'ಆ' ವ್ಯಕ್ತಿಯ ಬಗ್ಗೆ ಮೌನ ಮುರಿದ ಕೀರ್ತಿ ಸುರೇಶ್.. "ನಾನೇ ಹೇಳ್ತೀನಿ ಇರಿ" ಎಂದ ಮಹಾನಟಿ

ಬಹುಭಾಷಾ ನಟಿ ಕೀರ್ತಿ ಸುರೇಶ್ ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಗ್ಲಾಮರ್ ಡೋಸ್ ಹೆಚ್ಚಿಸಿರುವ ಚೆಲುವೆ ಹಾಟ್ ಹಾಟ್ ಫೋಟೊಶೂಟ್‌ಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಇನ್ನು 'ಮಹಾನಟಿ' ಮದುವೆ ಬಗ್ಗೆ ಕೂಡ ಪದೇ ಪದೇ ಗುಸುಗುಸು ಕೇಳಿಬರುತ್ತದೆ. ಇತ್ತೀಚೆಗೆ ಯುವಕನೊಬ್ಬನ ಜೊತೆ ಕೀರ್ತಿ ಸುರೇಶ್ ಕ್ಲಿಕ್ಕಿಸಿಕೊಂಡಿದ್ದ ಫೋಟೊ ವೈರಲ್ ಆಗಿತ್ತು.

ಹಳದಿ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಯುವಕನೊಬ್ಬನ ಜೊತೆ ಕೀರ್ತಿ ಕಾಣಿಸಿಕೊಂಡಿದ್ದರು. ಆತನಿಗೆ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಇದರ ಬೆನ್ನಲ್ಲೇ ಆತ ಯಾರು? ಏನ್ ಕತೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿತ್ತು. ಆತ ದುಬೈ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ. ಕೀರ್ತಿ ಫ್ರೆಂಡ್. ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಕೂಡ ಆಗುತ್ತಾರೆ ಎನ್ನುವ ಚರ್ಚೆ ನಡೀತು. ಇದೀಗ ಆ ವ್ಯಕ್ತಿಯ ಬಗ್ಗೆ ಸ್ವತ: 'ಮಹಾನಟಿ' ಪ್ರತಿಕ್ರಿಯಿಸಿದ್ದಾರೆ.

Mahanati actress Keerthy Suresh Reacts to The Mystery Man In Her Life

ಕೀರ್ತಿ ಸುರೇಶ್ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇತ್ತೀಚೆಗೆ ತಮಿಳು ಸೂಪರ್ ಸ್ಟಾರ್ ನಟನ ಜೊತೆಗೆ ಆಕೆಯ ಹೆಸರನ್ನು ಸೇರಿಸಿ ಕೆಲವರು ಸುದ್ದಿ ತೇಲಿಬಿಟ್ಟಿದ್ದರು. ಈಗಾಗಲೇ ಮದುವೆ ಆಗಿರುವ ನಟನೊಟ್ಟಿಗೆ ಕೇಳಿಬಂದು ಈ ಸುದ್ದಿ ಭಾರೀ ಸದ್ದು ಮಾಡಿತ್ತು. ಕೂಡಲೇ ಆಕೆಯ ತಾಯಿ ಈ ಬಗ್ಗೆ ಪ್ರತಿಕ್ರಿಯಿಸಿದರು. ಅದೆಲ್ಲಾ ಸುಳ್ಳು ಎಂದಿದ್ದರು. ಇದೀಗ ಇಂತದ್ದೇ ಮತ್ತೊಂದು ಸುದ್ದಿ ವೈರಲ್ ಆಗಿದ್ದು ನೋಡಿ ಕೀರ್ತಿ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನೇ ಹೇಳುವವರೆಗೂ ಸುಮ್ಮನಿರಿ ಎಂದಿದ್ದಾರೆ.

ಒಂದು ಬಾರಿಯೂ ಸರಿಯಾಗಿ ಗೆಸ್ ಮಾಡ್ಲಿಲ್ಲ

ಇತ್ತೀಚೆಗೆ ಯುವಕನೊಬ್ಬರ ಜೊತೆ ಕೀರ್ತಿ ಇರುವ ಫೋಟೊ ವೈರಲ್ ಆಗಿದ್ದು ಗೊತ್ತೇಯಿದೆ. ಈ ಫೋಟೊ ಕುರಿತು ಬರುತ್ತಿರುವ ವದಂತಿಗಳ ಬಗ್ಗೆ ನಟಿ ಟ್ವೀಟ್ ಮಾಡಿ "ಒಂದು ಬಾರಿ ಕೂಡ ಸರಿಯಾಗಿ ಗೆಸ್ ಮಾಡಲಾಗಲಿಲ್ಲ. ಆತ ನನ್ನ ಸ್ನೇಹಿತ. ಯಾವ ಹೆಸರು ಸಿಕ್ಕಿದರೆ ಅದನ್ನು ಹೇಳುತ್ತಿದ್ದೀರಾ. ನನಗೆ ಆ ಮಿಸ್ಟರಿ ಮ್ಯಾನ್ ಸಿಕ್ಕಿದಾಗ ಆ ಸಮಯ ಬಂದಾಗ ನಾನೇ ರಿವೀಲ್ ಮಾಡುತ್ತೇನೆ. ಅಲ್ಲಿಯವರೆಗೂ ಸ್ವಲ್ಪ ರಿಲ್ಯಾಕ್ಸ್ ಆಗಿರಿ" ಎಂದು ಟ್ವೀಟ್ ಮಾಡಿದ್ದಾರೆ.

ಕೀರ್ತಿ ಸುರೇಶ್ ಇನ್ನು ಸಿಂಗಲ್!

ಸದ್ಯ ಈ ಟ್ವೀಟ್ ಮೂಲಕ ನಟಿ ಕೀರ್ತಿ ಸುರೇಶ್ ತಾವು ಇನ್ನು ಸಿಂಗಲ್ ಎನ್ನುವುದನ್ನು ಹೇಳಿದ್ದಾರೆ. ಆ ಫೋಟೊದಲ್ಲಿ ಇರೋದು ತಮ್ಮ ಸ್ನೇಹಿತ ಅನ್ನೋದನ್ನು ಕೂಡ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ ಫೋಟೊದಲ್ಲಿ ಕೀರ್ತಿ ಜೊತೆ ಕಾಣಿಸಿಕೊಂಡಿರುವ ವ್ಯಕ್ತಿಯ ಹೆಸರು ಫರ್ಹಾನ್ ಬಿನ್ ಲೈತ್ ಎನ್ನಲಾಗ್ತಿದೆ. ಇಬ್ಬರು ಬಹಳ ವರ್ಷಗಳಿಂದ ಸ್ನೇಹಿತರು ಅನ್ನೋದು ಗೊತ್ತಾಗ್ತಿದೆ. ಈ ಹಿಂದೆ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆಗೂ ಈಕೆಯ ಹೆಸರು ತಳುಕು ಹಾಕಿಕೊಂಡಿತ್ತು.

Mahanati actress Keerthy Suresh Reacts to The Mystery Man In Her Life

ಹಾಟ್ ಪೋಟೊಶೂಟ್‌ನಲ್ಲಿ ಕೀರ್ತಿ

ಕೀರ್ತಿ ಸುರೇಶ್ ಇತ್ತೀಚೆಗೆ ಹಾಟ್ ಫೋಟೊಶೂಟ್‌ಗಳಲ್ಲಿ ದರ್ಶನ ಕೊಡುತ್ತಿದ್ದಾರೆ. ಇತ್ತೀಚೆಗೆ ಸೀರೆ ಉಟ್ಟು ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಸ್ಲೀವ್‌ಲೆಸ್ ಬ್ಲೌಸ್, ಸಿಲ್ವರ್ ಕಲರ್ ಸೀರೆಯಲ್ಲಿ ಆಕೆಯನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೊಲ್ಕತ್ತಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕೀರ್ತಿ ಈ ರೀತಿ ಕಾಣಿಸಿಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಬಿಡುಗಡೆಯಾದ 'ದಸರಾ' ಚಿತ್ರದಲ್ಲಿ ನಾಯಕಿ ವೆನ್ನೆಲ ಪಾತ್ರದಲ್ಲಿ ಆಕೆ ಮೋಡಿ ಮಾಡಿದ್ದರು.

ನಾಲ್ಕೈದು ಸಿನಿಮಾಗಳಲ್ಲಿ ನಟನೆ

ಸದ್ಯ ಕೀರ್ತಿ ಸುರೇಶ್ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ. ತೆಲುಗಿನ 'ಭೋಳಾ ಶಂಕರ್' ಚಿತ್ರದಲ್ಲಿ ಚಿರಂಜೀವಿ ಸಹೋದರಿಯಾಗಿ ಕಾಣಿಸಿಕೊಂಡಿದ್ದಾರೆ. ತಮಿಳಿನ 'ಮಾಮನನ್', 'ಸಿರೇನ್', 'ರಘು ತಾತ' ಹಾಗೂ 'ರಿವಾಲ್ವರ್ ರೀಟಾ' ಚಿತ್ರಗಳಲ್ಲಿ ನಟಸುತ್ತಿದ್ದಾರೆ. ಕೀರ್ತಿ ನಟನೆಯ 'ರಘು ತಾತ' ಮಹಿಳಾ ಪ್ರಧಾನ ಸಿನಿಮಾ ಆಗಿದ್ದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿದೆ. 5 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

More from Filmibeat

English summary
Keerthy Suresh Reacts to The Mystery Man In Her Life. She Says I will reveal the actual mystery man whenever I have to Take a chill pill until then. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X