For Quick Alerts
  ALLOW NOTIFICATIONS  
  For Daily Alerts

  'ಸೂರರೈ ಪೊಟ್ರು' ಹಿಂದಿ ರಿಮೇಕ್‌ಗೆ ಮದ್ರಾಸ್ ಹೈ ಕೋರ್ಟ್ ಅನುಮತಿ

  |

  ತಮಿಳು ನಟ ಸೂರ್ಯ ನಟನೆಯ 'ಸೂರರೈ ಪೊಟ್ರು' ಸಿನಿಮಾ ಹಿಂದಿಯಲ್ಲಿ ರಿಮೇಕ್ ಮಾಡಲು ತೀರ್ಮಾನಿಸಿದ್ದರು. ಈ ಸಂಬಂಧ ಸೂರ್ಯ ಹಗೂ ಜ್ಯೋತಿಕಾ ಅವರ 2ಡಿ ಎಂಟರ್‌ಟೈನ್‌ಮೆಂಟ್ ರಿಮೇಕ್ ಬಗ್ಗೆ ಪ್ರಕಟಿಸಿದ್ದರು. ಆದರೆ, ಸೂರರೈ ಪೊಟ್ರು ಸಿನಿಮಾದಲ್ಲಿ ಪಾಲುದಾರಿಕೆ ಹೊಂದಿದ್ದ ಶಿಖ್ಯಾ ಎಂಟರ್‌ಟೈನ್‌ಮೆಂಟ್ ನಿರ್ಮಾಪಕಿ ಗುನೀತ್ ಮೊಂಗಾ ಹಿಂದಿ ರಿಮೇಕ್‌ಗೆ ಅನುಮತಿ ಕೊಡಬಾರದೆಂದು ಮದ್ರಾಸ್‌ ಹೈ ಕೋರ್ಟ್‌ನಲ್ಲಿ ದೂರು ನೀಡಿತ್ತು.

  ಸಿಖ್ಯಾ ಎಂಟರ್‌ಟೈನ್‌ಮೆಂಟ್ ದೂರಿನ ಹಿನ್ನೆಲೆ ಮದ್ರಾಸ್ ಕೋರ್ಟ್ ಸೂರರೈ ಪೊಟ್ರು ಹಿಂದಿ ರಿಮೇಕ್‌ಗೆ ತಡೆಯಾಜ್ಞೆ ನೀಡಿತ್ತು. ಇದೀಗ, ಹಿಂದಿ ರಿಮೇಕ್‌ಗೆ ನೀಡಿದ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿದೆ.

  'ಸೂರರೈ ಪೊಟ್ರು' ಹಿಂದಿಗೆ ರಿಮೇಕ್: ಸ್ಟಾರ್ ನಟನ ಹೆಸರು ಫೈನಲ್?'ಸೂರರೈ ಪೊಟ್ರು' ಹಿಂದಿಗೆ ರಿಮೇಕ್: ಸ್ಟಾರ್ ನಟನ ಹೆಸರು ಫೈನಲ್?

  ಈ ಕೇಸ್ ಸಂಬಂಧ ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಕ್ಯಾಪ್ಟನ್ ಗೋಪಿನಾಥ್ ಅವರ "ಸಿಂಪ್ಲಿ ಫ್ಲೈ" ಪುಸ್ತಕದ ಹಕ್ಕನ್ನು 2D ಎಂಟರ್‌ಟೈನ್‌ಮೆಂಟ್ ಖರೀದಿ ಮಾಡಿತ್ತು. ಅದಕ್ಕೆ ಸೂಕ್ತ ಗೌರವವಾಗಿ ಸಿಖ್ಯಾ ಎಂಟರ್‌ಟೈನ್‌ಮೆಂಟ್‌ಗೆ ದೊಡ್ಡ ಮೊತ್ತವನ್ನು ಪಾವತಿಸಲಾಗಿದೆ. ಮೂಲ ಬೆಲೆಗಿಂತ ಹೆಚ್ಚು ಹಣ ನೀಡಲಾಗಿದೆ ಎಂದು ತಿಳಿಸಿತ್ತು.

  ಆ ನಂತರ ಹಿಂದಿ ರಿಮೇಕ್‌ಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿದೆ. ಈ ಮೂಲಕ ಹಿಂದಿ ರಿಮೇಕ್‌ಗೆ ಎದುರಾಗಿದ್ದ ಕಾನೂನು ತಡೆ ಬಗೆಹರಿದಿದೆ.

  ಏನಿದು ವಿವಾದ?

  ಸೂರ್ಯ ಒಡೆತನದ 2ಡಿ ಪ್ರೊಡಕ್ಷನ್ ಹೌಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಒಡೆತನದ ಸಿಖ್ಯಾ ಎಂಟರ್ಟೈನ್‌ಮೆಂಟ್ ಸಂಸ್ಥೆಯು ಒಟ್ಟಾಗಿ 'ಸೂರರೈ ಪೊಟ್ರು' ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಆದರೆ ನಮ್ಮ ಒಪ್ಪಿಗೆ ಪಡೆಯದೆ ಸೂರ್ಯ ಒಬ್ಬರೇ ನಿರ್ಣಯ ತೆಗೆದುಕೊಂಡು 'ಸೂರರೈ ಪೊಟ್ರು' ಸಿನಿಮಾದ ಹಕ್ಕನ್ನು ಹಿಂದಿಗೆ ಮಾರಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೊರೆ ಹೋಗಿದ್ದರು. ಹಾಗಾಗಿ ಸೂರ್ಯ ಮಾರಿರುವ ರೀಮೇಕ್ ಹಕ್ಕು ಮಾರಾಟವನ್ನು ಅನುರ್ಜಿತಗೊಳಿಸಬೇಕು ಎಂದು ಸಿಖ್ಯಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್ 'ಸೂರರೈ ಪೊಟ್ರು' ಸಿನಿಮಾದ ಹಿಂದಿ ರೀಮೇಕ್‌ಗೆ ತಡೆ ನೀಡಿತ್ತು.

  ಕನ್ನಡಿಗನ ಜೀವನ ಆಧರಿಸಿದ ಹಿಂದಿ ಸಿನಿಮಾಕ್ಕೆ ನ್ಯಾಯಾಲಯ ತಡೆಕನ್ನಡಿಗನ ಜೀವನ ಆಧರಿಸಿದ ಹಿಂದಿ ಸಿನಿಮಾಕ್ಕೆ ನ್ಯಾಯಾಲಯ ತಡೆ

  ಮೂಲ ಚಿತ್ರ ನಿರ್ದೇಶಿಸಿದ್ದ ಸುಧಾ ಕೊಂಗರಾ ಅವರೇ ಹಿಂದಿಯಲ್ಲೂ ಡೈರೆಕ್ಟ್ ಮಾಡಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲಿ ಕಲಾವಿದರು ಆಯ್ಕೆ ಅಧಿಕೃತವಾಗಿ ಘೋಷಿಸಲಾಗುತ್ತದೆ.

  Madras High Court vacates injunction Of Soorarai Pottru Hindi remake

  ತಮಿಳಿನಲ್ಲಿ ಸೂರ್ಯ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಯಾರು ಮಾಡಬಹುದು ಎನ್ನುವುದು ಅಧಿಕೃತವಾಗಿಲ್ಲ. ಆದರೆ, ಸೂರರೈ ಪೊಟ್ರು ಅಂತಹ ಸ್ಕ್ರಿಪ್ಟ್‌ಗೆ ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಸೂಕ್ತ ಆಯ್ಕೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಈ ಹಿನ್ನೆಲೆ ಅಕ್ಷಯ್ ಕುಮಾರ್ ಹೆಸರು ಈ ಪ್ರಾಜೆಕ್ಟ್‌ನಲ್ಲಿ ತಳುಕು ಹಾಕಿಕೊಂಡಿದೆ.

  ಅಂದ್ಹಾಗೆ, ಸೂರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಸೂರರೈ ಪೊಟ್ರು ಚಿತ್ರದಲ್ಲಿ ಪರೇಶ್ ರಾವಲ್, ಅಪರ್ಣ, ಮೋಹನ್ ಬಾಬು, ಊರ್ವಶಿ ಸೇರಿದಂತೆ ಹಲವು ಪ್ರಮುಖ ಪಾತ್ರದಲ್ಲಿ ನಟಿಸಿದರು. ಸುಮಾರು 45 ಕೋಟಿಗೂ ಹೆಚ್ಚು ಮೊತ್ತಕ್ಕೆ ಅಮೇಜಾನ್ ಪ್ರೈಮ್ ಈ ಚಿತ್ರ ಖರೀದಿಸಿದ್ದರು ಎಂದು ವರದಿಯಾಗಿತ್ತು.

  English summary
  Work on Soorarai Pottru Hindi remake to resume soon as Madras High Court vacates injunction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X