Mark Antony: ವಿಶಾಲ್ ಅಭಿನಯದ 'ಮಾರ್ಕ್ ಆಂಟನಿ' ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆ!

ತಮಿಳು ನಟ ವಿಶಾಲ್ ಮತ್ತು ಎಸ್ ಜೆ ಸೂರ್ಯ ನಟನೆಯ ಬಹುನಿರೀಕ್ಷಿತ ಚಿತ್ರ 'ಮಾರ್ಕ್ ಆಂಟನಿ' ನಿಗದಿತ ಬಿಡುಗಡೆ ದಿನಾಂಕದಂದು ಥಿಯೇಟರ್‌ಗಳಿಗೆ ಬರುವುದಿಲ್ಲ. ಸೆಪ್ಟೆಂಬರ್ 15 ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾ ವಿರುದ್ಧ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ.

ಅಧಿಕ್ ರವಿಚಂದ್ರನ್ ನಿರ್ದೇಶನದ ನಟ ವಿಶಾಲ್ ಜೊತೆಗೆ ಎಸ್‌ಜೆ ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಸೆಪ್ಟೆಂಬರ್ 15 ರಂದು ತೆರೆಗೆ ಬರಲು ಸಜ್ಜಾಗುತ್ತಿತ್ತು. ಆದರೆ, ಸಿನಿಮಾ ವಿರುದ್ಧ ನ್ಯಾಯಾಲಯದಲ್ಲಿ ಪ್ರೊಡಕ್ಷನ್ಸ್‌ ಸಂಸ್ಥೆ ದಾವೆ ಹೂಡಿದ್ದು, ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

tamil-actor-vishals-mark-antony

ಲೈಕಾ ಪ್ರೊಡಕ್ಷನ್ಸ್‌ಗೆ ನೀಡಬೇಕಿದ್ದ 21.29 ಕೋಟಿ ರೂಪಾಯಿಗಳಲ್ಲಿ 15 ಕೋಟಿ ರೂಪಾಯಿಗಳನ್ನು ಪಾವತಿಸಲು ನಟ ವಿಶಾಲ್ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಚಿತ್ರ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಕೋರ್ಟ್ ಆದೇಶದಿಂದ ನಿರ್ಮಾಪಕರಿಗೆ ಭಾರೀ ಹಿನ್ನಡೆಯಾಗಿದೆ.

ನಿರ್ದೇಶಕ ಅಧಿಕ್ ರವಿಚಂದ್ರನ್ ನಿರ್ದೇಶನದ 'ಮಾರ್ಕ್ ಆಂಟನಿ' ಚಿತ್ರದಲ್ಲಿ ನಟ ವಿಶಾಲ್ ಮತ್ತು ಎಸ್ ಜೆ ಸೂರ್ಯ ಜೊತೆಗೆ ರಿತು ವರ್ಮಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ತೆಲುಗು ನಟ ಸುನೀಲ್ ಮತ್ತು ನಿಜಾಲ್ಗಲ್ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು.

ಪ್ರಕರಣವೇನು?

ಮಾರ್ಕ್ ಆಂಟನಿ ಸಿನಿಮಾದ ಪ್ರಮುಖ ನಟ ವಿಶಾಲ್ ವಿರುದ್ಧ ಲೈಕಾ ಪ್ರೊಡಕ್ಷನ್ಸ್ ಮೊಕದ್ದಮೆ ಹೂಡಿತ್ತು. ನಟ ಪ್ರೊಡಕ್ಷನ್ ಹೌಸ್‌ಗೆ ನೀಡಬೇಕಿದ್ದ 21.29 ಕೋಟಿ ರೂಗಳಲ್ಲಿ 15 ಕೋಟಿ ರೂ ಪಾವತಿಸಲು ವಿಫಲರಾಗಿದ್ದರು. ಅಲ್ಲದೆ, ಸೆಪ್ಟೆಂಬರ್ 12 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ವಿಶಾಲ್‌ಗೆ ಸೂಚಿಸಲಾಗಿದೆ.

ನಟ ವಿಶಾಲ್ ಮತ್ತು ಲೈಕಾ ಪ್ರೊಡಕ್ಷನ್ಸ್ ನಡುವೆ ಕಳೆದ ಕೆಲವು ಸಮಯದಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಇಬ್ಬರ ನಡುವಿನ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಆದರೆ, ಕೊನೆ ಗಳಿಗೆಯಲ್ಲಿ ಚಿತ್ರಕ್ಕೆ ತಡೆಯಾಜ್ಞೆ ನೀಡಲಾಗಿದೆ. ನ್ಯಾಯಾಲಯದ ಆದೇಶದ ಬಗ್ಗೆ ವಿಶಾಲ್ ಅಥವಾ ಚಿತ್ರದ ನಿರ್ಮಾಪಕರು ಅಧಿಕೃತ ಹೇಳಿಕೆ ನೀಡಿಲ್ಲ.

More from Filmibeat

English summary
Madras High Court stays on release of Vishal's Mark Antony.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X