ಚೀನಾದಲ್ಲಿ ಬಾಹುಬಲಿಯನ್ನು ಬಗ್ಗು ಬಡಿದ ಮಹಾರಾಜ, 30 ದಿನದಲ್ಲಿ ಗಳಿಸಿದ್ದೆಷ್ಟು ?

ಕೆಲ ಸಿನಿಮಾಗಳೇ ಹಾಗೇ. ಭಾರೀ ನಿರೀಕ್ಷೆ ಮೂಡಿಸಿ ಆ ನಂತರ ನಿರಾಸೆ ಮಾಡುತ್ತವೆ. ಆದರೆ ಇನ್ನೂ ಕೆಲವು ಯಾವ ನಿರೀಕ್ಷೆಯನ್ನೂ ಮೂಡಿಸದೇ ದಿಗ್ಗನೆ ಬಂದು ಆ ನಂತರ ಸದ್ದು ಮಾಡುತ್ತವೆ. ಕಾಡುತ್ತವೆ. ನಿಥಿಲನ್ ಸ್ವಾಮಿನಾಥನ್ ನಿರ್ದೇಶನದ ವಿಜಯ್ ಸೇತುಪತಿ ಅಭಿನಯದ 'ಮಹಾರಾಜ' ಇದಕ್ಕೆ ಅತ್ಯುತ್ತಮ ಉದಾಹರಣೆ.

ಹೌದು, ಯಾರೆಂದರೆ ಯಾರು ಊಹಿಸದ ಗೆಲುವನ್ನೂ ಕಂಡು ಭಾರತದಲ್ಲಿಯೇ ಹತ್ ಹತ್ರ ನೂರು ಕೋಟಿಯನ್ನು ಕೊಳ್ಳೆ ಹೊಡೆದಿದ್ದ 'ಮಹಾರಾಜ' ಆ ನಂತರ ಓಟಿಟಿ ವೇದಿಕೆಯಲ್ಲಿ ಧೂಳೆಬ್ಬಿಸಿತ್ತು. ಭಾಷೆಯ ಭೇದ ಭಾವ ಇಲ್ಲದೇ ಎಲ್ಲರನ್ನು ಸೆಳೆದಿತ್ತು. ವಾರಾನುವಾರಗಳ ಕಾಲ ಟ್ರೆಂಡಿಂಗ್‌ನಲ್ಲಿತ್ತು. ಇಂತಹ ಮಹಾರಾಜ ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾಗಿತ್ತು.ಸಂಚಲನ ಸೃಷ್ಟಿಸಿತ್ತು. ಚೀನಾದ 40,000 ಸ್ಕ್ರೀನ್‌ಗಳಲ್ಲಿ ತೆರೆಗೆ ಬಂದಿತ್ತು. ಕೇವಲ ಪ್ರೀಮಿಯರ್‌ನಲ್ಲಿಯೇ ಮಹಾರಾಜ 5.4 ಕೋಟಿಯನ್ನು ಗಳಿಸಿತ್ತು. ಈಗ ಒಂದು ತಿಂಗಳು ಸತತ ಪ್ರದರ್ಶನವನ್ನು ಚೀನಾದಲ್ಲಿ ಕಂಡ ಮಹಾರಾಜ 92 ಕೋಟಿ ಹಣವನ್ನು ಗಳಿಸಿದೆ. ಚೀನಾದ ಬಹುತೇಕ ಚಿತ್ರಮಂದಿರದಲ್ಲಿ ತನ್ನ ಪ್ರದರ್ಶನವನ್ನು ಮುಗಿಸಿದೆ.

maharaja-china-box-office-with-92-5-crore-vijay-sethupathi-s-maharaja-beats-baahubali-2-in-china

ಮೊದಲ ವಾರ ಚೀನಾದಲ್ಲಿ 40.75 ಕೋಟಿಯನ್ನು ಗಳಿಸಿದ್ದ ಮಹಾರಾಜ ಎರಡನೇ ವಾರ 32.75 ಕೋಟಿಯನ್ನು ದೋಚಿತ್ತು. ಮೂರನೇ ವಾರದಲ್ಲಿ 12.25 ಕೋಟಿಯನ್ನು ಗಳಿಸಿದ್ದ ಚಿತ್ರ ಈಗ ನಾಲ್ಕನೇ ವಾರದಲ್ಲಿ 5.15 ಕೋಟಿ ಹಣವನ್ನು ಗಳಿಸಿದೆ. ಈ ಮೂಲಕ 92 ಕೋಟಿಯನ್ನು ಕೇವಲ ಚೀನಾ ಮಾರುಕಟ್ಟೆಯಿಂದ ಕೊಳ್ಳೆ ಹೊಡೆದಿದೆ ಮಹಾರಾಜ. ಹೀಗೆ ಕೇವಲ 20 ಕೋಟಿಯಲ್ಲಿ ನಿರ್ಮಾಣವಾಗಿದ್ದ ಮಹಾರಾಜ ಈಗ ವಿಶ್ವದೆಲ್ಲೆಡೆಯಿಂದ ಹತ್ ಹತ್ರ 200 ಕೋಟಿ ಹಣವನ್ನು ಗಳಿಸಿದೆ.

ಅಂದ್ಹಾಗೇ ಹತ್ತು ಹಲವು ದಾಖಲೆಗಳನ್ನು ಮುಡಿಗೇರಿಸಿಕೊಂಡ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರ ಚೀನಾದಲ್ಲಿ 89 ಕೋಟಿಯನ್ನು ಗಳಿಸಿತ್ತು. ಈ ಮೂಲಕ ಚೀನಾದ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಭಾರತದ ಹತ್ತನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ದಾಖಲೆಯನ್ನು ಈಗ ಮಹಾರಾಜ ಮುರಿದಿದೆ. 92 ಕೋಟಿಯನ್ನು ಗಳಿಸುವ ಮೂಲಕ ಹತ್ತನೇ ಸ್ಥಾನವನ್ನು ಅಲಂಕರಿಸಿದೆ.

ಇನ್ನುಳಿದಂತೆ ವಿಜಯ್ ಸೇತುಪತಿ ಮತ್ತು ಅನುರಾಗ್ ಕಶ್ಯಪ್ ಹೊರತು ಪಡಿಸಿ ಚಿತ್ರದಲ್ಲಿ ಮಮತಾ ಮೋಹನ್‌ದಾಸ್, ಅಭಿರಾಮಿ, ಭಾರತೀರಾಜಾ, ಸಿಂಗಂಪುಲಿ, ವಿನೋದ್ ಸಾಗರ್, ಸರವಣ ಸುಬ್ಬಯ್ಯ, ಮುನಿಶ್‌ಕಾಂತ್, ಅರುಳ್‌ದಾಸ್‌, ವೆಟ್ರಿವೇಲ್ ರಾಜ, ಸಚನಾ ನಮಿದಾಸ್, ಮುಂತಾದವರು ಇದ್ದಾರೆ. ಇನ್ನೂ ವಿಜಯ್ ಸೇತುಪತಿ ಅವರ ಪತ್ನಿ ಪಾತ್ರವನ್ನು ದಿವ್ಯಾ ಭಾರತಿ ನಿರ್ವಹಿಸಿದ್ಧಾರೆ. ಇನ್ನೂ ಕನ್ನಡದ ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿರುವುದು ಇನ್ನೊಂದು ವಿಶೇಷ. ನಿತಿಲನ್ ಸ್ವಾಮಿನಾಥನ್ ಈ ಚಿತ್ರವನ್ನು ನಿರ್ದೇಶಿಸಿದ್ಧಾರೆ. ಜಗದೀಶ್ ಪಳನಿಸ್ವಾಮಿ, ಸುಧನ್ ಸುಂದರಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಒಟ್ನಲ್ಲಿ ತಮ್ಮ ಐವತ್ತನೇ ಚಿತ್ರ ಎನ್ನುವ ಕಾರಣಕ್ಕೆ ಮತ್ತು ನಿರ್ಮಾಪಕರ ಕಷ್ಟವನ್ನು ಅರ್ಥ ಮಾಡಿಕೊಂಡು ಒಂದು ಪೈಸೆಯನ್ನು ತೆಗೆದುಕೊಳ್ಳದೇ ಚಿತ್ರದಲ್ಲಿ ವಿಜಯ್ ಸೇತುಪತಿ ಅವರಿಗೆ ಮಹಾರಾಜ ಸದ್ಯ ಮರೆಯಲಾಗದ ಅನುಭವವನ್ನು ನೀಡಿದೆ.ಇಲ್ಲಿಯವರೆಗಿನ ಚಿತ್ರ ಬದುಕಿನಲ್ಲಿ ಮಹಾರಾಜ ವಿಜಯ್ ಸೇತುಪತಿ ಅವರ ಮುಕುಟದ ಕಿರೀಟವಾಗಿದೆ. ಚೀನಾದಲ್ಲಿ ದಾಖಲೆಯನ್ನು ಚಿತ್ರ ಬರೆದಿದೆ.

More from Filmibeat

Read more about: vijay sethupathi box office tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X