For Quick Alerts
  ALLOW NOTIFICATIONS  
  For Daily Alerts

  ವಿವಾದದ ಚಕ್ರವ್ಯೂಹದಲ್ಲಿ ವಿಶಾಲ್ ನಟನೆಯ 'ಚಕ್ರ', ಬಿಡುಗಡೆ ಯಾವಾಗ?

  |

  ಕಳೆದ ವರ್ಷದಿಂದಲೂ ವಿಶಾಲ್ ಗೂ ವಿವಾದಕ್ಕೂ ಆಪ್ತತೆ ಹೆಚ್ಚಾದಂತಿದೆ. ಮೊದಲಿಗೆ ತಮಿಳು ಕಲಾವಿದರ ಸಂಘದ ಕುರಿತು ಗಲಾಟೆಯಾಯಿತು. ಆ ನಂತರ ವಿಶಾಲ್ ನಿರ್ಮಾಣ ಸಂಸ್ಥೆ ಮೇಲೆ ತೆರಿಗೆ ಬಾಕಿ ದೂರು ದಾಖಲಾಯಿತು. ವಿಶಾಲ್ ಮಾಜಿ ನೌಕರರೊಬ್ಬರು ವಿಶಾಲ್ ವಿರುದ್ಧ ಆರೋಪ ಮಾಡಿದರು. ಆ ನಂತರ ಆಕ್ಷನ್ ಸಿನಿಮಾದ ವಿವಾದ ಎದುರಾಯಿತು. ಈಗ ಕೃತಿಚೌರ್ಯದ ಆರೋಪ ಮುಂದೆ ಬಂದು ಕೂತಿದೆ.

  ನಟ ವಿಶಾಲ್ ನಟನೆಯ 'ಚಕ್ರ' ಸಿನಿಮಾ ತಯಾರಾಗಿದ್ದು ಹಲವು ತಿಂಗಳಿಗಳಿಂದಲೂ ಬಿಡುಗಡೆಗೆ ಕಾಯುತ್ತಿದೆ. ಆದರೆ ನ್ಯಾಯಾಲಯವು ಚಕ್ರ ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ.

  ವಿಶಾಲ್ ನಿರ್ಮಾಣ ಸಂಸ್ಥೆಯಿಂದಲೇ ಚಕ್ರ ಸಿನಿಮಾ ತಯಾರಾಗಿದ್ದು, ಸಿನಿಮಾದಲ್ಲಿ ಕನ್ನಡತಿ ಶ್ರದ್ಧಾ ಶ್ರೀನಾಥ್ ನಾಯಕಿ. ಸಿನಿಮಾವನ್ನು ಫೆಬ್ರವರಿ 19 ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈಗಾಗಲೇ ಹೇಳಿದೆ, ಆದರೆ ಈ ನಡುವೆ ಫೆಬ್ರವರಿ 18 ರಂದು ನ್ಯಾಯಾಲವು ಸಿನಿಮಾ ಬಿಡುಗಡೆಗೆ ತಡೆ ನೀಡಿದೆ.

  'ಚಕ್ರ' ಸಿನಿಮಾದ ನಿರ್ದೇಶಕ ಆನಂದ್, ಮೊದಲಿಗೆ ಇದೇ ಕತೆಯನ್ನು ನಿರ್ಮಾಪಕ ರವಿಚಂದ್ರನ್‌ಗೆ ಹೇಳಿದ್ದರಂತೆ. ಅವರು ಆಗಲೇ ನಿರ್ದೇಶಕನಿಗೆ ಅಡ್ವಾನ್ಸ್ ನೀಡಿ ಒಪ್ಪಂದ ಮಾಡಿಕೊಂಡಿದ್ದರಂತೆ. ಆದರೆ ಈಗ ಅದೇ ಕತೆಯನ್ನು ಬೇರೆ ನಿರ್ಮಾಣ ಸಂಸ್ಥೆಯ ಜೊತೆ ಸಿನಿಮಾ ಮಾಡಿರುವ ಕಾರಣ ಚಕ್ರ ಸಿನಿಮಾದ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿದ್ದಾರೆ ರವಿಚಂದ್ರನ್.

  ಆದರೆ ಫಿಲ್ಮೀಬೀಟ್ ಜೊತೆಗೆ ಮಾತನಾಡಿರುವ 'ಚಕ್ರ' ಸಿನಿಮಾದ ಪ್ರಚಾರ ಸಮಿತಿಯವರು, ಸಿನಿಮಾವು ನಾಳೆ (ಫೆಬ್ರವರಿ 19) ಕ್ಕೆ ಬಿಡುಗಡೆ ಆಗುವುದು ಪಕ್ಕಾ ಎಂದು ಹೇಳಿದ್ದಾರೆ.

  ರವಿಚಂದ್ರನ್ ಈ ಹಿಂದೆ ವಿಶಾಲ್-ತಮನ್ನಾ ಅವರ 'ಆಕ್ಷನ್' ಸಿನಿಮಾಕ್ಕೆ ಬಂಡವಾಳ ಹೂಡಿದ್ದರು. ಆ ಸಿನಿಮಾ ಇನ್ನಿಲ್ಲದಂತೆ ನೆಲಕಚ್ಚಿತು. ಒಪ್ಪಂದಂತೆ ನಷ್ಟದಲ್ಲಿ ಪಾಲು ತೆಗೆದುಕೊಳ್ಳಬೇಕು ಎಂದು ಹೇಳಿ ರವಿಚಂದ್ರನ್ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು, ವಿಶಾಲ್, ರವಿಚಂದ್ರನ್ ಗೆ ಎಂಟು ಕೋಟಿ ನೀಡುವಂತೆ ಸೂಚಿಸಿತ್ತು.

  ನಿಖಿಲ್ ಸಿನಿಮಾಗೆ ಎಂಟ್ರಿ ಕೊಟ್ಟ ಯಶ್ ಚಿತ್ರದ ವಿಲನ್ | Filmibeat Kannada

  ಇದೀಗ ಬಿಡುಗಡೆಗೆ ತಯಾರಾಗಿರುವ 'ಚಕ್ರ' ಸಿನಿಮಾದಲ್ಲಿ ಕನ್ನಡತಿ ಶ್ರದ್ಧಾ ಶ್ರೀನಾಥ್ ಹಾಗೂ ರೆಜಿನಾ ಕಸಾಂಡ್ರ ನಾಯಕಿ. ಇದೊಂದು ಥ್ರಿಲ್ಲರ್ ಕತೆಯಾಗಿದೆ.

  English summary
  Madras high court ordered to stay release of Vishal's Chakra movie. Movie scheduled to release on February 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X