ಗೋವಾದಲ್ಲಿ ಡಿ.11ಕ್ಕೆ ನಟಿ ಕೀರ್ತಿ ಸುರೇಶ್ ಮದುವೆ; ಯಾರೆಲ್ಲಾ ಭಾಗಿ ಆಗ್ತಾರೆ?

ಸಿನಿಮಾ ನಟ, ನಟಿಯರ ಮದುವೆ ವಿಚಾರ ಅಭಿಮಾನಿಗಳಿಗೆ ಖುಷಿ ಕೊಡುತ್ತದೆ. ಅದರಲ್ಲೂ ಸ್ಟಾರ್ ನಟಿಯರ ಲವ್, ಬ್ರೇಕಪ್, ಮ್ಯಾರೇಜ್ ವಿಚಾರಗಳು ಪದೇ ಪದೆ ಸದ್ದು ಮಾಡುತ್ತಿರುತ್ತದೆ. ಈ ಹಿಂದೆ ಕೂಡ ನಟಿ ಕೀರ್ತಿ ಸುರೇಶ್ ಮದುವೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಇದೀಗ ಮತ್ತೊಮ್ಮೆ ಮಹಾನಟಿ ಮದುವೆ ಬಗ್ಗೆ ಊಹಾಪೋಹ ಶುರುವಾಗಿದೆ.

ಮಲಯಾಳಂ ನಟಿ ಕೀರ್ತಿ ಸುರೇಶ್ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಈಗಾಗಲೇ ಬಾಲಿವುಡ್ ಪ್ರವೇಶಿಸಿದ್ದಾರೆ. ಶೀಘ್ರದಲ್ಲೇ ಆಕೆಯ ಚೊಚ್ಚಲ ಹಿಂದಿ ಸಿನಿಮಾ ತೆರೆಗೆ ಬರಲಿದೆ. ಇದೆಲ್ಲದರ ನಡುವೆ ಆಕೆಯ ಮದುವೆ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಅದು ಕೂಡ ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನಡೀತಿದೆ ಎಂದು ಗುಲ್ಲಾಗಿದೆ.

MahaNati fame tamil actresss keerthy suresh marriage fixed

ಕೀರ್ತಿ ತಂದೆ ಚಿತ್ರ ನಿರ್ಮಾಪಕ ಸುರೇಶ್ ಕುಮಾರ್ ಕೇರಳ ಮೂಲದವರು. ತಮಿಳು ಚಿತ್ರಗಳಲ್ಲಿ ನಟಿಸಿದ್ದ ತಾಯಿ ಮೇನಕಾ ತವರು ಮನೆ ಚೆನ್ನೈ. ಅಲ್ಲೇ ಕೀರ್ತಿ ಸುರೇಶ್ ಕೂಡ ಬೆಳೆದವರು. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದರು. 'ಗೀತಾಂಜಲಿ' ಚಿತ್ರದಲ್ಲಿ ಮೊದಲ ಬಾರಿಗೆ ಮೋಹನ್ ಲಾಲ್ ಜೊತೆ ಕೀರ್ತಿ ನಟಿಸಿದ್ದರು. ಬಳಿಕ ತೆಲುಗು, ತಮಿಳು ಸಿನಿಮಾಗಳತ್ತ ಮುಖ ಮಾಡಿದರು.

ಆರಂಭದಲ್ಲಿ ಕೀರ್ತಿಗೆ ದೊಡ್ಡ ಬ್ರೇಕ್ ಸಿಕ್ಕಿರಲಿಲ್ಲ. ಆದರೆ ತೆಲುಗಿನ 'ಮಹಾನಟಿ' ಚಿತ್ರ ಆಕೆಗೆ ಭಾರೀ ಹೆಸರು ತಂದುಕೊಟ್ಟಿತ್ತು. ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು. ಬಳಿಕ ಸಖತ್ ಬ್ಯುಸಿಯಾಗಿಬಿಟ್ಟರು. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕೂಡ ನಟಿಸಿದರು. ಈ ಹಿಂದೆ ಅನಿರುದ್ಧ್ ರವಿಚಂದರ್ ಜೊತೆ ಕೀರ್ತಿ ಲವ್ವಿ ಡವ್ವಿ ನಡೆಸುತ್ತಿದ್ದಾರೆ ಎಂದು ಗುಲ್ಲಾಗಿತ್ತು. ಬಳಿಕ ಅದು ಸುಳ್ಳು ಎನ್ನುವ ಸ್ಪಷ್ಟನೆ ಸಿಕ್ಕಿತ್ತು.

MahaNati fame tamil actresss keerthy suresh marriage fixed

ಕೀರ್ತಿ ತನ್ನ ಸ್ನೇಹಿತನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಹಂಚಿಕೊಂಡಿದ್ದ ಫೋಟೊ ಕೂಡ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆತ ಕೀರ್ತಿ ಪ್ರಿಯಕರ. ಇಬ್ಬರೂ ಮದುವೆ ಆಗುತ್ತಾರೆ ಎನ್ನುವ ಅರ್ಥದಲ್ಲಿ ಸುದ್ದಿ ಹರಿದಾಡಿತ್ತು. ಅದಕ್ಕೂ ಬಳಿಕ ಸ್ಪಷ್ಟನೆ ಸಿಕ್ಕಿತ್ತು. ಇದೆಲ್ಲರ ನಡುವೆ ಈಗ ಪೋಷಕರು ಒಪ್ಪಿದ ಹುಡುಗನ ಜೊತೆ ಕೀರ್ತಿ ಮದುವೆ ಆಗುತ್ತಾರೆ ಎನ್ನುವ ಅಂತೆ ಕಂತೆ ಸುದ್ದಿ ಹರಿದಾಡುತ್ತಿದೆ.

ಬಹುಕಾಲದ ಗೆಳೆಯನ ಜೊತೆ ಡಿಸೆಂಬರ್ 11ಕ್ಕೆ ಗೋವಾದಲ್ಲಿ ಕೀರ್ತಿ ಮದುವೆ ನಡೆಯುತ್ತದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ರಜನಿಕಾಂತ್, ದಳಪತಿ ವಿಜಯ್, ಚಿರಂಜೀವಿ ಸೇರಿದಂತೆ ಚಿತ್ರರಂಗದ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿ ಆಗುವ ನಿರೀಕ್ಷೆ ಇದೆ. ಗೋವಾದ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ಕಲ್ಯಾಣೋತ್ಸವ ನಡೆಯುವ ಸಾಧ್ಯತೆಯಿದೆ. ಸದ್ಯ ಆಕೆ ನಟಿಸಿರುವ 'ಬೇಬಿಜಾನ್' ಹಿಂದಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಕೀರ್ತಿ ಸುರೇಶ್ ತಮ್ಮ ಸಿನಿಕರಿಯರ್‌ನ ಉತ್ತುಂಗಕ್ಕೆ ಏರಿದ್ದಾರೆ. ಇಂತಹ ಸಮಯದಲ್ಲಿ ಮದುವೆ ಆಗುವ ನಿರ್ಧಾರ ಮಾಡಲ್ಲ ಎನ್ನುವ ವಾದವೂ ಇದೆ. 'ರಿವಾಲ್ವರ್ ರೀಟಾ, 'ಕನ್ನಿವೇಡು' ಎನ್ನುವ ಮತ್ತೆರಡು ಸಿನಿಮಾಗಳಲ್ಲಿ ಅಭಿಮಾನಿಗಳ ಪ್ರೀತಿಯ ಮಹಾನಟಿ ನಟಿಸುತ್ತಿದ್ದಾರೆ. ಕೊನೆಯದಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ರಘುತಾತ' ಚಿತ್ರದಲ್ಲಿ ಆಕೆ ಬಣ್ಣ ಹಚ್ಚಿದ್ದರು. ಚಿತ್ರ ಕನ್ನಡಕ್ಕೂ ಡಬ್ ಆಗಿ ಓಟಿಟಿಗೆ ಬಂದಿತ್ತು.

'ಮಹಾನಟಿ' ಬಳಿಕ 'ಮಿಸ್ ಇಂಡಿಯಾ', 'ಸರ್ಕಾರ್', 'ಅಣ್ಣಾತ್ತೆ', 'ದಸರಾ', 'ಪಂಗ್ವಿನ್' ರೀತಿಯ ಸಿನಿಮಾಗಳಲ್ಲಿ ಕೀರ್ತಿ ನಟಿಸಿದ್ದರು. 'ಕಲ್ಕಿ 2898AD' ಚಿತ್ರದ ಬುಜ್ಜಿ ರೋಬೊ ಪಾತ್ರಕ್ಕೆ ಕೀರ್ತಿ ಸುರೇಶ್ ವಾಯ್ಸ್ ಕೊಟ್ಟಿದ್ದರು. ಅದು ಚೆನ್ನಾಗಿ ವರ್ಕ್ ಆಗಿತ್ತು.

More from Filmibeat

English summary
Actress Keerthy Suresh All Set To Get Hitched?
Read more about: keerthy suresh tamil kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X