ನಟಿ ಮೀರಾ ಮಿಥುನ್ ಜಾಮೀನು ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈ ಕೋರ್ಟ್

ದಲಿತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಜೈಲು ಸೇರಿರುವ ನಟಿ ಹಾಗು ಬಿಗ್ ಬಾಸ್ ಖ್ಯಾತಿಯ ಮೀರಾ ಮಿಥುನ್‌ಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿದೆ. ಜಾಮೀನಿಗಾಗಿ ಹೈ ಕೋರ್ಟ್‌ನಲ್ಲಿ ಮೀರಾ ಮಿಥುನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಸೋಮವಾರ ಅರ್ಜಿ ವಿಚಾರಣೆ ಮಾಡಿದ ಮದ್ರಾಸ್ ಹೈ ಕೋರ್ಟ್ ನಟಿಯ ಮನವಿಯನ್ನು ತಿರಸ್ಕರಿಸಿ ಜಾಮೀನು ವಜಾಗೊಳಿಸಿದೆ.

ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಿದ್ದ ಮೀರಾ ಮಿಥುನ್ ಇತ್ತೀಚಿಗಷ್ಟೆ ದಲಿತರಿಂದ ತಮಿಳು ಚಿತ್ರರಂಗ ಹಾಳಾಗಿದೆ. ಸಿನಿಮಾ ಇಂಡಸ್ಟ್ರಿಯಿಂದ ಎಸ್‌ಸಿ/ಎಸ್‌ಟಿ ಸಮುದಾಯದವರನ್ನು ಹೊರಹಾಕಬೇಕು ಎಂದು ಹೇಳಿ ಕೆಂಗಣ್ಣಿಗೆ ಗುರಿಯಾಗಿದ್ದರು. ಮೀರಾ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಸಂಘಟನೆಯೊಂದು ಮೀರಾ ವಿರುದ್ಧ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಪೊಲೀಸರು ಬಂಧಿಸಿ ಜೈಲಿಗೆ ಕಳಿಹಿಸಿದ್ದಾರೆ. ಮುಂದೆ ಓದಿ

ಎಲ್ಲ ತಪ್ಪುಗಳಿಗೆ ದಲಿತ ಸಮುದಾಯ ಕಾರಣ

ಎಲ್ಲ ತಪ್ಪುಗಳಿಗೆ ದಲಿತ ಸಮುದಾಯ ಕಾರಣ

ಟಾಕ್ ಶೋ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೀರಾ ಮಿಥುನ್ "ಸಿನಿಮಾರಂಗದಲ್ಲಿ ಎಲ್ಲಾ ತಪ್ಪುಗಳು ಮತ್ತು ದುಷ್ಪರಿಣಾಮಗಳಿಗೆ ಪರಿಶಿಷ್ಟ ಜಾತಿಯವರೇ ಕಾರಣ, ಅವರನ್ನು ಚಿತ್ರರಂಗದಿಂದ ಹೊರಹಾಕಬೇಕು. ಅವರು ಹೆಚ್ಚಾಗಿ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅಪರಾಧಗಳಲ್ಲಿ ಭಾಗಿಯಾಗುವುದರಿಂದ ಸಮಸ್ಯೆಗಳನ್ನು ಎದುರಿಸುಬೇಕಾಗಿದೆ. ಯಾವುದೇ ಕಾರಣವಿಲ್ಲದೆ ಯಾರು ಅನಗತ್ಯವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ" ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದರು. "ಚಿತ್ರರಂಗದಲ್ಲಿ ದಲಿತ ನಿರ್ದೇಶಕರು ಮತ್ತು ಇತರೆ ಜನರು ಚೀಪ್ ಕೆಲಸಗಳನ್ನು ಮಾಡುತ್ತಿದ್ದಾರೆ. ಅಂಥವರನ್ನು ಸಿನಿಮಾರಂಗದಿಂದ ಹೊರಹಾಕುವ ಸಮಯವಿದು" ಎಂದು ಸಂದರ್ಶನದಲ್ಲಿ ಹೇಳಿದ್ದರು.

ಅರೆಸ್ಟ್ ವೇಳೆ ಹೈ ಡ್ರಾಮಾ

ಅರೆಸ್ಟ್ ವೇಳೆ ಹೈ ಡ್ರಾಮಾ

ಮೀರಾ ಮಿಥುನ್ ಈ ಹೇಳಿಕೆ ನೀಡಿದ ನಂತರ ವ್ಯಾಪಕ ಖಂಡನೆ ವ್ಯಕ್ತವಾಯಿತು. ವಿಡುತಲೈ ಚಿರುತೈಗಳ್ ಕಚ್ಚಿ ಸಂಘಟನೆ ನಾಯಕ ವನ್ನಿ ಅರಸು ನಟಿ ವಿರುದ್ಧ ದೂರು ದಾಖಲಿಸಿದರು. ಈ ದೂರಿನ ಹಿನ್ನೆಲೆ ಚೆನ್ನೈನ ಪೊಲೀಸರು ಭಾರತೀಯ ದಂಡ ಸಂಹಿತೆ, ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಏಳು ನಿಬಂಧನೆಗಳ ಅಡಿಯಲ್ಲಿ ಎಫ್‌ ಐ ಆರ್ ದಾಖಲಿಸಿದರು. ದೂರಿನ ಬಳಿಕ ತಲೆಮರೆಸಿಕೊಂಡ ಮೀರಾ ಮಿಥುನ್ ಕೇರಳದಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮೀರಾ ತಂಗಿದ್ದ ಹೋಟೆಲ್‌ಗೆ ದಾಳಿ ನಡೆಸಿ ವಶಕ್ಕೆ ಪಡೆಯಲಾಯಿತು. ಬಂಧಿಸಲು ಬಂದ ಪೊಲೀಸರ ವಿರುದ್ಧ ಮೀರಾ ಆರೋಪ ಮಾಡಿದರು. ಫೇಸ್‌ಬುಕ್ ವಿಡಿಯೋ ಮಾಡಿ, ''ಪೊಲೀಸರು ನನ್ನ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ, ತೊಂದರೆ ಕೊಡ್ತಿದ್ದಾರೆ, ನನಗೆ ರಕ್ಷಣೆ ಕೊಡಿ'' ಎಂದು ಹೈಡ್ರಾಮ ಮಾಡಿದರು.

ಯೂಟ್ಯೂಬ್ ಚಾನೆಲ್ ಬಂದ್

ಯೂಟ್ಯೂಬ್ ಚಾನೆಲ್ ಬಂದ್

ಮೀರಾ ಮಿಥುನ್ ಯೂಟ್ಯೂಬ್ ಚಾನೆಲ್‌ನ್ನು ಬಂದ್ ಮಾಡುವಂತೆ ಕೇಂದ್ರ ಅಪರಾಧ ವಿಭಾಗ ಪೊಲೀಸರು ಸೂಚನೆ ನೀಡಿದೆ. ಹಿಂಸೆಗೆ ಪ್ರೇರೇಪಣೆ ನೀಡುವ ಆರೋಪದಡಿ ಪೊಲೀಸರು ಮೀರಾ ಮಿಥುನ್ ಯೂಟ್ಯೂಬ್‌ನ್ನು ಬಂದ್ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಬೇಡವಾದ ವಿಷಯಗಳ ಬಗ್ಗೆ ಮಾತಾಡಿ ಮೀರಾ ಮಿಥುನ್ ವಿವಾದಕ್ಕೆ ಸಿಲುಕುತ್ತಿದ್ದರು. ಇದೀಗ ಬಂಧನದ ಬೆನ್ನಲ್ಲೇ ಯೂಟ್ಯೂಬ್ ಚಾನೆಲ್ ಕೂಡ ಸಸ್ಪೆಂಡ್ ಆಗಿದೆ.

ಆತ್ಮಹತ್ಯೆಗೆ ಯತ್ನಿಸಿದ್ದ ನಟಿ

ಆತ್ಮಹತ್ಯೆಗೆ ಯತ್ನಿಸಿದ್ದ ನಟಿ

ಮೀರಾ ಮಿಥುನ್ ಮಾತ್ರವಲ್ಲ ಮೀರಾ ಬಾಯ್‌ಫ್ರೆಂಡ್ ಸ್ಯಾಮ್ ಅಭಿಷೇಕ್ ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಲಿತರ ಬಗ್ಗೆ ನಟಿ ನೀಡಿದ ಹೇಳಿಕೆಗೆ ಬಾಯ್‌ಫ್ರೆಂಡ್ ಕುಮ್ಮಕ್ಕಿದೆ ಎಂಬ ಅನುಮಾನದ ಹಿನ್ನೆಲೆ ಅರೆಸ್ಟ್ ಮಾಡಲಾಗಿದೆ. ಅದಕ್ಕೂ ಮುಂಚೆ ತನ್ನ ಬಾಯ್‌ಫ್ರೆಂಡ್ ಜೊತೆ ಮೀರಾ ಹಸಿಬಿಸಿಯಾಗಿ ಕಾಣಿಸಿಕೊಂಡು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದರು. ಯೂಟ್ಯೂಬ್ ಹಾಗು ಫೇಸ್‌ಬುಕ್ ವಿಡಿಯೋದಲ್ಲಿ ಬಾಯ್‌ಫ್ರೆಂಡ್ ಜೊತೆ ರೊಮ್ಯಾನ್ಸ್ ಮಾಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ನಂತರ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ನಹತ್ಯೆಗು ಯತ್ನಿಸಿದ್ದರು.

More from Filmibeat

English summary
Madras High Court rejected the bail plea of actress and Bigg boss contestant Meera Mithun.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X