twitter
    For Quick Alerts
    ALLOW NOTIFICATIONS  
    For Daily Alerts

    'ಅದೆಂತಾ ಕಲಾವಿದನಪ್ಪಾ....ದೇವರೇ': ಮಾಳವಿಕಾ ಹೀಗೆಂದು ಹೇಳಿದ್ದು ಯಾರಿಗೆ?

    |

    ಸ್ಟಾರ್ ನಟರನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆಯುವ ಟ್ರೆಂಡ್ ಇದು. ಇಂಟ್ರೊಡಕ್ಷನ್ ಸಾಂಗ್, ಮೂರ್ನಾಲ್ಕು ಭರ್ಜರಿ ಫೈಟ್, ಪಂಚಿಂಗ್ ಡೈಲಾಗ್‌ಗಳು, ಹೀರೋಯಿಸಂ ದೃಶ್ಯಗಳು ಇವೇ ಈಗಿನ ಸ್ಟಾರ್ ನಟರ ಮೂಲ ಮಂತ್ರವಾಗಿದೆ ಎಂಬ ಆರೋಪ ಎಲ್ಲ ಚಿತ್ರರಂಗದ ಮೇಲೂ ಇದೆ.

    ಈ ಟೀಕೆಗಳ ನಡುವೆಯೂ ಇಲ್ಲೊಬ್ಬ ನಟ ಅದ್ಭುತವಾದ ಅಭಿನಯದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಎಂತಹ ಕಥೆಗೂ ಜೀವ ತುಂಬಬಲ್ಲ ಕಲಾವಿದ ಎನ್ನಬಹುದು. ಭಾಷೆಯ ಗಡಿ ಮೀರಿ ಈ ನಟನನ್ನು ಇಷ್ಟ ಪಡುವ ಚಿತ್ರಪ್ರೇಮಿಗಳಿದ್ದಾರೆ. ಇದೀಗ, ಕನ್ನಡದ ಖ್ಯಾತ ಕಲಾವಿದೆ ಮಾಳವಿಕ ಅವಿನಾಶ್ ಈ ನಟನ ಬಗ್ಗೆ ಮಾತನಾಡಿದ್ದಾರೆ. ಹೊಸ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಮಾಳವಿಕಾ ''ಚಿತ್ರ ನೋಡಿದ ಹದಿನೈದು ನಿಮಿಷದಲ್ಲಿ ರಾಷ್ಟ್ರ ಪ್ರಶಸ್ತಿ ಕೊಡಬೇಕು ಎನ್ನಿಸುವ ನಟ'' ಎಂದಿದ್ದಾರೆ. ಮುಂದೆ ಓದಿ...

    ಧನುಶ್ ಬಗ್ಗೆ ಮಾಳವಿಕಾ ಮೆಚ್ಚುಗೆ

    ಧನುಶ್ ಬಗ್ಗೆ ಮಾಳವಿಕಾ ಮೆಚ್ಚುಗೆ

    ಏಪ್ರಿಲ್ 9 ರಂದು ಧನುಶ್ ನಟನೆಯ 'ಕರ್ಣನ್' ಸಿನಿಮಾ ಚಿತ್ರಮಂದಿರದಲ್ಲಿ ತೆರೆಕಂಡಿತ್ತು. ನಿರೀಕ್ಷೆಯಂತೆ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ, ಅಮೇಜಾನ್ ಪ್ರೈಮ್‌ನಲ್ಲಿ ಕರ್ಣನ್ ಸಿನಿಮಾ ಪ್ರೀಮಿಯರ್ ಕಂಡಿದೆ. ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡಿದ್ದವರು ಒಟಿಟಿಯಲ್ಲಿ ವೀಕ್ಷಣೆ ಮಾಡಿದ್ದು, ಧನುಶ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಹೀಗೆ, ಧನುಶ್ ನಟನೆ ಮೆಚ್ಚಿಕೊಂಡವರಲ್ಲಿ ನಟಿ ಮಾಳವಿಕಾ ಅವಿನಾಶ್ ಸಹ ಒಬ್ಬರು.

    ಕೊರೊನಾ ಭೀತಿಯಲ್ಲೂ ಮೊದಲ ದಿನ ದಾಖಲೆ ಗಳಿಕೆ ಕಂಡ ಧನುಶ್ ಸಿನಿಮಾಕೊರೊನಾ ಭೀತಿಯಲ್ಲೂ ಮೊದಲ ದಿನ ದಾಖಲೆ ಗಳಿಕೆ ಕಂಡ ಧನುಶ್ ಸಿನಿಮಾ

    ಅದೆಂತಾ ಕಲಾವಿದನಪ್ಪಾ....ದೇವರೇ

    ಅದೆಂತಾ ಕಲಾವಿದನಪ್ಪಾ....ದೇವರೇ

    ಕರ್ಣನ್ ಸಿನಿಮಾ ನೋಡಿದ ಬಳಿಕ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಮಾಳವಿಕಾ ಅವಿನಾಶ್ ''ಅದೆಂತಾ ಕಲಾವಿದನಪ್ಪಾ....ದೇವರೇ, ಸಿನಿಮಾ ನೋಡಿದ 15 ನಿಮಿಷಕ್ಕೆ ರಾಷ್ಟ್ರ ಪ್ರಶಸ್ತಿ ಕೊಟ್ಬಿಡಬೇಕು ಅನ್ಸುತ್ತೆ'' ಎಂದು ಪೋಸ್ಟ್ ಹಾಕಿದ್ದಾರೆ.

    ಸಾರ್ವಕಾಲಿಕ ಅತ್ಯುತ್ತಮ ನಟ

    ಸಾರ್ವಕಾಲಿಕ ಅತ್ಯುತ್ತಮ ನಟ

    ''ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಅತ್ಯುತ್ತಮ ನಟರಲ್ಲಿ ಧನುಶ್ ಸಹ ಒಬ್ಬರು'' ಎಂದು ಮಾಳವಿಕಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಳವಿಕಾ ಅವರ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ಅವರ ಅಭಿಪ್ರಾಯಕ್ಕೆ ಬೆಂಬಲ ಸೂಚಿಸಿದ್ದಾರೆ. ನಿಮ್ಮ ಮಾತಿಗೆ ಧನುಶ್ ಅರ್ಹರು ಎಂದು ಕಾಮೆಂಟ್ ಮಾಡಿದ್ದಾರೆ.

    Recommended Video

    Fake! Fake!! ಇದು ನಾನಲ್ಲ ಹುಷಾರಾಗಿರಿ ಎಂದ ಸೋನು ಸೂದ್ | Filmibeat Kannada
    ಮಾರಿ ಸೆಲ್ವರಾಜ್ ನಿರ್ದೇಶನ

    ಮಾರಿ ಸೆಲ್ವರಾಜ್ ನಿರ್ದೇಶನ

    ಹಳ್ಳಿಯತೆರೆಯ ಮೇಲೆ ಕಾಣುತ್ತಿರುವ ಕತೆ ಒಂದಾದರೆ ಆ ಕತೆ ಹೇಳುತ್ತಿರುವ ಕತೆಗಳು ಹಲವು. ಇದು 'ಕರ್ಣನ್' ಸಿನಿಮದ ವಿಶೇಷ. ನೊಂದವರ ಕತೆ, ತುಳಿಕ್ಕೊಳಪಟ್ಟವರ ಕತೆ, ತುಳಿದವರ ಕತೆ, ಗುರುತು ಹುಡುಕಿಕೊಳ್ಳಲು ಹೋರಾಡುತ್ತಿರುವವರ ಕತೆ, ಮಹಾಭಾರತದ ಕತೆ, ಇತಿಹಾಸ ಮಾಡಿರುವ ಅನ್ಯಾಯದ ಹೀಗೆ ಹಲವು ಕತೆಗಳನ್ನು ಒಂದು ಸಣ್ಣ ಹಳ್ಳಿಯ ಜನರ ಕತೆಯಲ್ಲಿ ಹುದುಗಿಸಿ 'ಕರ್ಣನ್' ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸೆಲ್ವರಾಜ್. (ಪೂರ್ತಿ ವಿಮರ್ಶೆ ಫಿಲ್ಮಿಬೀಟ್ ಕನ್ನಡದಲ್ಲಿ ಪ್ರಕಟವಾಗಿದೆ ಓದಿ..)

    Karnan movie review: ರೂಪಕಗಳ ಚೌಕಟ್ಟಿನೊಳಗೆ ಹೋರಾಟದ ಕಥನKarnan movie review: ರೂಪಕಗಳ ಚೌಕಟ್ಟಿನೊಳಗೆ ಹೋರಾಟದ ಕಥನ

    English summary
    Kannada Actress Malavika Avinash Praise Tamil Actor Dhanush for his best performance in Karnan movie.
    Tuesday, May 18, 2021, 13:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X