ 1 ಲಕ್ಷ ರೂಪಾಯಿ ದಂಡ
ಮನ್ಸೂರ್ ಅಲಿ ಖಾನ್ ಈ ನಟರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಹೊರಡಿರುವುದು ಬರಿ 'ಪಬ್ಲಿಸಿಟಿ ಸ್ಟಂಟ್' ಎಂದು ಕಿಡಿಕಾರಿದೆ. ಜೊತೆಗೆ ನ್ಯಾಯಾಲಯವು ನಟನಿಗೆ 1 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಈ ಹಿಂದೆಯೇ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾಗ ಕೋರ್ಟ್ ಛೀಮಾರಿ ಹಾಕಿತ್ತು. ಅದನ್ನು ಮೀರಿ ಮತ್ತೆ ನ್ಯಾಯಾಲಯದ ಮುಂದೆ ಬಮದು ದಂಡಕ್ಕೆ ಗುರಿಯಾಗಿದ್ದಾರೆ.
ದಳಪತಿ ವಿಜಯ್ ಅಭಿನಯದ ಕನಕರಾಜ್ ನಿರ್ದೇಶನದ 'ಲಿಯೋ' ಸಿನಿಮಾದಲ್ಲಿ ನಟಿ ತ್ರಿಶಾ ನಟಿಸಿದ್ದಾರೆ. ಅದರಲ್ಲಿ ನಟಿಯ ಜೊತೆ 'ಬೆಡ್‌ರೂಮ್ ಸೀನ್ ಇಲ್ಲ' ಎಂದು ಹೇಳಿಕೆ ನೀಡಿ ತಮಿಳಿ ಖಳನಟ ಮನ್ಸೂರ್ ಅಲಿ ಖಾನ್ ಕಳೆದೆರಡು ತಿಂಗಳಿನಿಂದ ಭಾರಿ ವಿವಾದಕ್ಕೆ ಗುರಿಯಾಗಿದ್ದಾರೆ.
ಪ್ರಕರಣದ ಬಗ್ಗೆ ವರದಿ ಮಾಡಿರುವ 'ಬಾರ್ ಮತ್ತು ಬೆಂಚ್' ಪ್ರಕಾರ, ಮದ್ರಾಸ್ ಹೈಕೋರ್ಟ್ ಮನ್ಸೂರ್ ಅಲಿ ಖಾನ್ ಅವರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಚೆನ್ನೈನ ಅಡ್ಯಾರ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ಗೆ ಹಣವನ್ನು ಕಟ್ಟುವಂತೆ ನಟನಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಜೊತೆಗೆ ಮನ್ಸೂರ್ ಅಲಿ ಖಾನ್ ಹೇಳಿಕೆಗೆ ಯಾವುದೇ ನಟ, ನಟಿಯರು ಪ್ರತಿಕ್ರಿಯಿಸಿದ್ದನ್ನು ಉಲ್ಲೇಖಿಸಿರುವ ನ್ಯಾಯಾಲಯ, ಯಾವುದೇ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಹೀಗೆ ಪ್ರತಿಕ್ರಿಯೆ ನೀಡುತ್ತಾನೆ ಎಂದು ಹೇಳಿದೆ.

ಇದೇ ತಿಂಗಳು ಛೀಮಾರಿ ಹಾಕಿಸಿಕೊಂಡಿದ್ದ ಮನ್ಸೂರ್ ಅಲಿ ಖಾನ್
ಡಿಸೆಂಬರ್ 12 ರಂದು, ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್ ಅವರು ತ್ರಿಶಾ ವಿರುದ್ಧ ಅಸಬ್ಯ ಕಾಮೆಂಟ್ ಮಾಡಿದ್ದಕ್ಕಾಗಿ ನಟ ಮನ್ಸೂರ್ ಅಲಿ ಖಾನ್ ಅವರನ್ನು ಛೀಮಾರಿ ಹಾಕಿದರು. ಮನ್ಸೂರ್ ಅಲಿ ಖಾನ್ ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂದು ತಿಳಿದಿರಬೇಕು, ವಿಶೇಷವಾಗಿ ನಟರನ್ನು ಜನರು ತಮ್ಮ ಮಾಡೆಲ್‌ಗಳು ಎಂದು ನೋಡುವ ವೇಳೆ ಇಂತಹ ಎಚ್ಚರಿಕೆ ಅಗತ್ಯ ಎಂದು ಹೇಳಿತ್ತು.
ಪ್ರಕರಣವೇನು...?
ಲಿಯೋ ಸಿನಿಮಾ ಬಿಡುಗಡೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ನಟ ಮನ್ಸೂರ್ ಅಲಿ ಖಾನ್, ನಟಿ ತ್ರಿಶಾ ಜೊತೆಗೆ 'ಬೆಡ್ ರೂಮ್ ದೃಶ್ಯ' ಮಾಡುವ ಅವಕಾಶವನ್ನು ಕಳೆದುಕೊಂಡೆ ಎಂದು ಬೇಸರ ಹೊರಹಾಕಿದ್ದರು. ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ನಟ, ನಟಿಯರು ತ್ರಿಶಾ ಬೆಂಬಲಕ್ಕೆ ಬಂದಿತ್ತು.
ಬಳಿಕ ಮನ್ಸೂರ್ ಅಲಿ ಖಾನ್ ತಮಿಳಿನಲ್ಲಿ ಹೇಳಿಕೆ ನೀಡಿ ತ್ರಿಶಾ ಬಳಿ ಕ್ಷಮೆಯಾಚಿಸಿದರು. ಆದರೆ, ಅದು ಕ್ಷಮೆಯಾಚನೆಯಲ್ಲ ಎಂದು ಹೇಳಿ ತ್ರಿಶಾ, ನಟಿಗೆ ಬೆಂಬಲ ನೀಡಿದ ನಟ ಚಿರಂಜೀವಿ ಮತ್ತು ಖುಷ್ಬೂ ಸುಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು. ಅದಕ್ಕೆ ನ್ಯಾಯಾಲಯ ಅನುಮತಿ ನಿರಾಕರಿಸಿ ದಂಡ ವಿಧಿಸಿದೆ.


Click it and Unblock the Notifications











